ಎಚ್. ವಿಶ್ವನಾಥ್ ಬೊಗಳುತ್ತಲೇ ಕಚ್ಚುತ್ತಾರೆ: ಎಚ್. ವಿಶ್ವನಾಥ್‌ಗೆ ಕುಟುಕಿದ ಶ್ರೀನಿವಾಸ್ ಪ್ರಸಾದ್
ಮೈಸೂರು, ಡಿಸೆಂಬರ್, 16: ಮಿಸ್ಟರ್ ವಿಶ್ವನಾಥ್ ಅವರೇ ನನ್ನನ್ನ ಜನ ಸ್ವಾಭಿಮಾನದ ಚಕ್ರವರ್ತಿ ಅಂತಾ ಕರಿಯುತ್ತಾರೆ. ಆದರೆ ನೀವು ನನ್ನ ಅಲೆಮಾರಿಯ ರಾಜ ಅಂತಾ ಕರೆಯುತ್ತಿದ್ದೀರಾ?. ಈವರೆಗೂ ನನ್ನ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಎಂಎಲ್‌ಸಿ ಎಚ್.ವಿಶ್ವನಾಥ್ ವಿರುದ್ಧ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದರು. ಹಾಗೆಯೇ ಬೊಗಳುವ ನಾಯಿ ಕಚ್ಚುವುದಿಲ್ಲ ಎಂದು ಹೇಳುತ್ತಾರೆ. ಆದರೆ ವಿಶ್ವನಾಥ್ ಬೊಗಳುತ್ತಲೇ ಕಚ್ಚುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಢಿ ನಡೆಸಿ ಮಾತನಾಡಿದ ಅವರು, ನಿನ್ನೆ ವಿಶ್ವನಾಥ್ ಪತ್ರಿಕಾಗೋಷ್ಠಿಯನ್ನು ಮಾಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಅಂದರೆ ನಾಮಕರಣಗೊಂಡ ಸದಸ್ಯ ಅಂತಾ ಅರ್ಥ. ವಿಶ್ವನಾಥ್ ಜನರಿಂದ ಆಯ್ಕೆಯಾದ ಶಾಸಕರಲ್ಲ. ಒಂದೂವರೆ ವರ್ಷ ಎಂಪಿ ಪೂರೈಸಿದರೆ ನಾನು 50 ವರ್ಷ ರಾಜಕೀಯದಲ್ಲಿ ಪೂರೈಸಿದ್ದಾನೆ. ನಾನು ಅಲೆಮಾರಿ ಅಂತಾ ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ. ವಿಶ್ವನಾಥ್‌ಗೂ ಕೂಡ ನಾನು ಅಲೆಮಾರಿ ರೀತಿ ಮಾತನಾಡುತ್ತಾರೆ ಅಂತಾ ಹೇಳಿದ್ದೆ. "ವಿಶ್ವನಾಥ್ ನೆನಪಿಸಿಕೋ, ಬೆನ್ನಿಗೆ ಚೂರಿ ಹಾಕಿ ದೇವರಾಜ ಅರಸ್ ಬಿಟ್ಟು ಇಂದಿರಾ ಕಾಂಗ್ರೆಸ್‌ಗೆ ರಾತ್ರೋ ರಾತ್ರಿ ಓಡಿ ಬಂದಿದ್ದು ನೀನೆ ಅಲ್ಲವೇ? ಇಂದಿರಾ ಕಾಂಗ್ರೆಸ್‌ಗೆ ಓಡಿ ಬಂದಿದ್ದು ನೆನಪಿಲ್ಲವಾ ವಿಶ್ವನಾಥ್? ಕೆ.ಆರ್. ನಗರದಲ್ಲಿ ಏನೆಲ್ಲಾ ಮಾಡಿದೆ."
Recommended Video


ನಿನ್ನನ್ನು ಪುಂಡ ಅಂತಾ ಕರೆಯುತ್ತಿದ್ದರು
"ನಿನ್ನ ವಿರುದ್ಧ ಸ್ಪರ್ಧೆ ಮಾಡಿದರೂ ಅನ್ನುವ ಕಾರಣಕ್ಕೆ ಎಚ್.ಎಸ್. ನಂಜಪ್ಪ, ಮಂಚನಹಳ್ಳಿ ಮಹದೇವು ಎಲ್ಲರ ಮೇಲೂ ಆಣೆ ಪ್ರಮಾಣ ಮಾಡಿದೆ. ನಿನ್ನನ್ನು ಕೆ.ಎಚ್. ಪಾಟೀಲರು ಪುಂಡ ಅಂತಾ ಕರೆಯುತ್ತಿದ್ದರು. ಯಾವ ಕಾರಣಕ್ಕೂ ಟಿಕೆಟ್ ಕೊಡಲ್ಲ ಅಂತಾ ಹಠ ಮಾಡಿದ್ದರು. ಆಗ ನಾನು ರಾಜೀವ್ ಗಾಂಧಿ ಹತ್ತಿರವಿದ್ದೆ. ನಾನು ಎಷ್ಟೋ ಜನರಿಗೆ ಟಿಕೇಟ್ ಕೊಡಿಸಿದ್ದೆ. ಡಿ.ಕೆ.ಶಿವಕುಮಾರ್‌ಗೂ ನಾನು ಟಿಕೆಟ್ ಕೊಡಿಸಿದ್ದೆ," ಎಂದರು.

ಸಮಿತಿಗೆ ನಿನ್ನ ಹೆಸರನ್ನು ಶಿಫಾರಸು ಮಾಡಿದ್ದೆ
ಯೂತ್ ಕಾಂಗ್ರೆಸ್ ಆಧ್ಯಕ್ಷರ ಮಾತಿಗೆ ಗೌರವ ಕೊಡಬೇಕು ಅನ್ನುವ ಉದ್ದೇಶದಿಂದ ಟಿಕೆಟ್ ಕೊಟ್ಟರು. ಹಿಂದುಳಿದ ವರ್ಗ, ವಕೀಲ ಅಂತಾ ನಾನು ಚುನಾವಣಾ ಸಮಿತಿಗೆ ಹೇಳಿದ್ದೆ. ಸಮಿತಿಗೆ ಹೇಳಿ ನಿನ್ನ ಹೆಸರನ್ನು ಶಿಫಾರಸು ಮಾಡಿ ಕಳುಹಿಸಿದ್ದೆ. ನಾನು ಪ್ರೀತಿ ವಿಶ್ವಾಸ ಗಳಿಸಿದ್ದೇನೆ. ಎಲ್ಲರ ಬಳಿಯೂ ನಿನ್ನ ರೀತಿ ಬಾಯಿಗೆ ಬಂದ ಹಾಗೆ ಮಾತನಾಡಲ್ಲ. 1985ರಲ್ಲಿ ಸೋತೆ, ರಾಜಕೀಯ ಜನ್ಮ ಕೊಟ್ಟಿದ್ದು ಯಾರು ನಿನಗೆ? 1989 ರಲ್ಲಿ ಟಿಕೇಟ್ ಕೊಟ್ಟರು. ಎರಡು ಕೈ ಮುಗಿದು ಮಂತ್ರಿ ಮಾಡಿ ಅಂತಾ ಕೇಳಿದ್ದೆ. ಆಗ ಯಾರಪ್ಪ ನಿನ್ನ ಮಂತ್ರಿ ಮಾಡಿದ್ದು? ಎಂದು ಪ್ರಶ್ನಿಸಿದರು.

