ಯಶಸ್ವಿಯಾಗಿ ಮುಕ್ತಾಯಗೊಂಡ ಜಂಬೂ ಸವಾರಿ
ಮೈಸೂರು, ಅ.10 : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಐತಿಹಾಸಿಕ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಅವರು ಅದ್ಧೂರಿ ಚಾಲನೆ ನೀಡಿದರು. ಸೋಮವಾರ ಸಂಜೆ 4.15ರ ಸುಮಾರಿಗೆ ಜಂಬೂ ಸವಾರಿ ಆರಂಭವಾಗಿ, ಸಂಜೆ 6.35 ಸುಮಾರಿಗೆ ಬನ್ನಿ ಮಂಟಪ ತಲುಪಿತು.
ಅರಮನೆ ಆವರಣದಲ್ಲಿ ಅಂಬಾರಿಯಲ್ಲಿದ್ದ ತಾಯಿ ಚಾಮುಂಡೇಶ್ವರಿದೇವಿ ವಿಗ್ರಹ ಸಹಿತ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ 403 ನೇ ಜಂಬೂ ಸವಾರಿಗೆ ಚಾಲನೆ ನೀಡಿದರು. ಮೈಸೂರು ಮೇಯರ್ ರಾಜೇಶ್ವರಿ, ನಗರ ಪೊಲೀಸ್ ಆಯುಕ್ತ ಸಲೀಂ ಮುಂತಾದವರು ಸಿಎಂ ಜೊತೆ ಉಪಸ್ಥಿತರಿದ್ದರು.

ಜಂಬೂಸವಾರಿಗೆ ಚಾಲನೆ ಸಿಗುತ್ತಿದ್ದಂತೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಗಜರಾಜ ಅರ್ಜುನ ಅರಮನೆಯಿಂದ ಬನ್ನಿಮಂಟಪ ಕಡೆ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಲು ಪ್ರಾರಂಭಿಸಿದ. ಸರಳಾ ಮತ್ತು ವರಲಕ್ಷ್ಮಿ ಆನೆಗಳು ಅರ್ಜುನನ ಅಕ್ಕ-ಪಕ್ಕದಲ್ಲಿವೆ.
ಅರಮನೆಯಿಂದ ಹೊರಟಿರುವ ಜಂಬೂ ಸವಾರಿ ಕೆ.ಆರ್. ವೃತ್ತ, ಸಯ್ಯಾಜಿ ರಾವ್ ಸರ್ಕಲ್, ಆರ್.ಎಂ.ಸಿ. ಸರ್ಕಲ್ ಮೂಲಕ ಬನ್ನಿ ಮಂಟಪ ಪ್ರವೇಶಿಸಬೇಕಾಗಿದೆ. ಇದಕ್ಕೆ ಸುಮಾರು ಮೂರು ಗಂಟೆಗಳ ಅವಧಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ದೇಶ-ವಿದೇಶದ ಲಕ್ಷಾಂತರ ಭಕ್ತರು ಜಂಬೂ ಸವಾರಿಗೆ ಸಾಕ್ಷಿಯಾಗಿದ್ದಾರೆ.
ಇದಕ್ಕೂ ಮೊದಲು ಮಧ್ಯಾಹ್ನ 1.15ರ ಸುಮಾರಿಗೆ ಸಿಎಂ ಸಿದ್ದರಾಮಯ್ಯ ಮೈಸೂರಿನ ಅರಮನೆ ಆವರಣಕ್ಕೆ ಆಗಮಿಸಿದರು. ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ದಸರಾ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಈ ವರ್ಷ ಒಳ್ಳೆಯ ಮಳೆಯಾಗಿದ್ದು ಉತ್ತಮ ಬೆಳೆಯಾಗುವ ನಿರೀಕ್ಷೆಯಿದೆ. ನಾಡಿನ ಸಮೃದ್ದಿಗಾಗಿ ಮತ್ತು ನಾಡಿನ ಜನರಿಗೆ ಉತ್ತಮ ಆರೋಗ್ಯ ನೀಡಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಸ್ತಬ್ಧ ಚಿತ್ರಗಳು : ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ 30 ಜಿಲ್ಲೆಗಳು ಮತ್ತು 12 ಇಲಾಖೆಗಳ ಸುಮಾರು 42ಕ್ಕೂ ಸ್ತಬ್ಧ ಚಿತ್ರಗಳು ಭಾಗವಹಿಸಿವೆ. ಪ್ರತಿ ಜಿಲ್ಲೆಯ ಪ್ರವಾಸಿ ಕ್ಷೇತ್ರಗಳ ಕಾಲಾಕೃತಿಯನ್ನು ಸ್ತಬ್ಧ ಚಿತ್ರಗಳು ಒಳಗೊಂಡಿವೆ.
ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಸ್ತಬ್ಧ ಚಿತ್ರ, ಬಿಜಾಪುರ ಜಿಲ್ಲೆಯ ಆದಿಲ್ ಶಾ ದರ್ಬಾರ್, ಕೋಲಾರದಿಂದ ಮಾಸ್ತಿ ಅವರ ಸ್ತಬ್ಧ ಚಿತ್ರ, ಬಳ್ಳಾರಿಯ ವಿಜಯನಗರದ ಸ್ತಬ್ಧ ಚಿತ್ರ, ಧಾರವಾಡದ ಹೆಸರಾಂತ ಕವಿಗಳನ್ನು ಸಾರುವ ಚಿತ್ರ, ಉಡುಪಿಯ ಶಿವರಾಮಕಾರಂತರ ಚಿತ್ರ, ಚಾಮರಾಜನಗರದ ಪ್ರಕೃತಿ ಸೊಗಸು ಸಾರುವ ಸ್ತಬ್ಧ ಚಿತ್ರಗಳು ಸೇರಿದಂತೆ 30 ಜಿಲ್ಲೆಗಳ ಸ್ತಬ್ಧ ಚಿತ್ರಗಳು ಪಾಲ್ಗೊಂಡಿವೆ.
ಕರ್ನಾಟಕದ ಜಾನಪದ ಪ್ರಕಾರಗಳನ್ನು ಪರಿಚಯ ಮಾಡಿಸುವ ಸುಮಾರು 60 ಕಲಾತಂಡಗಳಿಂದ ಡೊಳ್ಳು ಕುಣಿತ, ಕಂಸಾಳೆ ಕುಣಿತ, ಬೀಸೂ ಕಂಸಾಳೆ ಕುಣಿತ, ಗೊಂಬೆ ಕುಣಿತ, ವೀರಗಾಸೆ, ಗೀಗೀಪದ, ತಮಟೆ ನಗಾರಿ ಮತ್ತು ಲಂಬಾಣಿ ನೃತ್ಯಗಳ ತಂಡಗಳು ಪ್ರದರ್ಶನಗೊಳ್ಳುತ್ತಿವೆ.
ಎಡಕ್ಕೆ ವಾಲಿದ ಅಂಬಾರಿ : ಅರಮನೆಯಿಂದ ಹೊರಟ ಜಂಬೂ ಸವಾರಿ ಕೆ.ಆರ್.ಸರ್ಕಲ್ ಬಳಿ ಎಡಕ್ಕೆ ವಾಲಿತು. ಅರ್ಜುನನ ಪಕ್ಕದಲ್ಲಿದ್ದ ಸರಳಾ ಆನೆಯ ಸಹಾಯದಿಂದ ಮಾವುತರು ಅಂಬಾರಿಯನ್ನು ಹಗ್ಗದಿಂದ ಬಿಗಿದು ಸರಿಪಡಿಸಿದರು. ನಂತರ ಆರ್ಯವೇದಿಕ್ ಕಾಲೇಜ್ ಸಮೀಪ ಬಂದಾಗ ಮತ್ತೊಮ್ಮೆ ಅಂಬಾರಿ ವಾಲಿತು. ಇದನ್ನು ಗಮನಿಸಿದ ಮಾವುತರು ತಕ್ಷಣ ಅದನ್ನು ಸರಿಪಡಿಸಿದರು.
ಈ ಘಟನೆಯನ್ನು ಹೊರತು ಪಡಿಸಿದರೆ ವಿಶ್ವಪ್ರಸಿದ್ಧ ಐತಿಹಾಸಿಕ ಜಂಬೂ ಸವಾರಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಸಂಜೆ 6.35ರ ಸುಮಾರಿಗೆ ಅಂಬಾರಿ ಹೊತ್ತ ಅರ್ಜುನ ಬನ್ನಿ ಮಂಟಪ ಪ್ರವೇಶಿಸಿದ. ಆ ಮೂಲಕ 10 ದಿನಗಳ ದಸರಾ ಉತ್ಸವ ಮುಕ್ತಾಯವಾಯಿತು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications