ವೃದ್ಧನ ತಲೆ ಕಡಿದು ಪೊಲೀಸ್ ಠಾಣೆಗೆ ತಂದ ಯುವಕರು
ಮೈಸೂರು, ಸೆಪ್ಟೆಂಬರ್ 21: ವೃದ್ಧರೊಬ್ಬರ ತಲೆಯನ್ನು ಕಡಿದ ಯುವಕರು ಬಳಿಕ ಆ ರುಂಡವನ್ನು ಹಿಡಿದು ಪೊಲೀಸ್ ಠಾಣೆಗೆ ತಂದ ಘಟನೆ ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ನಡೆದಿದೆ.
ನರಸೀಪುರದ ಚಾಮನಹಳ್ಳಿ ಗ್ರಾಮದಲ್ಲಿ ಈ ಕೊಲೆ ನಡೆದಿದೆ. ಕೆಂಪೇಗೌಡ (65) ಕೊಲೆಯಾದ ವೃದ್ಧ. ಚೇತನ್ ಹಾಗೂ ಮಧು ಎಂಬವರು ಕೆಂಪೇಗೌಡರನ್ನು ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿದ್ದಾರೆ.

ಕೆಂಪೇಗೌಡರು ಮಲಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಯುವಕರು ವೃದ್ಧನ ತಲೆಯನ್ನು ತುಂಡರಿಸಿದ್ದಾರೆ. ಅಷ್ಟೇ ಅಲ್ಲದೆ ರುಂಡವನ್ನು ಹಿಡಿದುಕೊಂಡು ಬನ್ನೂರು ಪೊಲೀಸ್ ಠಾಣೆಗೆ ಬಂದಿದ್ದಾರೆ. ಸದ್ಯ ಪೊಲೀಸರು ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications