• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದ ಸಿದ್ದರಾಮಯ್ಯ

|

ಮೈಸೂರು, ಜೂನ್ 24: ಸಿದ್ದರಾಮಯ್ಯ ಅವರು ಏಕಾ-ಏಕಿ ತಮ್ಮ ಹಳೆಯ ಕ್ಷೇತ್ರದ ಕಡೆ ಗಮನಹರಿಸಿದ್ದಾರೆ. ನಿನ್ನೆ ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಜೊತೆ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂತು ಅಚ್ಚರಿಯ ಹೆಸರು! ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂತು ಅಚ್ಚರಿಯ ಹೆಸರು!

ಸಿದ್ದರಾಮಯ್ಯ ಅವರ ಕ್ಷೇತ್ರವಾಗಿದ್ದ ವರುಣಾದಿಂದ ಈ ಬಾರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ. ಆದರೆ ಬಾದಾಮಿ ಕ್ಷೇತ್ರ ಅವರ ಕೈ ಹಿಡಿದಿದೆ.

ನಾನು ಸುಮ್ಮನಿರುವುದು ಇದೇ ಕಾರಣಕ್ಕಾಗಿ : ಡಿ ಕೆ ಶಿವಕುಮಾರ್ ನಾನು ಸುಮ್ಮನಿರುವುದು ಇದೇ ಕಾರಣಕ್ಕಾಗಿ : ಡಿ ಕೆ ಶಿವಕುಮಾರ್

ಈಗ ಏಕಾ-ಏಕಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.

ನಿನ್ನೆ ಸಂಜೆ ಮೈಸೂರಿನ ಖಾಸಗಿ ಹೊಟೆಲ್‌ನಲ್ಲಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಪ್ರಮುಖ ಕಾರ್ಯಕರ್ತರೊಂದಿಗೆ ಸತತ ಸಭೆ ನಡೆಸಿದ್ದಾರೆ. ಸಭೆಯ ಸಂದರ್ಭ ವರುಣಾ ಶಾಸಕ, ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರೂ ಜೊತೆಗಿದ್ದರು ಎನ್ನಲಾಗಿದೆ.

ಸಿದ್ದರಾಮಯ್ಯ ಸುಮ್ಮನಿದ್ದರಷ್ಟೆ ಸರ್ಕಾರ ಉಳಿಯುತ್ತದೆ: ದೇವೇಗೌಡ ಸಿದ್ದರಾಮಯ್ಯ ಸುಮ್ಮನಿದ್ದರಷ್ಟೆ ಸರ್ಕಾರ ಉಳಿಯುತ್ತದೆ: ದೇವೇಗೌಡ

ಮಧ್ಯಂತರ ಚುನಾವಣೆ ಚರ್ಚೆ ರಾಜ್ಯದಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿಯೇ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ. ಚುನಾವಣೆಗೆ ಸಜ್ಜಾಗುವಂತೆ ಸೂಚನೆ ನೀಡಲು ಸಿದ್ದರಾಮಯ್ಯ ಅವರು ಈ ಸಭೆ ಕರೆದಿದ್ದಾರೆ ಎನ್ನಲಾಗಿದೆ.

English summary
Former CM Siddaramaiah had meeting with Varuna constituency congress leaders yesterday. Siddaramaiah's son Yathindra Siddaramaiah is the MLA in Varuna constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X