ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದುವೆಯಾಗುವಂತೆ ಯುವಕನ ಕಿರುಕುಳ, ವಿದ್ಯಾರ್ಥಿನಿ ಆತ್ಮಹತ್ಯೆ

|
Google Oneindia Kannada News

ಮೈಸೂರು, ಮೇ 13 : ಯುವಕನ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿಯೊಬ್ಬಳು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತಪಟ್ಟ ವಿದ್ಯಾರ್ಥಿನಿ ದ್ವಿತೀಯ ಪಿಯುಸಿನಲ್ಲಿ ನಂಜನಗೂಡು ತಾಲೂಕಿಗೆ ಪ್ರಥಮ ಸ್ಥಾನಗಳಿಸಿದ್ದಳು.

ಮೃತಪಟ್ಟ ವಿದ್ಯಾರ್ಥಿಯನ್ನು ಪವಿತ್ರಾ (18) ಎಂದು ಗುರುತಿಸಲಾಗಿದೆ. ಪವಿತ್ರಾ ನಂಜನಗೂಡು ತಾಲೂಕಿನ ಚನ್ನಪಟ್ಟಣದ ನಿವಾಸಿಯಾಗಿದ್ದರು. ಗ್ರಾಮದ ಸುರೇಶ್ ಎಂಬಾತ ಪವಿತ್ರಾ ಅವರನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ.

ಬಸ್ಸಿನಲ್ಲಿ ಕಾಲೇಜಿಗೆ ಹೋಗುವಾಗ ಬರುವಾಗ ಮದುವೆಯಾಗುವಂತೆ ಸುರೇಶ್ ಪೀಡಿಸುತ್ತಿದ್ದ. ಮದುವೆಯಾಗದಿದ್ದರೆ ಮಾನಹಾನ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ನೊಂದ ಪವಿತ್ರ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದ ಹೈಲೈಟ್ಸ್ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದ ಹೈಲೈಟ್ಸ್

pavitra

ಪವಿತ್ರಾ ಕುಟುಂಬದವರಿಗೆ ಸುರೇಶ್ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದರು. ಆದ್ದರಿಂದ, ಪೋಷಕರು ಹುಲ್ಲವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪವಿತ್ರಾ ಅವರು ಕೆಲವು ದಿನಗ ಹಿಂದೆ ದ್ವಿತೀಯ ಪಿಯುಸಿ ಪಾಸ್ ಆಗಿದ್ದರು. ದ್ವಿತೀಯ ಪಿಯುಸಿನಲ್ಲಿ ನಂಜನಗೂಡು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರು.

ಕಾರು ಡಿಕ್ಕಿ, ಇಬ್ಬರು ಸಾವು : ಬಳ್ಳಾರಿ ಜಿಲ್ಲೆಯ ಶಿವಪುರ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹನಸಿ ಸುರೇಶ್(28), ಮರಿಸ್ವಾಮಪ್ಪ (48) ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

English summary
2nd PUC student Pavitra committed suicide after youth harassment to marry him. Case registered in Hullahalli police station,Nanjanagud.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X