ಸುಮಲತಾ ಗೆಲುವಿಗಾಗಿ 4 ಕಿ.ಮೀ ಉರುಳುಸೇವೆ ಮಾಡಿದ ಅಭಿಮಾನಿ
ಮೈಸೂರು, ಮಾರ್ಚ್ 30 : ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿಲು ಅಂಬಿ ಅಭಿಮಾನಿ ಓರ್ವ ಉರುಳು ಸೇವೆ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೈಸೂರಿನ ಕೆ.ಆರ್.ನಗರದ ಅಂಬಿ ಅಭಿಮಾನಿ ಬೆನಕ ಪ್ರಸಾದ್ ಸುಮಲತಾ ಗೆಲುವಿಗಾಗಿ ಉರುಳುಸೇವೆ ಮಾಡಿದ್ದಾರೆ. ಇಂದು ಬೆಳಗ್ಗೆ ಕೆ.ಆರ್. ನಗರದ ಆಂಜನೇಯ ಸ್ವಾಮಿ ದೇವಾಲಯದಿಂದ ಹಳೆ ಎಡತೋರೆ ಆಂಜನೇಯ ದೇವಾಲಯದವರೆಗೆ ಉರುಳು ಸೇವೆ ಮಾಡಿದ್ದಾರೆ.
ಸುಮಾರು ನಾಲ್ಕು ಕಿಲೋಮೀಟರ್ ದೂರ ಉರುಳು ಸೇವೆ ಮಾಡಿದ ಯುವಕ ಬೆನಕ ಪ್ರಸಾದ್, ದೇವರಿಗೆ ಸುಮಲತಾ ಗೆಲುವಿಗಾಗಿ ವಿಶೇಷ ಪೂಜೆ ಸಹ ಸಲ್ಲಿಸಿದ್ದಾರೆ. ನಾನು ಅಂಬಿ ಅಭಿಮಾನಿ ಸುಮಲತಾ ಮೇಡಂಗಾಗಿ ಉರುಳು ಸೇವೆ ಮಾಡ್ತಿದ್ದೀನಿ.

ಅವರ ಗೆಲುವಿಗಾಗಿ ಪ್ರಚಾರ ಸಹ ಮಾಡುತ್ತಿದ್ದೇನೆ ಎಂದರು. ಅಲ್ಲದೇ ಉರುಳು ಸೇವೆ ಮಾಡುತ್ತಿರುವ ಯುವಕನಿಗೆ ಹಲವು ಅಂಬಿ ಅಭಿಮಾನಿಗಳು ಇದೇ ವೇಳೆ ಸಾಥ್ ನೀಡಿದರು.












Click it and Unblock the Notifications