ಹಳೆ ದ್ವೇಷ ಮುಂದುವರಿಸಿದ ಸಹೋದರರು, ದಂಪತಿ ಮೇಲೆ ಹಲ್ಲೆ
ಮೈಸೂರು, ಡಿಸೆಂಬರ್, 19: ಹಳೇ ದ್ವೇಷವನ್ನು ಮುಂದಿಟ್ಟುಕೊಂಡು ಸಹೋದರರಿಬ್ಬರು ದಂಪತಿ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ಕಿತ್ತುಕೊಂಡು ಹೋದ ಘಟನೆ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಬೀಚನಹಳ್ಳಿ ಗ್ರಾಮದ ಲೊಕೇಶ್ ಮತ್ತು ಹೇಮಲತಾ ದಂಪತಿ ಹಲ್ಲೆಗೊಳಗಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಪಂಚಾಯತಿ ಚುನಾವಣೆಯಲ್ಲಿ ಸಹಾಯ ಮಾಡಿಲ್ಲ ಎಂಬ ಕಾರಣಕ್ಕೆ ಸುಬ್ರಹ್ಮಣ್ಯ(ಸುಬ್ಬು) ಮತ್ತು ಮುರುಗೇಶ್ ಎಂಬ ಸಹೋದರರು ದಂಪತಿ ಮೇಲೆ ಹಲ್ಲೆ ಮಾಡಿದ್ದಾರೆ.[ಮೈಸೂರು: ಕರವೇ ಜಿಲ್ಲಾಧ್ಯಕ್ಷ ಸೇರಿ ಮೂವರು ಗಡಿಪಾರು]

ಘಟನೆ ವಿವರ:
ಸುಬ್ರಹ್ಮಣ್ಯ ಮತ್ತು ಮುರುಗೇಶ್ ರ ತಾಯಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬೀಚನಹಳ್ಳಿ ಗ್ರಾಮದಿಂದ ಸ್ಪರ್ದಿಸಿದ್ದರು. ಆಗ ಲೊಕೇಶ್ ಮತ್ತು ಹೇಮಲತಾ ದಂಪತಿ ಚುನಾವಣೆಯಲ್ಲಿ ಅವರ ಪರ ಕೆಲಸ ಮಾಡಿರಲಿಲ್ಲ. ಈ ವಿಚಾರದಲ್ಲಿ ವೈಷಮ್ಯ ಹೊಂದಿದ್ದ ಸಹೋದರರು ಸೇಡು ತೀರಿಸಿಕೊಳ್ಳಲು ಸಮಯ ಕಾಯುತ್ತಿದ್ದರು.
ಈ ವಿಷಯದಲ್ಲಿ ದಂಪತಿ ಮತ್ತು ಸಹೋದರರ ನಡುವೆ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಗಲಾಟೆ ನಡೆದಿತ್ತು. ಗುರುವಾರ ಲೋಕೇಶ್ ದಂಪತಿ ಬೀಚನಹಳ್ಳಿ ಬಸ್ ನಿಲ್ದಾಣದ ಸಮೀಪ ತೆರಳುತ್ತಿದ್ದರು. ಆಗ ಆರೋಪಿಗಳಾದ ಸುಬ್ರಹ್ಮಣ್ಯ ಮತ್ತು ಮುರುಗೇಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.[ವಾಮಾಚಾರದ ಯುದ್ಧದಲ್ಲಿ ಮೊದಲು ಮಗ ಸತ್ತ, ನಂತರ ಅಪ್ಪನೂ ಹೆಣವಾದ]
ಜೊತೆಗೆ ಅವರ ಬಳಿ ಇದ್ದ ಹಣ ಮತ್ತು ವಿನ್ನದ ಸರ ಕಿತ್ತುಕೊಂಡು ಹೋಗಿದ್ದಾರೆ. ಈ ಸಂಬಂಧ ಬೀಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುರುಗೇಶ್ ಬ್ಯಾಂಕ್ ದರೋಡೆ ಪ್ರಕರಣದಲ್ಲಿ, ಸುಬ್ರಹ್ಮಣ್ಯ ಗ್ರಾಮದ ಜನರಿಗೆ ಹಲ್ಲೆ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಪ್ರಕರಣಗಳು ದಾಖಲಾಗಿದ್ದವು.


Click it and Unblock the Notifications
