ಮಾ. 27 ರಂದು ಗುಂಡ್ಲುಪೇಟೆಗೆ ಕೃಷ್ಣಾಗಮನ!
ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಅವರು ಮಾರ್ಚ್ 27 ರಂದು ಗುಂಡ್ಲುಪೇಟೆಗೆ ಉಪಚುನಾವಣೆ ಪ್ರಚಾರಕ್ಕಾಗಿ ಆಗಮಿಸಲಿದ್ದಾರೆ.
ಗುಂಡ್ಲುಪೇಟೆ, ಮಾರ್ಚ್ 24: ಮಹದೇವಪ್ರಸಾದ್ ಅವರ ನಿಧನದ ಬಳಿಕ ತೆರವಾದ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ಏಪ್ರಿಲ್ 9, ಭಾನುವಾರದಂದು ಚುನಾವಣೆ ನಡೆಯಲಿದ್ದು, ಉಭಯ ಪಕ್ಷಗಳೂ ಬಿರುಸಿನಿ ಪ್ರಚಾರ ನಡೆಸುತ್ತಿವೆ.
ಏಪ್ರಿಲ್ 13, ಗುರುವಾರದಂದು ಹೊರಬೀಳಲಿರುವ ಫಲಿತಾಂಶದಲ್ಲಿ ತಾನೇ ವಿಜಯ ಮಾಲೆಯನ್ನು ತೊಡಬೇಕೆಂಬ ಉದ್ದೇಶದಿಂದ ಬಿಜೆಪಿ ಹರಸಾಹಸ ಪಡುತ್ತಿದೆ. ಇದೀಗ ತನ್ನ ಅಭ್ಯರ್ಥಿ ನಿರಂಜನ್ ಕುಮಾರ್ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಗುಂಡ್ಲುಪೇಟೆಗೆ ಕರೆತರಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಅದಕ್ಕೆ ಮುಹೂರ್ತವನ್ನು ನಿಗದಿ ಮಾಡಿಕೊಂಡಿದೆ.[ನಂಜನಗೂಡು ಗೆಲುವಿಗೆ ಬಿಜೆಪಿ-ಕಾಂಗ್ರೆಸ್ ನಿಂದ ಜಾತಿ ಲೆಕ್ಕಾಚಾರ]

ಮಾ. 27 ರಂದು ಕೃಷ್ಣ ಕ್ಷೇತ್ರಕ್ಕೆ ಆಗಮಿಸಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಜತೆಗೆ ವಿವಿಧೆಡೆ ಪ್ರಚಾರ ಸಭೆಯನ್ನು ನಡೆಸಲಿದ್ದಾರೆ. ಎಸ್.ಎಂ.ಕೃಷ್ಣರೊಂದಿಗೆ ಬಿಜೆಪಿಯ ಪ್ರಭಾವಿ ನಾಯಕರ ದೊಡ್ಡ ದಂಡೇ ಆಗಮಿಸುವ ಸಾಧ್ಯತೆಯಿದೆ.
ಇನ್ನು ಮಾ.30ರಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಗಮಿಸಲಿದ್ದು, ಚುನಾವಣಾ ಪ್ರಚಾರಕ್ಕೆ ಧುಮುಕಲಿದ್ದಾರೆ.[ಕೃಷ್ಣ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ: ಯಡಿಯೂರಪ್ಪ]
ಅಂದು ಅವರು ಚಿಕ್ಕಾಟಿ, ಬರಗಿ, ಗರಗನಹಳ್ಳಿ, ಮಂಚಹಳ್ಳಿ, ಶೆಟ್ಟಹಳ್ಳಿ, ಹೊನ್ನಶೆಟ್ಟರಹುಂಡಿ, ತೆಂಕಲಹುಮಡಿ, ಹುಲಸಗುಂದಿ, ಮಲ್ಲಯ್ಯನಪುರ, ಕಲ್ಲಿಗೌಡನಹಳ್ಳಿ, ಕಲ್ಲಿಗೌನಹಳ್ಳಿ, ರಾಘವಾಪುರ, ಕಾಳನಹುಂಡಿ, ಹೊಕಣಪುರ, ಶ್ರೀಕಂಠಪುರ, ಹೊಸಪುರ, ಹೀರಾಕಟ್ಟಿ, ತೊರಹಳ್ಳಿ, ತೆರಕಣಾಂಬಿ, ಕುರುಬರ ಹುಂಡಿ, ಬಾಚಹಳ್ಳಿ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಲಿದ್ದಾರೆ.[ನಂಜನಗೂಡಿನಲ್ಲಿ ಲಿಂಗಾಯತ, ದಲಿತ ಮತಗಳ ಹಿಡಿತ ಯಾರಿಗೆ?]
ಕಾಂಗ್ರೆಸ್ ಪಕ್ಷದಿಂದ ಮಹದೇವ ಪ್ರಸಾದ್ ಅವರ ಪತ್ನಿ ಗೀತಾ ಮಹದೇವ ಪ್ರಸಾದ್ ಕಣಕ್ಕಿಳಿದಿದ್ದು, ಅನುಕಂಪದ ಆಧಾರದ ಮೇಲೆ ಮತದಾರ ಪ್ರಭು ಅವರತ್ತ ನೋಡುತ್ತಾನೆ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications