ಚುಂಚನಕಟ್ಟೆಯ ಕಾವೇರಿ ನದಿಯಲ್ಲಿ ಈಜಲು ಹೋದವರು ನೀರು ಪಾಲು

ಮೈಸೂರು, ಜನವರಿ 19 : ಕೆ. ಆರ್ ನಗರ ತಾಲ್ಲೂಕಿನ ಚುಂಚನಕಟ್ಟೆಯ ಕಾವೇರಿ ನದಿಯಲ್ಲಿ ಈಜಲು ತೆರಳಿದ ಇಬ್ಬರು ಬಾಲಕರು ಮುಳುಗಿ ಮೃತಪಟ್ಟಿದ್ದಾರೆ.‌

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಆನೆ ಕನ್ನಾಂಬಾಡಿ ಗ್ರಾಮದ ಹರ್ಷ (11) ಹಾಗೂ ಕೆ.ಆರ್.ನಗರ ತಾಲ್ಲೂಕಿನ ಮನುಗನಹಳ್ಳಿ ಸಮೀಪದ ಬೆಟ್ಟಹಳ್ಳಿ ಗ್ರಾಮದ ಲೋಕೇಶ್ (16) ಮೃತ ಬಾಲಕರು.

ಕಳೆದೆರಡು ದಿನಗಳ ಹಿಂದೆ ಚುಂಚನಕಟ್ಟೆ ಜಾತ್ರಾ ಮಹೋತ್ಸವ ಜರುಗಿತ್ತು. ಈ ನಡುವೆ ಬಾಲಕರಿಬ್ಬರು ಶ್ರೀ ರಾಮದೇವಾಲಯಕ್ಕೆ ಪೂಜೆಗೆ ಆಗಮಿಸಿದ್ದರು. ಈ ವೇಳೆ ನದಿಯಲ್ಲಿ ಇಬ್ಬರು ಬಾಲಕರು ನದಿಯಲ್ಲಿ ಈಜಲು ಹೋಗಿ ನೀರುಪಾಲಾಗಿದ್ದಾರೆ.

Two boys dies while Swimming at chunchankatte kaveri river

ಸ್ಥಳೀಯರು ನದಿಯಿಂದ ಶವಗಳನ್ನು ಹೊರತೆಗೆದಿದ್ದು ಕೆ.ಆರ್.ನಗರ ಸಾರ್ವಜನಿಕ ಆಸ್ವತ್ರೆಗಳಿಗೆ ಶವಗಳನ್ನು ರವಾನೆ ಮಾಡಲಾಯಿತು. ಸ್ಥಳಕ್ಕೆ ಕೆ.ಆರ್ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಬಾಲಕರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+