ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏನೂ ಸಾಧಿಸೋಕೆ ಆಗಲ್ಲ, ಯಾರೂ ಲೈಕ್ ಮಾಡಲ್ಲ ಎಂದು ವಿದ್ಯಾರ್ಥಿನಿ ಆತ್ಮಹತ್ಯೆ

|
Google Oneindia Kannada News

ಮೈಸೂರು, ಜನವರಿ 13: "ನನ್ನ ತಲೆಗೆ ವಿದ್ಯೆ ಹತ್ತುತ್ತಿಲ್ಲ. ನಾನೊಬ್ಬಳು ಡಲ್ ಸ್ಟೂಡೆಂಟ್" ಎಂದು ಫೇಸ್ ಬುಕ್ ಲೈವ್ ಮಾಡಿ ವಿದ್ಯಾರ್ಥಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಕಾವೇರಿ ನಗರದಲ್ಲಿ ನಡೆದಿದೆ.

ಯಾಸ್ಮಿನ್ ತಾಜ್(18) ಸಾವಿಗೀಡಾದಾಕೆ. ನಗರದ ಜೆಎಸ್ಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಾಮರ್ಸ್ ವ್ಯಾಸಂಗ ಮಾಡುತ್ತಿದ್ದಳು. ಜನವರಿ 10ರಂದು ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಮಾತ್ರೆ ಸೇವಿಸಿದ್ದಾಳೆ. ನಂತರ ಆಕೆಯನ್ನು ಸ್ಥಳೀಯ ಸೇಂಟ್ ಜೋಸೆಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಮಧ್ಯರಾತ್ರಿ ವೇಳೆ ಯಾಸ್ಮಿನ್ ಮೃತಪಟ್ಟಿದ್ದಾಳೆ.

ನಮ್ಮ ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನನಮ್ಮ ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ

ಯಾಸ್ಮಿನ್ ತಾಜ್ ಓದುವುದರಲ್ಲಿ ಹಿಂದಿದ್ದಳು. ಆದ್ದರಿಂದ ಜೀವನದಲ್ಲಿ ತುಂಬಾ ನೊಂದಿದ್ದಳು. "ನನಗೆ ಓದುವುದಕ್ಕೆ ಆಸೆ. ಆದ್ರೆ ನನ್ನ ತಲೆಗೆ ಓದು ಹತ್ತಲಿಲ್ಲ, ನಾನೊಬ್ಬಳು ಡಲ್ ಸ್ಟೂಡೆಂಟ್. ಮುಂದೆ ಸಿಂಗರ್ ಅಥವಾ ಲಾಯರ್ ಆಗುವ ಆಸೆ ಇತ್ತು. ದೇವರು ನನ್ನ ಆಸೆಯನ್ನು ಪೂರೈಸಲಿಲ್ಲ. ಜೊತೆಗೆ ನನಗೆ ಆರೋಗ್ಯದ ಸಮಸ್ಯೆ ಕೂಡ ಇದೆ. ಆದ್ದರಿಂದ ಕಾಲೇಜಿಗೆ ಸರಿಯಾಗಿ ಹೋಗಿಲ್ಲ. ಅದಕ್ಕೆ ಪ್ರಿಪರೇಟರಿ ಪರೀಕ್ಷೆಗೆ ಹಾಲ್ ಟಿಕೆಟ್ ಸಿಗಲಿಲ್ಲ. ಜೀವನಲ್ಲಿ ನಾನು ಏನೂ ಸಾಧಿಸಲಿಲ್ಲ" ಎಂದು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Student committed suicide at Facebook live in Mysuru

 ಪಾಂಡವಪುರದಲ್ಲಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಪಾಂಡವಪುರದಲ್ಲಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

"ಬದುಕಿದ್ದಾಗ ನನ್ನನ್ನು ಯಾರೂ ಲೈಕ್ ಮಾಡಿಲ್ಲ. ಸಾಯುವ ವಿಡಿಯೋನಾದ್ರೂ ಲೈಕ್ ಮಾಡಿ ಶೇರ್ ಮಾಡಿ. ಯಾಸ್ಮಿನ್ ಆತ್ಮಹತ್ಯೆ ಮಾಡಿಕೊಂಡಳು ಅಂತ ಪ್ರಪಂಚಕ್ಕೆ ತಿಳಿಸಬೇಕು" ಎಂದು ಆತ್ಮಹತ್ಯೆಗೂ ಮುನ್ನ ಫೇಸ್ ಬುಕ್ ಲೈವ್ ನಲ್ಲಿ ತೆಲುಗಿನಲ್ಲಿ ಯಾಸ್ಮಿನ್ ಹೇಳಿದ್ದಾಳೆ.

 ತನ್ನ ಕಿಡ್ನಿ ಮಾರಲು ಹೋಗಿ ಮೋಸ: ಮಹಿಳೆ ಆತ್ಮಹತ್ಯೆ ತನ್ನ ಕಿಡ್ನಿ ಮಾರಲು ಹೋಗಿ ಮೋಸ: ಮಹಿಳೆ ಆತ್ಮಹತ್ಯೆ

ಘಟನೆ ಕುರಿತಂತೆ ಮೃತ ಯಾಸ್ಮಿನ್ ತಾಜ್ ತಂದೆ ಅಬ್ದುಲ್ ಲತೀಫ್ ಮೇಟಗಳ್ಳಿ ಠಾಣೆಗೆ ದೂರು ನೀಡಿದ್ದಾರೆ.

English summary
18 years old girl committed suicide in Mysuru as facebook live, reason is only she is not studying properly for her second puc exams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X