ಹುಟ್ಟೂರು ಸಿದ್ದರಾಮನ ಹುಂಡಿಯಲ್ಲಿ ಮತ ಚಲಾಯಿಸಿದ ಸಿದ್ದರಾಮಯ್ಯ

Recommended Video

      ಮಗ ಯತೀಂದ್ರ ಸಿದ್ದರಾಮಯ್ಯ ಜೊತೆ ತಮ್ಮ ಹುಟ್ಟೂರಿನಲ್ಲಿ ಮತದಾನ ಮಾಡಿದ ಸಿದ್ದರಾಮಯ್ಯ | Oneindia Kannada

      ಮೈಸೂರು, ಏಪ್ರಿಲ್ 18:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ತಮ್ಮ ಸ್ವಗ್ರಾಮಕ್ಕೆ ಆಗಮಿಸಿ ಪುತ್ರ ಯತೀಂದ್ರ ಜೊತೆ ತಮ್ಮ ಹಕ್ಕು ಚಲಾಯಿಸಿದರು.
      ಸಿದ್ದರಾಮನ ಹುಂಡಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 86 ರಲ್ಲಿ ಸಿದ್ದರಾಮಯ್ಯ ಮತದಾನ ಮಾಡಿದರು.

      ಸಿದ್ದರಾಮನಹುಂಡಿ ಗ್ರಾಮಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಮತದಾನಕ್ಕೂ ಮುನ್ನ ಸಿದ್ದರಾಮೇಶ್ವರ ದೇವರ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ವಾತಾವರಣ ಚೆನ್ನಾಗಿದೆ. 14 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ನಮ್ಮೂರಲ್ಲಿ ಜನ ನಿಧಾನವಾಗಿ ಬಂದು ಮತದಾನ ಮಾಡುತ್ತಾರೆ. ಶೇ. 80 ರಿಂದ 90 ರಷ್ಟು ಮತದಾನ ಆಗುತ್ತದೆ. ಬಿಸಿಲು ಜಾಸ್ತಿ ಇದೆ ಮಳೆ ಬರಲಿ ಅಂತ ಬೇಡಿಕೊಳ್ಳುತ್ತೇನೆ ಎಂದು ಹೇಳಿದರು.

      Siddaramiah and his son Yathindra cast thier vote in Siddaramanahundi

      ಚುನಾವಣೆಯ ಒತ್ತಡದ ಮಧ್ಯೆಯೂ ಸಿದ್ದರಾಮಯ್ಯ ಇಂದು ಬೆಳಗ್ಗೆ ಮೈಸೂರಿನಲ್ಲಿ ಕಾರಿನಲ್ಲಿ ಕುಳಿತೇ ದೋಸೆ ಸವಿದಿದ್ದಾರೆ. ಈ ಸಂದರ್ಭದಲ್ಲಿ ಹಲವರು ಸಿದ್ದರಾಮಯ್ಯನವರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗಿದ್ದು, ರಿಲ್ಯಾಕ್ಸ್ ಮೂಡಿನಲ್ಲಿರುವುದು ಕಂಡುಬಂತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+