• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿಗೆ ಬಂದಿದೆ ಸೀಡ್ಲೆಸ್ ದ್ರಾಕ್ಷಿ, ಹೋಗೋಣ ಬಾರೆ ಮೀನಾಕ್ಷಿ!

|

ಮೈಸೂರು, ಫೆಬ್ರವರಿ 20 : ಹಸಿರು ಬಣ್ಣದ, ಬೀಜರಹಿತ ದ್ರಾಕ್ಷಿ ಹಣ್ಣಿನ ಋತುಮಾನ ಆರಂಭವಾಗಿದ್ದು, ಬೆಲೆಯೂ ಅಗ್ಗವಾಗಿದೆ. ಮೈಸೂರಿನಲ್ಲಿ 50 ರು.ನಿಂದ 60 ರೂಗೆ ಒಂದು ಕೆ.ಜಿ ದ್ರಾಕ್ಷಿ ಮಾರಾಟವಾಗುತ್ತಿದೆ.

ಮಹಾರಾಷ್ಟ್ರದ ಸಾಂಗ್ಲಿ, ಸೊಲ್ಲಾಪುರದಲ್ಲಿ ಬೆಳೆಯುವ ದ್ರಾಕ್ಷಿ ನಗರದ ಮಾರುಕಟ್ಟೆಗೆ ಬಂದಿದೆ. ಕಳೆದ ಎರಡು ವಾರಗಳ ಹಿಂದೆ 100ರೂ ಕೆ.ಜಿ ಮಾರಾಟವಾಗುತ್ತಿದ್ದ ದ್ರಾಕ್ಷಿ 60 ರೂಗೆ ಕುಸಿದಿದೆ. ರಾಜ್ಯದ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬಳ್ಳಾರಿ, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಮುಂದಿನ 15 ದಿನಗಳಲ್ಲಿ ರಾಜ್ಯದ ದ್ರಾಕ್ಷಿ ಮಾರುಕಟ್ಟೆಗೆ ಬರುತ್ತದೆ. ಆಗ ದ್ರಾಕ್ಷಿ ಬೆಲೆಯಲ್ಲಿ ಮತ್ತಷ್ಟು ಕುಸಿತವಾಗಬಹುದು ಎಂದು ಹಣ್ಣಿನ ವ್ಯಾಪಾರಿ ರಮೇಶ್ ಹೇಳಿದರು.

ಬೇಸಿಗೆಗೂ ಮುನ್ನವೇ ಮೈಸೂರಿನಲ್ಲಿ ಕಂಡಕಲ್ಲಂಗಡಿ ಹಣ್ಣು!

ಇನ್ನು ರಾಜ್ಯದ ನಾನಾ ಭಾಗದಿಂದ ಥಾಮ್ಸನ್ ಸೀಡ್ಲೆಸ್, ಶರದ್, ಕೃಷ್ಣ ಶರದ್, ಗ್ಲೋಬ್, ಸೋನಿಧಿಕಾ ಹೀಗೆ ಬಗೆಬಗೆಯ ರುಚಿಕರವಾದ ದ್ರಾಕ್ಷಿ ಹಣ್ಣು ಹಾಗೂ ಕಲ್ಲಂಗಡಿ ಹಣ್ಣುಗಳು ನಗರ ಪ್ರವೇಶಿಸಿವೆ.

ಇತ್ತ ಬೇಸಿಗೆ ಆರಂಭವಾಗಿದ್ದು, ಸೇಬು ಹಣ್ಣಿನ ಋತುಮಾನ ಮುಕ್ತಾಯವಾಗಿದೆ. ಹೀಗಾಗಿ ಹೊರದೇಶದ ಸೇಬುಹಣ್ಣು ಆಮದು ಮಾಡಿಕೊಳ್ಳುತ್ತಿದ್ದು, 140 ರೂಕ್ಕೆ ಒಂದು ಕೆ.ಜಿ ಗುಣಮಟ್ಟದ ಸೇಬು ಮಾರಾಟವಾಗುತ್ತಿದೆ. ದಾಳಿಂಬೆ 80 ರೂ, ಕಿತ್ತಳೆ, ಮೋಸಂಬಿ ರೂ 60, ಸಪೋಟರೂ 40, ಏಲಕ್ಕಿ ಬಾಳೆ ಹಾಗೂಪಚ್ಚಬಾಳೆ 30 ರೂ, ಪಪ್ಪಾಯ, ಕರಬೂಜ, ಪೈನಾಪಲ್ 20 ರೂ ಹಾಗೂ ಕಲ್ಲಂಗಡಿ 15 ರೂಕ್ಕೆ ಕೆ.ಜಿ ಮಾರಾಟವಾಗುತ್ತಿದೆ.

