ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವ ಸಮೂಹ ಹುಚ್ಚೆದ್ದು ಕುಣಿಯುವಂತೆ ಮಾಡಿದ ಬಾದಶಾ ಹಾಡು

|
Google Oneindia Kannada News

ಮೈಸೂರು, ಅಕ್ಟೋಬರ್. 14 : ಹಿಂದಿ ಗಾಯಕ ಬಾದಶಾ ತಂಡದವರು ನಡೆಸಿಕೊಟ್ಟ ಆಲ್ಬಂ ಸಂಗೀತ ನೆರೆದಿದ್ದವರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಮೈಸೂರು ದಸರಾ - ವಿಶೇಷ ಪುರವಣಿ

ಯುವ ದಸರಾ ಪಯುಕ್ತ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಎರಡನೇ ದಿನದ ಕಾರ್ಯಕ್ರಮದಲ್ಲಿ ಪ್ರಖ್ಯಾತ ಗಾಯಕರಾದ ಬಾದಶಾ, ಆಸ್ತಗಿಲ್ ತಂಡದ ಗಾಯನದ ಮೋಡಿ ಯುವ ಸಮೂಹ ಸಂಭ್ರಮದಲ್ಲಿ ಮುಳುಗೇಳುವಂತೆ ಮಾಡಿದೆ.

ಮೈಸೂರು ಯುವ ದಸರಾ: ಸೆಲೆಬ್ರಿಟಿಗಳು ಪಡೆಯುತ್ತಿರುವ ಸಂಭಾವನೆ ಎಷ್ಟು?ಮೈಸೂರು ಯುವ ದಸರಾ: ಸೆಲೆಬ್ರಿಟಿಗಳು ಪಡೆಯುತ್ತಿರುವ ಸಂಭಾವನೆ ಎಷ್ಟು?

ಲಗೋರಿ ತಂಡ ನಡೆಸಿಕೊಟ್ಟ ಬಹ್ಮ ನಿಂಗೆ ಜೋಡಿಸ್ತಿನಿ ಹೆಂಡ ಮುಟ್ಟಿದ್ ಕೈನಾ.., ದುನಿಯಾರೆ ದುನಿಯ.., ಕುಲದಲ್ಲಿ ಕೀಳಾವುದೋ ಹುಚ್ಚಪ್ಪ.., ತರವಲ್ಲ ತಂಗಿ ನಿನ್ನ ತಂಬೂರಿ ಪದ.., ಎಳ್ಕೊಳಕ್ಕೊಂದೂರು, ತಲೆಮ್ಯಾಗೆ ಒಂಚೂರು..' ಗೀತೆಗಳಿಗೆ ನೆರೆದಿದ್ದವರನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು.

Singer Badshah participated in the second day of the Yuva Dasara Programme

ನಾಗಮಂಗಲದ ಬಿಜಿಎಸ್ ಕಾಲೇಜು ತಂಡ ಬುದ್ಧ ಶರಣಂ ಗಚ್ಚಾಮಿ.., ಜೋಗಯ್ಯ ನೃತ್ಯ ಅಕಾಡೆಮಿಯು ಅಕ್ಕಯ್ಯ ನೋಡುಬಾರೆ ಚೆಲುವನಾ' ಎಂಬ ಗೀತೆಗಳಿಗೆ ನೃತ್ಯ ಪ್ರದರ್ಶಿಸಿ ನೆರೆದಿದ್ದವರ ಮನ ತಣಿಸಿದವು.

ಮೈಸೂರು ದಸರಾ: ವಿಜಯ್ ಪ್ರಕಾಶ್ ಹಾಡು, ಸ್ವರ್ಗ ಧರೆಗಿಳಿಸಿದ ರಾಗಿಣಿ ಮೈಸೂರು ದಸರಾ: ವಿಜಯ್ ಪ್ರಕಾಶ್ ಹಾಡು, ಸ್ವರ್ಗ ಧರೆಗಿಳಿಸಿದ ರಾಗಿಣಿ

ಅಂಬಾರಿ ಡ್ಯಾನ್ಸ್ ಅಕಾಡೆಮಿ 'ರಾವಣ' ಕುರಿತು ನರ್ತಿಸಿದರೆ, ಡಿವೈನ್ ಡ್ಯಾನ್ಸ್ ಅಕಾಡೆಮಿ ಐಗಿರಿ.. ನಂದಿನಿ' ಸಂಗೀತದ ಮೂಲಕ ನವಶಕ್ತಿ ವೈಭವ ಪ್ರದರ್ಶಿಸಿತು.

ವಿಜಯ್ ಪ್ರಕಾಶ್ ಹಾಡಿಗೆ ಭಾವುಕರಾಗಿ ಕಣ್ಣೀರು ಹಾಕಿದ ಕುಮಾರಸ್ವಾಮಿವಿಜಯ್ ಪ್ರಕಾಶ್ ಹಾಡಿಗೆ ಭಾವುಕರಾಗಿ ಕಣ್ಣೀರು ಹಾಕಿದ ಕುಮಾರಸ್ವಾಮಿ

ರಾತ್ರಿ 8.30ಕ್ಕೆ ಇದ್ದಂತಹ ಕಾರ್ಯಕ್ರಮ ರಾತ್ರಿ 10ಕ್ಕೆ ಆರಂಭವಾದ್ದರಿಂದ ತಮ್ಮ ನೆಚ್ಚಿನ ಗಾಯಕನ ಹಾಡಿಗೆ ಕಾದು ಕುಳಿತ್ತಿದ್ದ ಯುವ ಸಮೂಹ ವೇದಿಕೆಯ ಬಲಬದಿಯಲ್ಲಿ ಅಡ್ಡಲಾಗಿದ್ದ ಮರವನ್ನು ಹಾರಿ ಮುಂದೆ ಓಡಿ ಬಂದರು. ಬಾದಶಾ, ಬಾದಶಾ ಎಂದು ಹೆಸರನ್ನೂ ಸಾಮೂಹಿಕವಾಗಿ ಹೇಳಿ ಕಿರುಚಲಾರಂಭಿಸಿದರು.

English summary
Singer Badshah participated in the second day of the Yuva Dasara Programme in Maharaja College Ground at Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X