Get Updates
Get notified of breaking news, exclusive insights, and must-see stories!

Siddeshwara Swamiji: ಮೈಸೂರಿಗೂ, ಸಿದ್ದೇಶ್ವರ ಶ್ರೀಗಳಿಗೂ ಅವಿನಾಭಾವ ನಂಟು, ಹೇಗೆ?; ಇಲ್ಲಿದೆ ವಿವರ

ಮೈಸೂರು, ಜನವರಿ, 03: ವಿಜಯಪುರ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀಸಿದ್ಧೇಶ್ವರ ಸ್ವಾಮೀಜಿ ಅವರು 2012ರಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿದ್ದರು. ಅಲ್ಲದೆ, ಮೈಸೂರಿಗೂ ಹಾಗೂ ಶ್ರೀಗಳಿಗೂ ಅವಿನಾಭಾವ ನಂಟು ಕೂಡ ಇದೆ.

ಶ್ರೀಗಳು 1991ರಲ್ಲಿ ಭಗವಂತನ ಕುರಿತು ಪ್ರವಚನ ನೀಡಲು ಒಂದು ತಿಂಗಳವರೆಗೆ ಮೈಸೂರಿನ ನಕತ್ರಾರಂನಲ್ಲಿ ತಂಗಿದ್ದರು. ಬಳಿಕ 1995ರಲ್ಲಿ ಭಕ್ತಿಯೋಗ, 1999ರಲ್ಲಿ ಈಶ ಉಪನಿಷತ್ತು ಮತ್ತು 2000ರಲ್ಲಿ ವಿಶ್ವವಿದ್ಯಾಲಯದಲ್ಲಿ ಯೋಗೋಪನಿಷತ್ತು ಕುರಿತು ಪ್ರವಚನ ನೀಡಿದ್ದರು. ಸಿದ್ಧೇಶ್ವರ ಸ್ವಾಮೀಜಿ ಅವರು ಮೈಸೂರಿಗೆ ಆಗಮಿಸಿದರೆ ಸುತ್ತೂರಿನ ವಸತಿಗೃಹದಲ್ಲಿ ತಂಗುತ್ತಿದ್ದರು. ಶ್ರೀಗಳ ಪ್ರವಚನವನ್ನು ಆಲಿಸಲು ಸಹಸ್ರಾರು ಭಕ್ತರು ಉತ್ಸುಕರಾಗಿರುತ್ತಿದ್ದರು. ಪ್ರತಿದಿನ ಮುಂಜಾನೆ ಶ್ರೀಗಳು ಚಾಮುಂಡಿಬೆಟ್ಟ ಏರಿ ಬಸವನ ಬಳಿ ಚಿಂತನದಲ್ಲಿ ತೊಡಗಿ ಕೆಳಗಿಳಿಯುತ್ತಿದ್ದರು. ಹೀಗೆ ಸತತವಾಗಿ ಮೂರುವರೆ ತಿಂಗಳು ಮೈಸೂರಿನಲ್ಲಿ ತಂಗಿದ್ದರು.

Siddeshwara Swamiji was well connected with Mysuru, here see details

ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದ ಶ್ರೀಗಳು

ಮೈಸೂರು ವಿಶ್ವ ವಿದ್ಯಾಲಯ ಬಸವೇಶ್ವರ ಅಧ್ಯಯನ ಪೀಠಕ್ಕಾಗಿ ಒಂದು ಭವನ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭದಲ್ಲಿ ಶ್ರೀಗಳು ಆಗಮಿಸಿ ಮಾತನಾಡಿದ್ದರು. ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಜೆಎಸ್‌ಎಸ್ ಸಂಸ್ಥೆಯ ಸಂಸ್ಕೃತ ಪಾಠಶಾಲೆಯ ನೂತನ ಕಟ್ಟಡ ಮತ್ತು ವಿದ್ಯಾರ್ಥಿನಿಲಯವನ್ನು ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಕೂಡ ವೇದಿಕೆ ಹಂಚಿಕೊಂಡಿದ್ದರು. ಗಣಪತಿ ಸಚ್ಚಿದಾನಂದ ಆಶ್ರಮಕ್ಕೂ ಭೇಟಿ ನೀಡಿದ್ದನ್ನು ಸ್ಮರಿಸಬಹುದಾಗಿದೆ.

Siddeshwara Swamiji was well connected with Mysuru, here see details

ಮೈಸೂರಿಗೂ, ಶ್ರೀಗಳಿಗೂ ಅವಿನಾಭಾವ ನಂಟು

ಮೈಸೂರು ವಿಶ್ವದ್ಯಾಲಯವಿ ವಿಶ್ರಾಂತ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು 2002ರಲ್ಲಿ ಶ್ರೀಗಳನ್ನು ಗಣಕವಿಜ್ಞಾನ ವಿಭಾಗಕ್ಕೆ ಆಹ್ವಾನಿಸಿ ವಿಶೇಷ ಉಪನ್ಯಾಸ ಏರ್ಪಡಿಸಿದ್ದರು. ಇಂದಿನ ಮಾಹಿತಿ ಯುಗದಲ್ಲಿ ಜ್ಞಾನ ಹಾಗೂ ತಂತ್ರಜ್ಞಾನದ ಪಾತ್ರ, ಅದರ ಕೊಡುಗೆ ಕುರಿತು ಶ್ರೀಗಳು ಉಪನ್ಯಾಸ ನೀಡಿದ್ದರು. ಅಲ್ಲದೆ, ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜೀವನದಲ್ಲಿ ರೂಢಿಸಿಕೊಳ್ಳಬಹುದಾದ ಮೌಲ್ಯಗಳ ಬಗ್ಗೆ ಸಂದೇಶ ನೀಡುತ್ತಿದ್ದರು. ಹಾಗೆಯೇ ಜೆಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿಯೂ ಶ್ರೀಗಳು ಭಾಗವಹಿಸಿದ್ದರು. ಹೀಗೆ ಸಿದ್ದೇಶ್ವರ ಶ್ರೀಗಳಿಗೂ ಮತ್ತು ಮೈಸೂರಿಗೂ ಇರುವ ಅವಿನಾಭವ ನಂಟಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+