ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಪ್ರವಾಸಿಸ್ಥಳಗಳನ್ನು ನೋಡಲು ಒಂದೇ ಟಿಕೆಟ್

|
Google Oneindia Kannada News

ಮೈಸೂರು, ಸೆಪ್ಟೆಂಬರ್ 01 : ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಿಹಿ ಸುದ್ದಿ. ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಒಂದೇ ಟಿಕೆಟ್ ವ್ಯವಸ್ಥೆ ಜಾರಿಗೆ ಬರಲಿದೆ. ಆನ್‌ಲೈನ್ ಮೂಲಕ ನಗರಕ್ಕೆ ಭೇಟಿ ನೀಡುವ ಮೊದಲೇ ಟಿಕೆಟ್ ಬುಕ್ ಮಾಡಬಹುದಾಗಿದೆ.

ದಸರಾ ಅಂದ್ರೆ ಕನ್ನಡಮ್ಮನ ಪೂಜೆ, ಆದ್ರೆ ವೆಬ್ ಸೈಟ್ ನಲ್ಲಿ ಕನ್ನಡ ಕೇಳಬೇಡಿ!ದಸರಾ ಅಂದ್ರೆ ಕನ್ನಡಮ್ಮನ ಪೂಜೆ, ಆದ್ರೆ ವೆಬ್ ಸೈಟ್ ನಲ್ಲಿ ಕನ್ನಡ ಕೇಳಬೇಡಿ!

ಮೈಸೂರು ಅರಮನೆ, ಮೃಗಾಯಲಯ, ಕಾರಂಜಿ ಕೆರೆ, ಚಾಮುಂಡಿ ಬೆಟ್ಟ ಮತ್ತು ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್‌ಎಸ್ ಜಲಾಶಯವನ್ನು ವೀಕ್ಷಣೆ ಮಾಡಲು ಒಂದೇ ಟಿಕೆಟ್ ಜಾರಿಗೆ ತರಲಾಗುತ್ತದೆ.

 Single ticket to visit tourist spots in Mysuru

ಮೈಸೂರು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸುತ್ತಿವೆ. 2017ರ ದಸರಾ ಆರಂಭಕ್ಕೂ ಮುನ್ನ ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ.

2017ರ ದಸರಾ ಮುಗಿದ ಬಳಿಕ ಮೂರು ತಿಂಗಳ ಕಾಲ ಈ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಇದಕ್ಕೆ ಉತ್ತರ ಪ್ರತಿಕ್ರಿಯೆ ಸಿಕ್ಕರೆ ಮುಂದುವರೆಸಲು ಜಿಲ್ಲಾಡಳಿತ ನಿರ್ಧರಿಸಿದೆ. BookMyShow ಜೊತೆ ಜಿಲ್ಲಾಡಳಿತ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಮಾಡಲು ಒಪ್ಪಂದ ಮಾಡಿಕೊಂಡಿದೆ.

ದಸರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸೋಕೆ ಅರ್ಜಿ ಸಲ್ಲಿಸಿದಸರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸೋಕೆ ಅರ್ಜಿ ಸಲ್ಲಿಸಿ

ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗತ್ತಿದೆ. ದಸರಾ, ವಾರಾಂಂತ್ಯದಲ್ಲಿ ಹೆಚ್ಚಿನ ಜನರು ಆಗಮಿಸುತ್ತಾರೆ. ಅವರು ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಪ್ರತ್ಯೇಕ ಟಿಕೆಟ್ ಪಡೆಯಬೇಕಾಗಿದೆ. ಇದರಿಂದ ಸಮಯ ವ್ಯರ್ಥವಾಗುತ್ತಿದೆ. ಆದ್ದರಿಂದ, ಸಿಂಗಲ್ ಟಿಕೆಟ್ ಸಿಸ್ಟಮ್ ಅನ್ನು ಜಿಲ್ಲಾಡಳಿತ ಪರಿಚಯಿಸುತ್ತಿದೆ.

English summary
Mysuru district administration and the tourism department are all set to introduce a single ticket for selected tourist places. Visitors can book the tickets online much before their visit to the city. The authorities have shortlisted five places Mysuru Palace, Mysuru Zoo, Karanji Lake, Chamundi Hill and Krishnaraja Sagar to introduce a single ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X