• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾಲ ಬಾಧೆ ತಾಳಲಾರದೆ ಮೈಸೂರಿನಲ್ಲಿ ರೈತ ಆತ್ಮಹತ್ಯೆ

By ಮೈಸೂರು ಪ್ರತಿನಿಧಿ
|

ಮೈಸೂರು, ಮೇ 13: ಸಾಲ ಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಗಡಿ ಭಾಗ ಕೊಪ್ಪದಲ್ಲಿ ನಡೆದಿದೆ.

ಮೃತ ರೈತ ಸುರೇಶ್(45) ಎಂಬುವವರು ಹುಣಸೂರು ತಾಲ್ಲೂಕಿನ ಚಿಕ್ಕಹೆಜ್ಜೂರು ಗ್ರಾಮದ ನಿವಾಸಿಯಾಗಿದ್ದು, ಇವರು ಬೆಳೆ ಸಾಲ ಮಾಡಿಕೊಂಡಿದ್ದರು. ಅಲ್ಲದೇ HDFC ಬ್ಯಾಂಕ್ ನಲ್ಲಿ ಟ್ರ್ಯಾಕ್ಟರ್​ ಸಾಲವಾಗಿ 5 ಲಕ್ಷ ರುಪಾಯಿ ಪಡೆದುಕೊಂಡಿದ್ದರು.

ಮೈಮುಲ್ ನೌಕರರ ನೇಮಕಾತಿಯಲ್ಲಿ ಭಾರೀ ಅವ್ಯವಹಾರ; ಸಾ.ರಾ. ಮಹೇಶ್‌ ಆರೋಪ

ಲಾಕ್‌ ಡೌನ್‌ ಕಾರಣದಿಂದ ಬೆಳೆಗೆ ಸೂಕ್ತ ಬೆಲೆ ಸಿಗದೆ, ಟ್ರ್ಯಾಕ್ಟರ್ ಸಾಲದ ಕಂತನ್ನೂ ಕಟ್ಟಲಾಗಿರಲಿಲ್ಲ. ಸಾಲ ಪಾವತಿಸುವಂತೆ ಬ್ಯಾಂಕ್ ನವರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಸಾಲ ತೀರಿಸಲು ಸಂಬಂಧಿಕರ ಬಳಿ ಕೈ ಸಾಲ ಪಡೆದುಕೊಂಡು ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋಗಿದ್ದರು.

ಮನೆಯಲ್ಲಿ ಹೇಳಿ ಹೋದ ನಂತರ ರೈತ ಮತ್ತೆ ಸಿಕ್ಕಿದ್ದು ಹೆಣವಾಗಿ. ಮಂಗಳವಾರ ಮೈಸೂರು-ಕೊಡಗು ಗಡಿ ಭಾಗ ಕೊಪ್ಪದ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಬೈಲಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Farmer committing suicide by a Loan crisis, has taken place in Koppa, the border of Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X