• search
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಜಯೇಂದ್ರ ಅಲ್ಲ, ಅವರಪ್ಪ ಬಂದರೂ ಏನು ಮಾಡೋಕೆ ಸಾಧ್ಯವಿಲ್ಲ : ಸಿದ್ದರಾಮಯ್ಯ

By Yashaswini
|

ಮೈಸೂರು, ಏಪ್ರಿಲ್ 2 : ವಿಜಯೇಂದ್ರ ಯಾರ್ರೀ ? ಅವರಲ್ಲ, ಅವರಪ್ಪಾ ನಿಂತರೂ ವರುಣಾದಲ್ಲಿ ಗೆಲ್ಲೋಲ್ಲ. ಸುಮ್ಮನೇ ಏನೇನೂ ಪ್ರಶ್ನೆ ಕೇಳಬೇಡಿ ಎಂದು ಬಿಎಸ್ವೈ ಪುತ್ರ ವಿಜಯೇಂದ್ರ ಸ್ಫರ್ಧೆ ಕುರಿತಾಗಿ ಮಾಧ್ಯಮದವರ ಪ್ರಶ್ನೆಗೆ ಸಿಎಂ ಉತ್ತರಿಸಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಯಾಕೆ, ಅವರಪ್ಪ ಯಡಿಯೂರಪ್ಪ ಅವರೇ ಬಂದು ಚುನಾವಣೆಗೆ ನಿಲ್ಲೋಕೆ ಹೇಳಿ. ಯಡಿಯೂರಪ್ಪನಿಗೂ ವರುಣ ಕ್ಷೇತ್ರಕ್ಕೂ ಸಂಬಂಧವೇನು? ಅವರು ಬಂದು ನಿಂತ ತಕ್ಷಣ ಜನ ಓ... ಅಂತ ಓಡಿ ಬಂದು ಓಟು ಹಾಕ್ತಾರಾ? ನನ್ನ ಮಗ ಚುನಾವಣೆಗೆ ನಿಂತರೂ ಸಿಎಂ ಮಗ ಅನ್ನೋ ಕಾರಣಕ್ಕೆ ಓಟು ಹಾಕೋದಿಲ್ಲ. ಸಿಎಂ ಆಗಿ ನಾನು ಏನು ಕೆಲಸ ಮಾಡಿದ್ದೀನಿ ಅನ್ನೋದರ ಮೇಲೆ ವೋಟು ಹಾಕ್ತಾರೆ. ವರುಣ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಿರೋದು ನಾನು. ಆ ಕ್ಷೇತ್ರದಲ್ಲಿ ಕೆಲಸ ಮಾಡಿರೋದು ನಾನು. ಯಾರೋ ಬಂದು ನಿಂತ ತಕ್ಷಣ ಅಲ್ಲಿನ ಜನ ಬದಲಾಗೋದಿಲ್ಲ. ಜನರಿಗೆ ಯಾರಿಗೆ ಓಟು ಹಾಕಬೇಕು ಅಂತ ಗೊತ್ತಿದೆ ಎಂದು ಸಿಎಂ ಹೇಳಿದರು.

ವರುಣಾ ಕ್ಷೇತ್ರ: ಯತೀಂದ್ರ vs ಬಿಎಸ್ ವೈ ಪುತ್ರ ವಿಜೇಂದ್ರ?

ಒಂದು ವೇಳೆ ನನ್ನ ಪುತ್ರ ಯತೀಂದ್ರ ವರುಣಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತರೆ ಜನರು ಆತನನ್ನು ನನ್ನ ಪುತ್ರನೆಂಬ ಕಾರಣಕ್ಕೆ ಮತ ಹಾಕುವುದಿಲ್ಲ. ನಾನು ಮುಖ್ಯಮಂತ್ರಿಯಾಗಿ ಆ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದೇನೆಂದು ನೋಡಿ ಮತ ಹಾಕುತ್ತಾರೆ ಎಂದು ಬಿಎಸ್‌ವೈ ಪುತ್ರ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರಂತೆ ಎಂಬ ಪ್ರಶ್ನೆಗೆ ಸಿಎಂ ತಿರುಗೇಟು ನೀಡಿದರು.

Siddaramaiahs reply on Yeddyurappas son Vijyendra election contest from Varuna

ಇನ್ನು ನಿನ್ನೆ ಬಿಜೆಪಿ ಬಿಡುಗಡೆಮಾಡಿರುವ ಚಾರ್ಜ್ ಶೀಟ್ ಸುಳ್ಳಿನ ಕಂತೆಯಾಗಿದೆ. ಕಳೆದ 5 ವರುಷಗಳಿಂದ ಮಾಡದೇ ಇರುವ ಆರೋಪವನ್ನು ಚುನಾವಣಾ ಸಂದರ್ಭದಲ್ಲಿ ಮಾಡಲಾಗುತ್ತಿದೆ. ಇದೆಲ್ಲಾ ಚುನಾವಣಾ ಗಿಮಿಕ್. ಕೇಂದ್ರ ಕಾನೂನು ಮಂತ್ರಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ನಾಡಿನ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ ಕರ್ನಾಟಕಕ್ಕೆ ಎಷ್ಟು ಬಾರಿ ಬಂದರೂ ಗೆಲುವು ನಮ್ಮದೇ ಎಂದರು.

2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಸರಕಾರ ಬೇಕಾದ್ದು ಮಾಡಲಿ. ನಾವು ಮಾತ್ರ ಸುಪ್ರೀಂಕೋರ್ಟ್ ಅಣತಿಯಂತೆಯೇ ನಡೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಸಮಯದಲ್ಲಿ ಸ್ಪಷ್ಟಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಮೈಸೂರು ಸುದ್ದಿಗಳುView All

English summary
CM Siddaramaiah said 'If Yeddyurappa only contest from Varuna he can cot win'. He said this in reply to BSY's son Vijyendra contest from Varuna constituency from where Siddarmaiah's son Dr.Yatindra contesting.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more