ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರು ಒದಗಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ: ಮಹದೇವಪ್ಪ

ಮೈಸೂರಿನಲ್ಲಿ ನೀರಿನ ಕೊರತೆ ಉಂಟಾದರೆ ಜಿಲ್ಲಾಡಳಿತದ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 17 : ಇನ್ಮುಂದೆ ಮೈಸೂರಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ ಅಂತಾ ಕಂಪ್ಲೆಂಟ್ ಬಂದ್ರೆ ನಾನು ಸುಮ್ಮನಿರೋಲ್ಲ ನೋಡಿ. ಮೊದಲು ಅಧಿಕಾರಿಗಳು ಇದಕ್ಕೆ ಇತಿಶ್ರೀ ಹಾಡಿ. ಇಲ್ಲವಾದರೆ ಪರಿಣಾಮ ನೆಟ್ಟಗಿರೋಲ್ಲ. ಹೀಗಂತ ತರಾಟೆಗೆ ತೆಗೆದುಕೊಂಡದ್ದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ.

ಜಿಲ್ಲೆಯ ಬರ ಕಾಮಗಾರಿ ಕುರಿತಂತೆ ಪ್ರಗತಿ ಪರಿಶೀಲನೆ ನಡೆಸುವ ವೇಳೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳನ್ನು ಅವರು ಬೆವರಿಳಿಸಿದರು. ಇದೇ ವೇಳೆ ತಾಕೀತು ಮಾಡಿದ ಸಚಿವರು, ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ 31 ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಇವುಗಳಲ್ಲಿ 14 ಪೂರ್ಣಗೊಂಡಿದೆ. 15 ಪ್ರಗತಿಯಲ್ಲಿರುತ್ತದೆ ಹಾಗೂ 2 ಪ್ರಾರಂಭಿಕ ಹಂತದಲ್ಲಿರುತ್ತದೆ. ಪ್ರಗತಿಯಲ್ಲಿರುವ 15 ಕಾಮಗಾರಿಗಳನ್ನು ಡಿಸೆಂಬರ್ 2017 ರೊಳಗಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.
ಜನಸಾಮಾನ್ಯರಿಗೆ ಕುಡಿಯುವ ನೀರು, ನರೆಗಾ ಯೋಜನೆಯಡಿ ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವಿನಲ್ಲಿ ಕೊರತೆ ಉಂಟಾಗದಂತೆ ನೋಡಿಕೊಂಡು ಉತ್ತಮ ರೀತಿಯಲ್ಲಿ ಬರ ಪರಿಸ್ಥಿತಿಯನ್ನು ನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.[ಮೈಸೂರು ಬಾಲಕನ ಸಾವಿಗೆ ಆರ್ ಬಿಐ ಕಾರಣ : ಎಎಪಿ]

Strict action on district administration for water problem: Mahadevappa

"ಕೃಷಿ ಇಲಾಖೆಯಿಂದ ಅವಧಿ ಮುಗಿದಿರುವ ಬಿತ್ತನೆ ಬೀಜ ವಿತರಣೆಯ ಬಗ್ಗೆ ಪತ್ರಿಕಾ ವರದಿಗಳಿಂದ ತಿಳಿದುಬಂತು. ಈ ರೀತಿ ವಿತರಣೆಯಾದಲ್ಲಿ ರೈತರಿಗೆ ಇಲಾಖೆಯ ಮೇಲೆ ಯಾವ ರೀತಿಯ ಮನೋಭಾವ ಬೆಳೆಯುತ್ತದೆ ಎಂಬುದನ್ನು ಚಿಂತಿಸಬೇಕು. ಈ ಬಗ್ಗೆ ಸಂಬಂಧಿಸಿದವರಿಗೆ ನೊಟೀಸ್ ನೀಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ತಾಕೀತು..
'ಯಾವುದೇ ಮೂಲಗಳಿಂದ ನೀರು ದೊರಕದಿದ್ದಾಗ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ನೀರು ಸರಬರಾಜು ಮಾಡುವ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು.[ಮೈಸೂರಿನಲ್ಲಿ ಬೆಂಕಿಯುಗುಳುವ ಭೂಮಿ: ಭೂವಿಜ್ಞಾನಿಗಳಿಗೇ ಸವಾಲು!]

Strict action on district administration for water problem: Mahadevappa

ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವ ಗ್ರಾಮಗಳಲ್ಲಿ ಫಲಕವನ್ನು ಅಳವಡಿಸಿ ಎಷ್ಟು ಟ್ರಿಪ್ ನೀರು ನೀಡಲಾಗುತ್ತಿದೆ ಹಾಗೂ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆಯನ್ನು ಅನಾವರಣಗೊಳಿಸಿ. ನೀರನ್ನು ಟ್ಯಾಂಕರ್ ಮೂಲಕ ತಲುಪಿಸಿದ ನಂತರ ಗ್ರಾಮದ ಸಾರ್ವಜನಿಕರಿಂದ ಸಹಿ ಪಡೆದುಕೊಳ್ಳಿ ಇದರಿಂದ ಪಾರದರ್ಶಕತೆಯನ್ನು ಹೆಚ್ಚಿಸಬಹುದು' ಎಂದರು.[ಬಲಮುರಿಯಲ್ಲೂ ಸೊರಗಿದ್ದಾಳೆ ಕಾವೇರಿ!]

ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗೆ ಕಳವಳ:
ರೈತರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಏಪ್ರಿಲ್ 2016 ರಿಂದ ಮಾರ್ಚ್ 2017 ರವರೆಗೆ 74 ಪ್ರಕರಣಗಳು ವರದಿಯಾಗಿತ್ತು. 46 ಅರ್ಹ ಪ್ರಕರಣಗಳಾಗಿದ್ದು, 15 ಪ್ರಕರಣ ವಜಾಗೊಳಿಸಲಾಗಿದೆ. 13 ಪ್ರಕರಣಗಳು ಬಾಕಿ ಇರುತ್ತದೆ. ಈಗಾಗಲೇ 37 ಪ್ರಕರಣಗಳಿಗೆ 5 ಲಕ್ಷ ರೂ. ಪರಿಹಾರ ಹಾಗೂ 33 ಪ್ರಕರಣಗಳಿಗೆ ರೂ. 2,000 ಪಿಂಚಣಿ ಮಂಜೂರು ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ಒದಗಿಸಿದರು.

English summary
I will take strict action on district administration, if any person resides in mysuru face water problem, H.C. Mahedevappa district in charge minister Mysuru, warns district administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X