ಕೆ.ಆರ್.ನಗರ; ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು
ಮೈಸೂರು, ಡಿಸೆಂಬರ್ 4: ಇಲ್ಲಿಗೆ ಸಮೀಪದ ಕೆ.ಆರ್.ನಗರ ತಾಲ್ಲೂಕಿನ ಕುಪ್ಪಳ್ಳಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಗೌತಮ್ (14) ಎಂದು ಗುರುತಿಸಲಾಗಿದ್ದು, ಈತ ಕುಪ್ಪಳ್ಳಿ ವಸತಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ. ಮೃತನು ಎಂದಿನಂತೆ ಮೊನ್ನೆ ರಾತ್ರಿ ಊಟ ಮಾಡಿ ಮಲಗಿದ್ದಾನೆ. ಆದರೆ, ಬೆಳಗ್ಗೆ ಏಳು ಗಂಟೆಯಾದರೂ ಎದ್ದಿಲ್ಲ. ಈತನ ಸಹಪಾಠಿಗಳು ಎಬ್ಬಿಸಲು ಹೋದಾಗಲೇ ಆತ ಮೃತ ಪಟ್ಟಿರುವುದು ಬೆಳಕಿಗೆ ಬಂದಿದೆ.

ಗೌತಮ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು, ತಮ್ಮ ಮಗನ ಸಾವಿನ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕೆ.ಆರ್ ನಗರ ತಹಸೀಲ್ದಾರ್ ಮಂಜುಳ, ಇನ್ಸ್ಪೆಕ್ಟರ್ ಪಿ.ಕೆ.ರಾಜು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೌತಮ್ ಸಾವಿನ ಬಗ್ಗೆ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications