• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಅನಿರೀಕ್ಷಿತ ಮಳೆ; ಶುಭಸೂಚನೆ ಅಂದ್ರು ಸಿದ್ದರಾಮಯ್ಯ

By ಮೈಸೂರು ಪ್ರತಿನಿಧಿ
|

ಮೈಸೂರು, ಫೆಬ್ರವರಿ 18; ಮೈಸೂರಿನಲ್ಲಿ ಅನಿರೀಕ್ಷಿತವಾಗಿ ಮಳೆ ಬಂದಿದೆ. ಬೆಳಗ್ಗೆಯಿಂದಲೂ ಸುಡು ಬಿಸಿಲ ವಾತಾವರಣವಿತ್ತು. ಸಂಜೆ ವೇಳೆಗೆ ಇದ್ದಕ್ಕಿದ್ದಂತೆ ಮಳೆಯಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಮಳೆ ಬಂದಿದ್ದು, ದೊಡ್ಡಮ್ಮತಾಯಿ ನೂತನ ದೇವಾಲಯ ಉದ್ಘಾಟನೆಯೂ ನಡೆದಿದೆ.

ಗುರುವಾರ ಸಂಜೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೊಣಚಿಕೊಪ್ಪಲು ಬಡಾವಣೆಯಲ್ಲಿ ನಿರ್ಮಿಸಿರುವ ಶ್ರೀ ದೊಡ್ಡ ತಾಯಮ್ಮ ದೇವಾಲಯ ಉದ್ಘಾಟನೆ ಮಾಡಿದರು. ಈ ಸಮಯದಲ್ಲಿಯೇ ಮಳೆ ಬಂತು. ಆಗ ಮಾತನಾಡಿದ ಸಿದ್ದರಾಮಯ್ಯ, "ಇದು ಮಳೆಗಾಲದ ಮಳೆಯಲ್ಲ, ಆದರೂ ಮಳೆ ಬಂದಿದೆ. ಇದಕ್ಕೆ ಅಡ್ಡ ಮಳೆ ಎನ್ನುತ್ತಾರೆ" ಎಂದರು.

ಕರ್ನಾಟಕದ 16 ಜಿಲ್ಲೆಗಳಲ್ಲಿ ಫೆಬ್ರವರಿ 18 ರಿಂದ 20ರವರೆಗೆ ಮಳೆ

"ಮುಂಗಾರಿಗೂ ಮುಂಚೆಯೇ ಮಳೆ ಬಂದಿರುವುದು ಶುಭ ಸೂಚನೆ. ದೊಡ್ಡಮ್ಮತಾಯಿ ಎಲ್ಲರಿಗೂ ಶುಭವನ್ನು ಉಂಟು ಮಾಡಲಿ" ಎಂದು ಸಿದ್ದರಾಮಯ್ಯ ಹೇಳಿದರು. ಚಿತ್ರದುರ್ಗದ ವಿವಿಧ ತಾಲೂಕುಗಳಲ್ಲಿಯೂ ಇಂದು ಸಂಜೆ ಮಳೆಯಾಗಿದೆ.

11 ತಿಂಗಳ ಬಳಿಕ ತೆರೆದ ನಂಜುಂಡೇಶ್ವರ ದಾಸೋಹ ಭವನ

"ದೇವನೊಬ್ಬ ನಾಮ ಹಲವು. ದೇವರು ಎಲ್ಲರಿಗೂ ಒಂದೇ. ದೇವರು ಒಬ್ಬನೇ, ನಾವುಗಳು ಬೇರೆ ಬೇರೆ ಹೆಸರಿನಿಂದ ಕರೆಯುತ್ತೇವೆ ಅಷ್ಟೇ. ದೇವರ ದೃಷ್ಟಿಯಲ್ಲಿ ನಾವು ಸ್ವಾರ್ಥಿಗಳಾಗಬಾರದು. ದೇವರನ್ನು ನಾವು ನಿಸ್ವಾರ್ಥದಿಂದ ಪೂಜೆ ಮಾಡ್ಬೇಕು" ಎಂದು ಸಿದ್ದರಾಮಯ್ಯ ಹೇಳಿದರು.

ಹೊನ್ನಾವರ: ಶ್ರೀಧರರು ಭೇಟಿ ನೀಡಿದ್ದ ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವಾಲಯ

"ನನ್ನೊಬ್ಬನಿಗೆ ಒಳ್ಳೆದು ಮಾಡು ಅಂತಾ ದೇವರಲ್ಲಿ ಕೇಳಿಕೊಂಡರೆ ಆಗಲ್ಲ. ಎಲ್ಲರಿಗೂ ಒಳಿತು ಮಾಡು ಅಂದರೆ ಮಾತ್ರ ಖಂಡಿತ ಒಳ್ಳೇದು ಮಾಡುತ್ತೆ" ಎಂದರು.

ಶ್ರೀ ದೊಡ್ಡ ತಾಯಮ್ಮ ದೇವಾಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕರಾದ ನಾಗೇಂದ್ರ, ಮಾಜಿ ಶಾಸಕರಾದ ಸೋಮಶೇಖರ್, ವಾಸು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಬಿಜೆ ವಿಜಯ್ ಕುಮಾರ್, ಕಾಂಗ್ರೆಸ್ ಮುಖಂಡ ಹರೀಶ್ ಗೌಡ ಮುಂತಾದವರಿದ್ದರು.

English summary
Unexpected rain in Mysuru city during temple inauguration by opposition leader Siddaramaiah on February 18, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X