ಮೈಸೂರು : ಬಲ್ಲಹಳ್ಳಿ ಬಡಾವಣೆ ಯೋಜನೆಗೆ ಅನುಮೋದನೆ
ಮೈಸೂರು, ಜ. 23: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಉದ್ದೇಶಿತ ಬಲ್ಲಹಳ್ಳಿ ವಸತಿ ಬಡಾವಣೆ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಉದ್ದೇಶಿತ ಬಲ್ಲಹಳ್ಳಿ ವಸತಿ ಬಡಾವಣೆಯ ಸಂಕ್ಷಿಪ್ತ ವಿವರ ಈ ಕೆಳಗಿನಂತಿದೆ.
- ಬಲ್ಲಹಳ್ಳಿ ಗ್ರಾಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 60 : 40 ರ ಅನುಪಾತದಲ್ಲಿ ಜಮೀನುಗಳನ್ನು ಸ್ವಾದೀನಪಡಿಸಿಕೊಂಡು ರೈತರಿಗೆ ಪರಿಹಾರಕ್ಕೆ ಬದಲಾಗಿ ಲಭ್ಯವಿರುವ ವಸತಿ ವಲಯದಲ್ಲಿ ಶೇ. 40ರಷ್ಟು ಸಂಪೂರ್ಣ ಅಭಿವೃದ್ಧಿ ಹೊಂದಿರುವ ನಿವೇಶನ ವಿಸ್ತೀರ್ಣವನ್ನು ನೀಡಲಾಗುವುದು.
- ಬಲ್ಲಹಳ್ಳಿ ಗ್ರಾಮದಲ್ಲಿ ವಸತಿ ಬಡಾವಣೆ ರಚಿಸಲು ಸುಮಾರು 484 ಎಕರೆ 24 ಗುಂಟೆ ವಿಸ್ತೀರ್ಣವನ್ನು ಗುರುತಿಸಿದೆ.
- ಈ ಯೋಜನೆಗಾಗಿ 258 ಕೋಟಿ ರು. ವೆಚ್ಚದ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದಕ್ಕೆ ಅನುಮೋದನೆ ದೊರೆತಿದೆ.
- ಉದ್ದೇಶಿತ ಬಡಾವಣೆಯಿಂದ ವಿವಿಧ ಅಳತೆಯ 6155 ನಿವೇಶನಗಳನ್ನು ರಚಿಸಿ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ.
- ಸುಮಾರು 18 ತಿಂಗಳುಗಳ ಒಳಗೆ ಬಡಾವಣೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ನಿವೇಶನ ಹಂಚುವುದು ಪ್ರಾಧಿಕಾರದ ಉದ್ದೇಶ.
- ಆರ್.ಟಿ.ನಗರ ಬಡಾವಣೆಯಿಂದ ಉದ್ದೇಶಿತ ಬಲ್ಲಹಳ್ಳಿ ವಸತಿ ಬಡಾವಣೆಗೆ ಸುಮಾರು 4. ಕಿ.ಮೀ. ಅಂತರವಿದೆ. ಹಾಲಿ ಇರುವ ಹೊರವರ್ತುಲ ರಸ್ತೆಯಿಂದ ಉದ್ದೇಶಿತ ಬಡಾವಣೆಗೆ 100 ಅಡಿ ಅಗಲದ ಜೋಡಿ ರಸ್ತೆ ಸಂಪರ್ಕ ಕಲ್ಪಿಸಬಹುದು.












Click it and Unblock the Notifications