ಬಜೆಟ್ ನಲ್ಲಿ ಘೋಷಿಸಿದ ಶಂಕರ ಜಯಂತಿ ಆಚರಣೆ 2002ರಲ್ಲೇ ಆರಂಭ!
ಮೈಸೂರು, ಜುಲೈ.06: ಶೃಂಗೇರಿ ಎಂದರೆ ತಕ್ಷಣ ನೆನಪಿಗೆ ಬರುವುದು ಶಾರದಾಂಬೆ ಕ್ಷೇತ್ರ. ಈ ಸುಕ್ಷೇತ್ರವನ್ನು ಸ್ಥಾಪಿಸಿದ್ದು ಆದಿ ಶಂಕರಾಚಾರ್ಯರು. ಈ ಕ್ಷೇತ್ರಕ್ಕೂ ದೇವೇಗೌಡ ಕುಟುಂಬಕ್ಕೂ ತುಂಬಾ ನಿಕಟವಾದ ನಂಟಿದೆ. ಎಚ್‍ಡಿಕೆಗೆ ಸಿಎಂ ಪಟ್ಟ ದೊರೆತಿರುವುದು ಇಲ್ಲಿ ಮಾಡಿಸಲಾದ ಹೋಮ, ಹವನಗಳಿಂದ ಎನ್ನುವುದು ಸಾಮಾನ್ಯ ನಂಬಿಕೆ.
ಈ ಹಿನ್ನೆಲೆಯಲ್ಲೇ ಸರ್ಕಾರ ಬಜೆಟ್ ನಲ್ಲಿ ಆದಿ ಶಂಕರಾಚಾರ್ಯ ಜಯಂತಿ ಆಚರಣೆಯ ಘೋಷಣೆ ಮಾಡಿದೆ.
ಆದರೆ ಶೃಂಗೇರಿ ಮಠದ ಮೂಲಗಳ ಪ್ರಕಾರ 2002ರಲ್ಲೇ ರಾಜ್ಯ ಸರ್ಕಾರ ಶಂಕರಾಚಾರ್ಯ ಜಯಂತಿ ಆಚರಿಸುತ್ತಿದೆ. ಪ್ರತಿ ವರ್ಷ ಶಂಕರ ಹುಟ್ಟಿದ ದಿನವನ್ನು ತತ್ವಜ್ಞಾನಿಗಳ ದಿನವನ್ನಾಗಿ ರಾಜ್ಯ ಸರ್ಕಾರದಿಂದ ಆಚರಿಸಲಾಗುತ್ತಿದೆ ಎನ್ನುವ ಮಾಹಿತಿ ನೀಡುತ್ತಾರೆ ಮಠದ ಆಡಳಿತಾಧಿಕಾರಿ ವಿ.ಆರ್. ಗೌರೀಶಂಕರ.

ಒಟ್ಟಾರೆ ಇದೀಗ ಸರ್ಕಾರದ ನಿರ್ಧಾರವನ್ನು ಒಂದು ವರ್ಗ ಸ್ವಾಗತಿಸಿದ್ದರೆ, ಬುದ್ಧಿಜೀವಿಗಳ ಇನ್ನೊಂದು ವರ್ಗ ಟೀಕಿಸುತ್ತಿದೆ. ಮುಂದೇನಾಗುತ್ತೋ ಕಾದು ನೋಡಬೇಕಿದೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ಅನ್ನು ಹಣಕಾಸು ಸಚಿವರೂ ಆದ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಿನ್ನೆ (ಜುಲೈ 05) ಮಂಡಿಸಿದರು. ಬೆಳಗ್ಗೆ 11 ಗಂಟೆಗೆ ಸಂಪುಟ ಸಭೆ ನಡೆಸಿ, ನಂತರ ನಂತರ 11:30 ಬಜೆಟ್ ಭಾಷಣ ಆರಂಭಿಸಿದ ಅವರು ಬರೋಬ್ಬರಿ ಒಂದೂ ಮುಕ್ಕಾಲು ಗಂಟೆಯ ಕಾಲ ಭಾಷಣ ಮಾಡಿದರು.
2,18,488 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಅನ್ನು ಕುಮಾರಸ್ವಾಮಿ ಮಂಡಿಸಿದರು. ಬಜೆಟ್ಟಿನುದ್ದಕ್ಕೂ ಬೆಂಗಳೂರು, ಮಂಡ್ಯ, ಹಾಸನ, ರಾಮನಗರ, ಮೈಸೂರು, ಉತ್ತರ ಕರ್ನಾಟಕದ ಕೆಲವು ಭಾಗಗಳಿಗೆ ಬಿಟ್ಟರೆ ಬೇರೆ ಜಿಲ್ಲೆಗಳನ್ನೂ ಕುಮಾರಸ್ವಾಮಿ ನಿರ್ಲಕ್ಷಿಸಿದ್ದಾರೆ ಎಂದು ಪ್ರತಿಪಕ್ಷಗಳು ಬಜೆಟ್ ಭಾಷಣದ ಕೊನೆಯಲ್ಲಿ ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.











Click it and Unblock the Notifications