• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಒಡೆಯರ್ ಪುಣ್ಯಾರಾಧನೆ

|

ಮೈಸೂರು, ಡಿ.1 : ಯದುವಂಶದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪ್ರಥಮ ವರ್ಷದ ಪುಣ್ಯಾರಾಧನೆ ಇಂದು ಅಂಬಾವಿಲಾಸ ಅರಮನೆ ಮತ್ತು ಒಡೆಯರ್ ಸಮಾಧಿ ಇರುವ ಮಧುವನದಲ್ಲಿ ನಡೆಯಿತು. ಎರಡು ಕಡೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಅರಮನೆಯ ಕಲ್ಯಾಣಮಂಟಪದಲ್ಲಿ ಸೋಮವಾರ ಮುಂಜಾನೆಯಿಂದಲೇ ಪುಣ್ಯಾರಾಧನೆಯ ವಿಧಿವಿಧಾನಗಳು ಆರಂಭಗೊಂಡವು. ಅರಮನೆಯ ಎಲ್ಲ ದೇವಾಲಯಗಳ ಪುರೋಹಿತರು, ಆಗಮಿಕರು ಇವುಗಳನ ನೇತೃತ್ವ ವಹಿಸಿದ್ದರು.

ಮಧ್ಯಾಹ್ನ 12 ಗಂಟೆಗೆ ಒಡೆಯರ್ ಅಂತ್ಯ ಸಂಸ್ಕಾರ ನೆರವೇರಿಸಿದ್ದ ಕಾಂತರಾಜೇ ಅರಸ್ ಅರಮನೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕ ಮಾಡಿದರು. ನಂತರ ವಿವಿಧ ಮಠ ವಿವಿಧ ಮಠಗಳ ಗುರುಗಳ ಪಾದಪೂಜೆ ಮಾಡಿದರು. ಮೂರು ದಿನಗಳಿಂದ ನಡೆಯುತ್ತಿದ್ದ ಪುಣ್ಯಾರಾಧನೆಯ ಕಾರ್ಯಕ್ರಮಗಳು ಇಂತು ಅಂತ್ಯಗೊಂಡಿದ್ದು, ರಾಣಿ ಪ್ರಮೋದಾ ದೇವಿ ಅವರು ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. [ಅಳಿವಿನ ಅಂಚಿನಲ್ಲಿ ಮೈಸೂರಿನ ಆಳರಸರ ಮಧುವನ]

ಒಡೆಯರ್ ಅವರ ಪತ್ನಿ ಪ್ರಮೋದಾದೇವಿ ಒಡೆಯರ್ ಅವರು ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಮಧುವನದಲ್ಲಿ ಒಡೆಯರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಒಡೆಯರ್ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಕಪ್ಪು ಗ್ರಾನೈಟ್ ಬಳಸಿ ಒಡೆಯರ್ ಸಮಾಧಿಯನ್ನು ನಿರ್ಮಿಸಲಾಗಿದೆ. [ಒಡೆಯರಿಗೆ ಚಿತ್ರನಮನ]

ಸಾರ್ವಜನಿಕರಿಗೆ ಅನ್ನ ಸಂತರ್ಪಣೆ : ಕೋಟೆ ಆಂಜನೇಯ ದೇವಸ್ಥಾನ ಬಳಿ ಹಾಗೂ ಒಡೆಯರ್ ಅವರ ಸಮಾಧಿ ಇರುವ ಸ್ಥಳ ಮಧುವನದ ಬಳಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳ ಹಿನ್ನಲೆಯಲ್ಲಿ ಇಂದು ಅರಮನೆಗೆ ಸಾರ್ವನಿಕರ ಪ್ರವೇಶ ನಿಷೇಧಿಸಲಾಗಿತ್ತು.

ಸರ್ಕಾರದ ಪರವಾಗಿ ಗೃಹ ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಕೆಎಸ್‌ಸಿಎ ಕಾರ್ಯದರ್ಶಿ ಬಿಜ್ರೇಶ್ ಪಟೇಲ್ ಮುಂತಾದವರು ಇಂದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕಳೆದ ವರ್ಷದ ಡಿಸೆಂಬರ್ 10ರಂದು ಬೆಂಗಳೂರಿನಲ್ಲಿ ವಿಧಿವಶರಾಗಿದ್ದರು. ಹಿಂದೂ ಪಂಚಾಗದ ಪ್ರಕಾರ ಮೂರು ದಿನಗಳ ಹಿಂದೆ ಪುಣ್ಯಾರಾಧನೆ ಕಾರ್ಯಕ್ರಮಗಳನ್ನು ಅರಮನೆಯಲ್ಲಿ ಆರಂಭಿಸಲಾಗಿತ್ತು. ಇಂದು ಅದು ಮುಕ್ತಾಯಗೊಂಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The first death anniversary of Srikantadatta Narasimharaja Wadiyar was observed at the Mysuru Palace on Monday. Wadiyar died in Bengaluru on December 10, 2013 and the royal family began the rituals associated with the death anniversary on Saturday per the Hindu calendar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more