• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುರು ಪೂರ್ಣಿಮೆಯಂದೇ ಗ್ರಹಣ; ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಪುನಸ್ಕಾರ

|
Google Oneindia Kannada News

Recommended Video

   Lunar Eclipse 2019 : ಚಂದ್ರಗ್ರಹಣದ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟ ಹಾಗು ನಂಜನಗೂಡಿನಲ್ಲಿ ವಿಶೇಷ ಪೂಜೆ

   ಮೈಸೂರು, ಜುಲೈ 16: ಗುರುಪೂರ್ಣಿಮೆಯಂದೇ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 3ರ ಸಮಯ ಹಾಗೂ 17ರ ನಸುಕಿನ ವೇಳೆಗೆ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲ ಹಾಗೂ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಗ್ರಹಣದ ಅಂಗವಾಗಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.

   ಜುಲೈ 17 ರಂದು ಭಾಗಶಃ ಚಂದ್ರಗ್ರಹಣ, ಭಾರತದಲ್ಲೂ ಕಾಣುತ್ತಾ?ಜುಲೈ 17 ರಂದು ಭಾಗಶಃ ಚಂದ್ರಗ್ರಹಣ, ಭಾರತದಲ್ಲೂ ಕಾಣುತ್ತಾ?

   ಇಂದು ಬೆಳಗಿನಿಂದ ದೇವರ ದರ್ಶನದ ಸಮಯದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಆದರೆ, ಮಧ್ಯಾಹ್ನ 3 ಗಂಟೆ ಬಳಿಕ ಬೆಟ್ಟದಲ್ಲಿ ದಾಸೋಹ ಇರುವುದಿಲ್ಲ. ರಾತ್ರಿ ಎಂದಿನಂತೆ 9 ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು. ನಾಳೆ ನಸುಕಿನ 3 ಗಂಟೆಯಿಂದ 4.45ರವರೆಗೆ ಪೂಜೆ ನಡೆಯಲಿದೆ. ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷದವರೆಗೆ ವಿಶೇಷ ಪೂಜೆ ನಡೆಯಲಿವೆ. ಬಳಿಕ ದೇಗುಲವನ್ನು ಶುದ್ಧಿಗೊಳಿಸಿ ಬೆಳಿಗ್ಗೆ 8 ಗಂಟೆಯಿಂದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

   ಹನ್ನೆರಡು ರಾಶಿಗಳ ಮೇಲೆ ಖಂಡಗ್ರಾಸ ಚಂದ್ರ ಗ್ರಹಣದ ಪ್ರಭಾವಹನ್ನೆರಡು ರಾಶಿಗಳ ಮೇಲೆ ಖಂಡಗ್ರಾಸ ಚಂದ್ರ ಗ್ರಹಣದ ಪ್ರಭಾವ

   ಮೈಸೂರಿನ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದಲ್ಲಿ ಮಂಗಳವಾರ ನಸುಕಿನ 4.30ರಿಂದ ರಾತ್ರಿ 9ರವರೆಗೆ ಎಂದಿನಂತೆ ಪೂಜೆ ಪುರಸ್ಕಾರಗಳು ನಡೆಯಲಿವೆ. ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರಲಿದೆ.

   ಮೈಸೂರಿನ ಮತ್ತಷ್ಟು ಪ್ರಮುಖ ದೇವಸ್ಥಾನಗಳಲ್ಲಿ ಗ್ರಹಣದ ಹಿನ್ನೆಲೆಯಲ್ಲಿ ಜಪ ತಪ ನಡೆಯಲಿದೆ. ದೇಗುಲದ ದರ್ಶನ, ಪೂಜೆಗಳ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ.

   English summary
   special pooja in Mysuru Chamundi hills and Nanjangudu temple due to lunar eclipse and guru purnima. No entry for temple after 9 PM today. Special pooja will be offered in Tomorrow morning at 3 AM.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X