ರಾಜಭವನದಲ್ಲಿ ನಿನ್ನ ಹೆಸರು ಸೇರಿಸಿದೆ
ಪ್ಲೈಟ್ ಲ್ಯಾಂಡ್ ಆಗುವುದರೊಳಗೆ ನೀವು ಮಂತ್ರಿ ಮಾಡಿಲ್ಲ ಅಂದರೆ ನಿಮ್ಮ ವಿರುದ್ಧ ತಿರುಗಿ ಬೀಳಬೇಕಾಗುತ್ತದೆ ಎಂದು ಹೇಳಿದ್ದೆ. ಫ್ಲೈಟ್ ಇಳಿದ ಮೇಲೆ ರಾಜಭವನದಲ್ಲಿ ನಿನ್ನ ಹೆಸರು ಸೇರಿಸಿದೆ. ಆಗ ವಿಶ್ವನಾಥ್ ಎಲ್ಲಿದ್ದರು? ಕೆ.ಆರ್. ನಗರದಲ್ಲಿ ಕಂಬಳಿ ಒದ್ದುಕೊಂಡು ಮಲಗಿದ್ದ. ಆಗ ನಾನು ಫೋನ್ ಮಾಡಿ ಕರೆಸಿ ಮಂತ್ರಿ ಮಾಡಿಸಿದ್ದೆ. ದೆಹಲಿಯಲ್ಲಿ ವಿಶ್ವನಾಥ್‌ನನ್ನ ನಾಲ್ಕು ವರ್ಷ ಸಾಕಿದೆ. ನಿಮ್ಮ ಪತ್ನಿಗೆ ನಾನು ಮಾಡಿದ ಸಹಾಯ ಗೊತ್ತಿದೆ. ದೀಪ ಹಚ್ಚುವ ವೇಳೆ ನಿನ್ನನ್ನು ನೆನಪಿಸಿಕೊಳ್ಳುತ್ತೇವೆ ಅಂದಿದ್ದರು ಎಂದು ತಿಳಿಸಿದರು.

ನನ್ನ ಪಾಲಿಗೆ ತಿರುಪತಿ ತಿಮ್ಮಪ್ಪ ಅಂದಿದ್ದೀರಿ
ಕೆ.ಆರ್.ನಗರದ ರೇಡಿಯೋ ಮೈದಾನದಲ್ಲಿ ನನ್ನ ಬಗ್ಗೆ ವಿಶ್ವನಾಥ್ ಹೇಳಿದ್ದೇನು? ನನ್ನ ಪಾಲಿಗೆ ತಿರುಪತಿ ತಿಮ್ಮಪ್ಪ ಅಂದಿದ್ದೀರಿ. ಆಮೇಲೆ ನಂಜನಗೂಡು ಉಪಚುನಾವಣೆ ಸಂದರ್ಭದಲ್ಲಿ ನೀವು ಮಾಡಿದ್ದೇನು? ನಂಜುಂಡೇಶ್ವನ ಬಳಿಗೆ ಹೋಗಿ ನಾನು ಸೋಲಲಿ ಅಂತಾ ಈಡುಗಾಯಿ ಹೊಡೆದೆ. ನಾನು 1985ರಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸದಿದ್ದರೆ ನಿನ್ನ ರಾಜಕೀಯ ಅಧ್ಯಾಯವೇ ಮುಗಿದು ಹೋಗುತ್ತಿತ್ತು. 1989ರಲ್ಲಿ ವೀರಪ್ಪ ಮೊಯಿಲಿ ಸಿಎಂ ಆದಾಗ ನಿನ್ನನ್ನು ಮಂತ್ರಿ ಮಾಡುವುದಕ್ಕೆ ಹೋರಾಟ ಮಾಡಿದ್ಯಾರು ಎಂದು ಹಳ್ಳಿ ಹಕ್ಕಿಯನ್ನು ಕುಟುಕಿದರು.