ಬೆಂಗಳೂರಲ್ಲಿಹೆಚ್ಚಿದ ಗರಿಷ್ಠ ತಾಪಮಾನ, ಎಷ್ಟಿದೆ, ಎಷ್ಟು ಹೆಚ್ಚಳವಾಗಬಹುದು?

ಕೊತ್ತಂಬರಿ, ಸಬ್ಬಸಿಗೆ, ಪುದೀನಾ, ಕರಿಬೇವು, ದಂಟು5 ರೂಕ್ಕೆ ಒಂದು ಕಂತೆ ಮಾರಾಟವಾಗುತ್ತಿವೆ. ಪಾಲಕ್, ಮೆಂತೆ, ಕೀರೆ ಸೊಪ್ಪು 3 ರೂ.ಗೆ ಒಂದು ಕಂತೆ ಮಾರಾಟವಾಗುತ್ತಿವೆ. ತರಕಾರಿ ಬೆಲೆಯೂ ಸ್ಥಿರವಾಗಿದ್ದು ಬದನೆಕಾಯಿ, ಟೊಮೆಟೊ 10 ರೂ, ಎಲೆಕೋಸು, ಮೂಲಂಗಿ, ಈರುಳ್ಳಿ ದಪ್ಪ15 ರೂ, ಸಣ್ಣ ಈರುಳ್ಳಿ 12ಕ್ಕೆಕೆ.ಜಿ ಮಾರಾಟವಾಗುತ್ತಿವೆ. ಕ್ಯಾರೆಟ್, ಹೂಕೋಸು, ಗೆಡ್ಡೆಕೋಸು, ಸೀಮೆಬದನೆ, ದುಂಡು ಬದನೆ, ಮೂಲಂಗಿ, ಕುಂಬಳಕಾಯಿ, ಸಾಂಬಾರ್ ಸೌತೆಕಾಯಿ, ಪಡವಲಕಾಯಿ, ಫಾರಂ ಬೆಳ್ಳುಳ್ಳಿ 20 ರೂಕ್ಕೆ ಒಂದು ಕೆ.ಜಿ. ಮಾರಾಟವಾಗುತ್ತಿವೆ.

ಈ ಬೇಸಿಗೆ ಉತ್ತರ ಕನ್ನಡದ423 ಹಳ್ಳಿ ಜನರ ಗಂಟಲಾರಿಸಲಿದೆ

ಬೀಟ್‌ರೂಟ್, ಅವರೆಕಾಯಿ, ಹಸಿಬಟಾಣಿ, ಫಾರಂ ಬೀನ್ಸ್, ಭಜಿಮೆಣಸಿನಕಾಯಿ, ಆಲೂಗಡ್ಡೆ 30, ಮೆಣಸಿನಕಾಯಿ, ದಪ್ಪಮೆಣಸಿನಕಾಯಿ, ಹಾಗಲಕಾಯಿ, ಹಿರೇಕಾಯಿ, ಸುವರ್ಣಗೆಡ್ಡೆ, ಬೆಂಡೆಕಾಯಿ, ತೊಂಡೆಕಾಯಿ, 40ಕ್ಕೆ ಕೆ.ಜಿ ಮಾರಾಟವಾಗುತ್ತಿವೆ. ಶುಂಠಿ 70 ರೂ, ನುಗ್ಗೆಕಾಯಿ 60 ರೂ ಕ್ಕೆ ಕೆ.ಜಿ ಮಾರಾಟವಾಗುತ್ತಿವೆ.

English summary
Seedless and sweet grapes came to mysuru market from various places of karnataka and maharatsra. One kg grapes selling at Rs. 50 to 60.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X