ಉಪ ಚುನಾವಣೆಯಲ್ಲಿ 'ಮತ' ಖಚಿತ ಪಡಿಸಲು ಅತ್ಯಾಧುನಿಕ ಮತಯಂತ್ರ
ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು ವಿವಿಪ್ಯಾಟ್ (VVPAT- Voter-Verifiable Paper Audit Trail) ಗಳಿರುವ ಇವಿಎಂಗಳನ್ನು ಬಳಸಲು ಚುನಾವಣಾ ಆಯೋಗ ಸಿದ್ದತೆ ಮಾಡಿಕೊಂಡಿದೆ.
ಮೈಸೂರು, ಏಪ್ರಿಲ್ 2: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ (ಇವಿಎಂ) ಗಳ ಸಾಚಾತನದ ಬಗ್ಗೆ ಪ್ರಶ್ನೆಗಳು ಉದ್ಭವಿಸಿದ್ದವು. ಅದರಲ್ಲೂ ಮುಖ್ಯವಾಗಿ ಎಎಪಿ ಪಕ್ಷ ಇವಿಎಂಗಳನ್ನು ಬಿಜೆಪಿ ತಿರುಚುತ್ತಿದೆ ಎಂಬ ಗಂಬೀರ ಆರೋಪಗಳನ್ನು ಮಾಡಿತ್ತು. ಈ ಎಲ್ಲಾ ಅನುಮಾನಗಳಿಗೆ ತೆರೆ ಎಳೆಯಲು ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಮೊಲಬಾರಿಗೆ ಅತ್ಯಾಧುನಿಕ ಇವಿಎಂಗಳನ್ನು ಬಳಸಲಾಗುತ್ತಿದೆ.
ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು ವಿವಿಪ್ಯಾಟ್ (VVPAT- Voter-Verifiable Paper Audit Trail) ಗಳಿರುವ ಇವಿಎಂಗಳನ್ನು ಬಳಸಲು ಚುನಾವಣಾ ಆಯೋಗ ಸಿದ್ದತೆ ಮಾಡಿಕೊಂಡಿದೆ. [ಜೆಡಿಎಸ್ ಮುಖಂಡರ ಮನೆಗೆ ಸಿದ್ದರಾಮಯ್ಯ ಭೇಟಿನೀಡಿದ್ದೇಕೆ?]

ಏನಿದು ವಿವಿಪ್ಯಾಟ್ ಇವಿಎಂ?
ವಿವಿಪ್ಯಾಟ್ ಗಳನ್ನು ಇವಿಎಂಗಳಿಗೆ ಜೋಡಿಸಲಾಗಿರುತ್ತದೆ. ಮತದಾರರು ಇವಿಎಂನಲ್ಲಿ ಮತದಾನ ಮಾಡಿದ ತಕ್ಷಣ ಎಟಿಎಂ ಮೆಷೀನ್ ಗಳಲ್ಲಿ ರಸೀದಿ ಪ್ರಿಂಟ್ ಬರುವ ಹಾಗೆ ವಿವಿಪ್ಯಾಟ್ ನಿಂದ ಸ್ಲಿಪ್ ಹೊರ ಬರುತ್ತದೆ. ಈ ಸ್ಲಿಪ್ ನಲ್ಲಿ ಅಭ್ಯರ್ಥಿಗಳ ಕ್ರಮ ಸಂಖ್ಯೆ, ಹೆಸರು ಮತ್ತು ಗುರುತು ಇರುತ್ತದೆ. ಇದನ್ನು ನೋಡಿ ನಿಮ್ಮ ಮತ ಸರಿಯಾಗಿ ಬಿದ್ದಿದೆಯೇ ಎಂದು ಖಚಿತಪಡಿಸಿಕೊಳ್ಳಬಹುದು.
ಈ ಸ್ಲಿಪ್ ನ್ನು ನೇರವಾಗಿ ಮತದಾರರ ಕೈಗೆ ನೀಡುವುದಿಲ್ಲ. ಬದಲಿಗೆ ಮೆಷೀನಿನಲ್ಲೇ ಗ್ಲಾಸಿನ ಒಳಗಿನಿಂದ ನೋಡಬಹುದು. ಮತದಾರರು 7 ಸೆಕೆಂಡುಗಳ ಒಳಗಾಗಿ ಈ ಸ್ಲಿಪ್ ನೋಡಬೇಕು. ನಂತರ ಸ್ಲಿಪ್ ಕಟ್ ಆಗಿ ಬಾಕ್ಸಿನೊಳಕ್ಕೆ ಬೀಳುತ್ತದೆ. ಬಾಕ್ಸಿನೊಳಗೆ ಬೀಳುತ್ತಿದ್ದಂತೆ ಬೀಪ್ ಶಬ್ದವನ್ನು ಮೆಷೀನ್ ಹೊರಡಿಸುತ್ತದೆ. [ಜಗ್ಗೇಶ್ ಪ್ರಚಾರಕ್ಕೂ ಮೊದಲು ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ]
ಈ ಹಿಂದೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಪ್ರಯೋಗಾರ್ಥ ಈ ವಿವಿಪ್ಯಾಟ್ ಮೆಷೀನ್ ಗಳನ್ನು ಬಳಸಲಾಗಿತ್ತು. ಇದೇ ಮೊದಲ ಬಾರಿಗೆ ಉಪಚುನಾವಣೆಯಲ್ಲಿ ಪೂರ್ಣಮಟ್ಟದಲ್ಲಿ ವಿವಿಪ್ಯಾಟ್ ಗಳನ್ನು ಬಳಸಲಾಗುತ್ತಿದೆ.
ಈ ವಿವಿಪ್ಯಾಟ್ ಗಳು ಬ್ಯಾಟರಿ ಚಾಲಿತವಾಗಿದ್ದು ಏಕಕಾಲಕ್ಕೆ 1500 ಸ್ಲಿಪ್ ಗಳನ್ನು ಮುದ್ರಿಸುವ ಸಾಮರ್ಥ್ಯ ಹೊಂದಿವೆ. ಸಾಮಾನ್ಯಾಗಿ ಯಾವುದೇ ಮತ ಕ್ಷೇತ್ರದಲ್ಲಿ 1200-1300 ಕ್ಕಿಂತ ಹೆಚ್ಚಿನ ಮತದಾರರು ಇರುವುದಿಲ್ಲ. ಒಂದೊಮ್ಮೆ ಪೇಪರ್ ಮುಗಿದರೂ ಮತ್ತೆ ಲೋಡ್ ಮಾಡುವ ಅವಕಾಶ ಇದೆ.
ಇದೇ ಮೊದಲ ಬಾರಿಗೆ ವಿವಪ್ಯಾಟ್ ಗಳನ್ನು ಬಳಸಿಕೊಳ್ಳುತ್ತಿರುವುದರಿಂದ ಹೆಚ್ಚಿನ ವಿವಿಪ್ಯಾಟ್ ಗಳನ್ನು ತರಿಸಿಕೊಳ್ಳಲಾಗಿದೆ. ನಂಜನಗೂಡಿನಲ್ಲಿ 236 ಮತದಾನ ಕೇಂದ್ರಗಳಿದ್ದು, ಜಿಲ್ಲಾಡಳಿತ 355 ವಿವಿಪ್ಯಾಟ್ ಗಳನ್ನು ಮುಂಜಾಗ್ರತಾ ಕ್ರಮವಾಗಿ ತರಿಸಿಕೊಂಡಿದೆ.












Click it and Unblock the Notifications