ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಈ ಬಾರಿ ದಸರಾ ಪ್ರಮುಖ ಆಕರ್ಷಣೆ ಟೆಂಟ್ ಟೂರಿಸಂ

By ಮೈಸೂರು ಪ್ರತಿನಿಧಿ
|
Google Oneindia Kannada News

Recommended Video

Mysore Dasara 2018 : ಈ ಬಾರಿಯ ಪ್ರಮುಖ ಆಕರ್ಷಣೆ ಟೆಂಟ್ ಟೂರಿಸಂ | Oneindia Kannada

ಮೈಸೂರು, ಜುಲೈ.02: ಮೈಸೂರು ಎಂದ ಕೂಡಲೇ ಎಲ್ಲರ ಮನಸ್ಸಿನಲ್ಲಿ ಮೂಡುವುದು ದಸರಾ ಸಂಭ್ರಮಾಚರಣೆ. ಪ್ರತಿ ಬಾರಿಯೂ ಈ ನಾಡಹಬ್ಬಕ್ಕೆ ಇನ್ನೇನು ಕೆಲವೇ ದಿನ ಬಾಕಿ ಉಳಿದಿದೆ ಎನ್ನುವಾಗ ಸಿದ್ಧತೆ ಆರಂಭಿಸಲಾಗುತ್ತದೆ.

ಕೊನೆಗೆ ಅರೆಬರೆ ಕಾಮಗಾರಿಯೊಂದಿಗೆ ಎಲ್ಲದಕ್ಕೂ ತೇಪೆ ಹಚ್ಚಲಾಗುತ್ತದೆ. ಆದರೆ ಈ ಬಾರಿ ಇನ್ನೂ 2 ತಿಂಗಳಿದೆ ಎನ್ನುವಾಗಲೇ ದಸರಾ ಆಚರಣೆಗೆ ಸಿದ್ಧತೆ ಆರಂಭಿಸಲಾಗಿದೆ.

ಕೋಟಿಗಟ್ಟಲೆ ವ್ಯಾಪಾರ, ಈ ಬಾರಿ ಮೈಸೂರು ದಸರಾದಲ್ಲಿ ಬಂಪರ್ಕೋಟಿಗಟ್ಟಲೆ ವ್ಯಾಪಾರ, ಈ ಬಾರಿ ಮೈಸೂರು ದಸರಾದಲ್ಲಿ ಬಂಪರ್

ಈ ಬಾರಿಯ ದಸರಾ ಆಚರಣೆಯ ಹೈಲೈಟ್ಸ್ ಎಂದರೆ ಟೆಂಟ್ ಟೂರಿಸಂ. ನಗರದ ಲಲಿತಮಹಲ್ ಮುಂಭಾಗದ ವಿಶಾಲವಾದ ಸುಮಾರು 50 ಎಕರೆ ಜಾಗದಲ್ಲಿ ಟೆಂಟ್ ಗಳನ್ನು ನಿರ್ಮಿಸಿ, ಅಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳುವ ವ್ಯವಸ್ಥೆ ಈ ಟೂರಿಸಂ ಪ್ರಸ್ತಾಪನೆಯ ಮುಖ್ಯ ಅಂಶವಾಗಿದೆ.

This time the highlights of Dasara is tent tourism

ಪ್ರವಾಸೋದ್ಯಮ ಇಲಾಖೆ ಈ ಸಂಬಂಧ ಪ್ರಸ್ತಾಪವನ್ನು ಸರ್ಕಾರಕ್ಕೆ ಕಳುಹಿಸಿದೆ.

ಮೂಲಗಳ ಪ್ರಕಾರ ಗುಜರಾತಿನ ಕುಚ್ ಜಿಲ್ಲೆಯಲ್ಲಿ 'ರಣ್ ಉತ್ಸವ'ದ ಸಂದರ್ಭದಲ್ಲಿ ಟೆಂಟ್ ಟೂರಿಸಂ ಅಭಿವೃದ್ಧಿಗೊಂಡಿದೆ. ಅಲ್ಲಿನ ಮಾದರಿಯನ್ನು ಇಲ್ಲಿ ಅಳವಡಿಸಿಕೊಳ್ಳಲಾಗುವುದು. ಎಂದು ಇಲಾಖೆ ತಿಳಿಸಿದೆ.

"ಈ ಬಾರಿ ಟೆಂಟ್ ನಲ್ಲಿ ನೆಲೆಸುವುದು ಪ್ರವಾಸಿಗರಿಗೆ ಹೊಸ ಅನುಭವ ನೀಡಲಿದೆ. ಮೈಸೂರಿಗೆ ಆಗಮಿಸುವ ಪ್ರವಾಸಿಗರು ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡುತ್ತಿಲ್ಲ. ಪ್ರವಾಸಿಗರು ಇಲ್ಲಿಯೇ ವಾಸ್ತವ್ಯ ಹೂಡಿದರೆ ಆದಾಯ ಹೆಚ್ಚುತ್ತದೆ.

ಟೆಂಟ್ ಟೂರಿಸಂ ಪ್ರವಾಸಿಗರು ಒಂದೆರಡು ದಿನ ಮೈಸೂರಿನಲ್ಲಿಯೇ ಉಳಿಯುವಂತೆ ಆಕರ್ಷಿಸಲಿದೆ. ದಿನದ 24 ಗಂಟೆಯೂ ಇಲ್ಲಿ ಹೋಟೆಲ್‌ ಸೇವೆ ಇರಲಿದೆ. ಟೆಂಟ್ ಟೂರಿಸಂ ಯೋಜನೆಯನ್ನು ಜಂಗಲ್‌ ಲಾಡ್ಜಸ್ ಮತ್ತು ರೆಸಾರ್ಟ್ ಗೆ ವಹಿಸಲಾಗುವುದು" ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಹೇಳಿದ್ದಾರೆ.

English summary
This time the highlights of Dasara celebration is tent tourism. As well as Dasara preparation has been prepared two months before.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X