ವಿಶ್ವನಾಥ್ ಎಲ್ಲರ ಬಗ್ಗೆ ಮಾತನಾಡುತ್ತಾರೆ
"ಬೊಗಳುವ ನಾಯಿ ಕಚ್ಚುವುದಿಲ್ಲ ಅಂತಾರೆ. ಆದರೆ ವಿಶ್ವನಾಥ್ ಬೊಗಳುತ್ತಲೇ ಕಚ್ಚುತ್ತಾರೆ. ಹೋದ ಕಡೆಯಲೆಲ್ಲಾ ವಿಶ್ವನಾಥ್ ಎಲ್ಲರ ಬಗ್ಗೆ ಮಾತನಾಡುತ್ತಾರೆ. ಕೆ.ಆರ್.ನಗರಕ್ಕೆ ಮಂಚನಹಳ್ಳಿ ಮಹದೇವ್ ಬೇಡ, ನನಗೆ ಟಿಕೆಟ್ ಕೋಡಿ ಅಂದಿದ್ದರು. ಏಟ್ರಿಯಾ ಹೋಟೆಲ್‌ನಲ್ಲಿ ನಾನು ಸಿದ್ದರಾಮಯ್ಯಗೆ ಹೇಳಿದ್ದೆ. ಇಂದೊಂದು ಬಾರಿ ಟಿಕೆಟ್ ಕೊಡಿ, ಸೊತತೆ ಪಾಠ ಮಾಡುವುದಕ್ಕೆ ಹೋಗುತ್ತಾರೆ ಅಂದರು. ಆದರೆ ವಿಶ್ವನಾಥ್ ಪಾಠ ಮಾಡುವುದಕ್ಕೆ ಹೋಗಿಲ್ಲ, ಕೀಟಲೆ ಮಾಡುವುದಕ್ಕೆ ಬಂದರು. ಆ ಮೇಲೆ ಎಂಪಿ ಸೀಟ್‌ಗೆ ಟಿಕೆಟ್ ಕೊಟ್ಟರು. ಸಿದ್ದರಾಮಯ್ಯ ಅವರ ಹಣದಲ್ಲಿಯೇ ನಾವೆಲ್ಲ ಹೋಗಿ ಓಡಾಡಿ ಎಂಪಿ ಮಾಡಿಸಿದ್ದೆವು. ಎಂಪಿ ಆದಮೇಲೆ ಒಂದೇ ಒಂದು ಲೋಕಸಭೆಯಲ್ಲಿ ಪ್ರಶ್ನೆ ಕೇಳಲಿಲ್ಲ. ಸಿಗ್ನೇಚರ್ ಹಾಕಿಕೊಂಡು ಮನೆಗೆ ಹೋಗಿ, ಮತ್ತೆ ರಾತ್ರಿ ವಿಸ್ಕಿ ಹಾಕಿ ಮಲಗುವುದು ಅಷ್ಟೇ ನಿನ್ನ ಕೆಲಸ," ಎಂದು ವಾಗ್ದಾಳಿ ನಡೆಸಿದರು.

ಬಂಕ್, ಬಾರ್ ಮಾಡಿದ್ದು ಯಾವ ಹಣದಲ್ಲಿ?
"ಚುನಾವಣೆಗೆ ಕೇವಲ 4 ರಿಂದ 5 ಲಕ್ಷ ಖರ್ಚು ಮಾಡಿದ್ದಾರೆ. 10 ಕೋಟಿ ಮನೆಗೆ ತಗೆದುಕೊಂಡು ಹೋಗಿದ್ದಾರೆ. ಪೆಟ್ರೋಲ್ ಬಂಕ್, ಬಾರ್ ಮಾಡಿಕೊಂಡಿದ್ದು ಯಾವ ಹಣದಲ್ಲಿ ಹೇಳಿ? ನಾನು ಜೆಡಿಎಸ್ ರಾಜ್ಯಾದ್ಯಕ್ಷ ಆದರೂ ಕೆ.ಆರ್.ನಗರ ಪುರಸಭೆಗೆ ಒಂದೇ ಒಂದು ಟಿಕೆಟ್ ಕೊಟ್ಟಿಲ್ಲ. ನನಗೆ ಅವಮಾನ ಮಾಡಿದರು ಅಂತಾ ನನ್ನ ಮನೆಗೆ ಬಂದೆ. ನಾನು ಯಡಿಯೂರಪ್ಪ ಅವರ ಬಳಿ ಮುಖಾಮುಖಿಯಾಗಿ ಮಾತನಾಡಿ ಅಂದಿದ್ದೆ. ವಿಶ್ವನಾಥ್‌ಗೆ ಕಾಂಗ್ರೆಸ್‌ನಿಂದ ಏನು ಅನ್ಯಾಯ ಆಗಿದೆ. ಸೋತ ಮೇಲೆ ಸಿದ್ದರಾಮಯ್ಯ ಅವರ ಬಳಿ ದುಡ್ಡು ಕೇಳಿ, ಅಧಿಕಾರವನ್ನೂ ಕೇಳಿದ್ದರು. ಹೀಗಾಗಿಯೇ ವಿಶ್ವನಾಥ್ ಕಾಂಗ್ರೆಸ್ ಬಿಟ್ಟರು," ಎಂದು ಶ್ರೀನಿವಾಸ್ ಪ್ರಸಾದ್ ಮಾರ್ಮಿಕವಾಗಿ ನುಡಿದರು.
-
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ












Click it and Unblock the Notifications