• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಚ್‌. ಡಿ. ಕೋಟೆಯಲ್ಲಿ 3 ದಿನದಿಂದ ಸ್ವ್ಯಾಬ್ ಪರೀಕ್ಷೆ ಇಲ್ಲ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 09; ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೊರೊನಾ ಕಪಿಮುಷ್ಟಿಯಲ್ಲಿ ಜಿಲ್ಲೆ ನಲುಗುತ್ತಿದ್ದು, ಜನರು ಹೈರಾಣಾಗಿದ್ದಾರೆ. ಶನಿವಾರ ಜಿಲ್ಲೆಯಲ್ಲಿ 2,294 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.

ಜಿಲ್ಲೆಯ ಪ್ರಮುಖ ತಾಲೂಕು ಹೆಚ್. ಡಿ. ಕೋಟೆಯಲ್ಲಿ ಕಳೆದ ಮೂರು ದಿನದಿಂದ ಸ್ವ್ಯಾಬ್ ಟೆಸ್ಟ್ ಮಾಡಿಲ್ಲ. ಇದರಿಂದಾಗಿ ಜನರು ಆತಂಕಗೊಂಡಿದ್ದು, ನಮ್ಮ ಸ್ವ್ಯಾಬ್ ಪರೀಕ್ಷೆ ಮಾಡಿ ಎಂದು ಆಸ್ಪತ್ರೆ ಸಿಬ್ಬಂದಿಗಳ ಕಾಲಿಗೆ ಬೀಳುತ್ತಿದ್ದಾರೆ. ನಾವು ಸತ್ತ ಮೇಲೆ ಪರೀಕ್ಷೆ ಮಾಡಬೇಡಿ. ನಾವು ಬದುಕ್ಕಿದ್ದಾಗಲೇ ಮಾಡಿ ಒತ್ತಾಯಿಸುತ್ತಿದ್ದಾರೆ.

ಮೈಸೂರು: ಕೋವಿಡ್‌ನಿಂದ ಮೃತಪಟ್ಟ ಶವ ಕೊಡಲು ಹಣಕ್ಕೆ ಬೇಡಿಕೆ; ದಾಂಧಲೆಮೈಸೂರು: ಕೋವಿಡ್‌ನಿಂದ ಮೃತಪಟ್ಟ ಶವ ಕೊಡಲು ಹಣಕ್ಕೆ ಬೇಡಿಕೆ; ದಾಂಧಲೆ

ಹೆಚ್. ಡಿ. ಕೋಟೆಯ ತಾಲೂಕು ಆಡಳಿತದ ನಿರ್ಲಕ್ಷ್ಯತೆಯ ದೃಶ್ಯವನ್ನು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ತಾಲೂಕಿನಲ್ಲಿ ಸೋಂಕು ಹೆಚ್ಚಾಗಿದ್ದು, ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ಮೈಸೂರು; ಸೋಂಕಿತರಿಂದ ಹೋಂ ಐಸೋಲೇಷನ್ ನಿಯಮ ಉಲ್ಲಂಘನೆ ಮೈಸೂರು; ಸೋಂಕಿತರಿಂದ ಹೋಂ ಐಸೋಲೇಷನ್ ನಿಯಮ ಉಲ್ಲಂಘನೆ

ಆರ್‌ಟಿಪಿಸಿಆರ್ ಪರೀಕ್ಷೆ ವಿಳಂಬ ಆಗುತ್ತಿರುವುದು ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸೂಕ್ತ ಟೆಸ್ಟಿಂಗ್ ಕಿಟ್ ಸರಬರಾಜು ಆಗಿಲ್ಲ ಎಂದು ಜನರು ದೂರಿದ್ದಾರೆ.

ಹೌರಾ-ಮೈಸೂರು ವಿಶೇಷ ಬೇಸಿಗೆ ಎಕ್ಸ್‌ಪ್ರೆಸ್ ರೈಲು ಸೇವೆ ವಿಸ್ತರಣೆ ಹೌರಾ-ಮೈಸೂರು ವಿಶೇಷ ಬೇಸಿಗೆ ಎಕ್ಸ್‌ಪ್ರೆಸ್ ರೈಲು ಸೇವೆ ವಿಸ್ತರಣೆ

ಇಲಾಖೆ ನಿರ್ಲಕ್ಷ್ಯ?; ಹೆಚ್. ಡಿ. ಕೋಟೆ ತಾಲೂಕಿಗೆ ಟೆಸ್ಟಿಂಗ್ ಕಿಟ್ ಸರಬರಾಜು ಆಗಿಲ್ಲ. ಪ್ರತಿನಿತ್ಯ ಪರೀಕ್ಷೆಗೆ ಎಂದು ಸಾಲುಗಟ್ಟಿ ಕ್ಯೂ ನಿಂತಿದ್ದರೂ ಪರೀಕ್ಷೆ ಮಾಡಲಾಗುತ್ತಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

English summary
People alleged that swab tests stopped in Mysuru district Heggadadevana Kote taluk hospital from past 3 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X