ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿ ರಕ್ಷಣಾ ಸಿಬ್ಬಂದಿ ವೇತನಕ್ಕೆ ಬಿತ್ತು ಕತ್ತರಿ!

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಜುಲೈ 21 : ಮೈಸೂರು ವಿವಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ಸಿಬ್ಬಂದಿಗೆ 2 ತಿಂಗಳಿನಿಂದ ವೇತನೇ ಸಿಕ್ಕಿಲ್ಲ. ಹೌದು, ಇವರನ್ನು ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಂಡಿರುವ ಖಾಸಗಿ ರಕ್ಷಣಾ ಸಂಸ್ಥೆಯ ಲೋಪದಿಂದಾಗಿ ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿದೆ.

ಮೈಸೂರು ವಿವಿ ಉಪಕುಲಸಚಿವರ ಕಚೇರಿಗೆ ಬೀಗ! ಮೈಸೂರು ವಿವಿ ಉಪಕುಲಸಚಿವರ ಕಚೇರಿಗೆ ಬೀಗ!

ಬೆಂಗಳೂರು ಮೂಲದ ಕ್ಯಾನನ್ ಡಿಟೆಕ್ಟಿವ್ ಸೆಕ್ಯುರಿಟಿ ಸರ್ವಿಸ್ ಸಂಸ್ಥೆಯು ಮೈಸೂರು ವಿವಿಗೆ ಭದ್ರತೆ ನೀಡಲು ಗುತ್ತಿಗೆ ಪಡೆದಿದೆ. 2016ರ ಆಗಸ್ಟ್ ತಿಂಗಳಿನಿಂದ ವಿವಿ ವ್ಯಾಪ್ತಿಯ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಕೇಂದ್ರಗಳಲ್ಲಿ ಸೇವೆ ನೀಡುತ್ತಿದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ 95 ಸಿಬ್ಬಂದಿಗೆ ಈಗ ವೇತನವೇ ಇಲ್ಲದಂತಾಗಿದೆ.

Security guards in Mysuru University are not getting proper salary

ವೇತನ ನೀಡದಿರುವುದಕ್ಕೆ ಕಾರಣ
ಕಾರ್ಮಿಕ ಕಾನೂನು ಸೇವೆಗಳ ಪ್ರಕಾರ ನೌಕರರಿಗೆ ಪಿಎಫ್ ಹಾಗೂ ಇಎಸ್ಐ ಸೌಲಭ್ಯವನ್ನು ನೀಡಬೇಕು. ಆದರೆ, ಈ ಮೇಲಿನ ಸೌಲಭ್ಯವನ್ನು ನೀಡದಿರುವ ಕಾರಣ, ಸಂಸ್ಥೆಗೆ ವಿವಿಯು ಹಣ ನೀಡುವುದನ್ನು ನಿಲ್ಲಿಸಿದೆ. ಫೆಬ್ರವರಿಯಿಂದ ಸಂಸ್ಥೆಯು ಪಿಎಫ್, ಇಎಸ್ ಐ ನೀಡಿಲ್ಲ. ಹಾಗಾಗಿ ಮೇ, ಹಾಗೂ ಜೂನ್ ತಿಂಗಳು ಸಂಸ್ಥೆಯು ಸಿಬ್ಬಂದಿಗೆ ವೇತನ ನೀಡಿಲ್ಲ. ಇನ್ನೊಂದು ತಿಂಗಳು ಮಾತ್ರ ಸಂಸ್ಥೆಗೆ ಗುತ್ತಿಗೆ ಅವಧಿಯಿದ್ದು, ನಂತರ ಟೆಂಡರ್ ಕರೆದು ಹೊಸ ಸಂಸ್ಥೆಯನ್ನು ನೇಮಿಸಿಕೊಳ್ಳುತ್ತೇವೆ ಎನ್ನುತ್ತಾರೆ ಮೈಸೂರು ವಿವಿ ಕುಲಸಚಿವೆ ವಿ. ವಿ ಭಾರತಿ.

ಸಂಬಳ ನೀಡಿಲ್ಲವಾದ್ರೂ ದಿನಕ್ಕೆ 12 ಗಂಟೆ ಕರ್ತವ್ಯ
'ಈಗ ನಮಗೆ ರೂ, 8500 ನೀಡಲಾಗುತ್ತಿದೆ. ಒಟ್ಟು ರೂ, 13000 ವೇತನ ನೀಡುವುದಾಗಿ ಒಪ್ಪಂದವಾಗಿತ್ತು. ಆದರೆ, ಈವರೆಗೆ ಅಷ್ಟೂ ವೇತನವನ್ನು ನೀಡಿಲ್ಲ. ವೇತನ ಚೀಟಿ(ಸ್ಯಾಲರಿ ಸ್ಲಿಪ್)ಯನ್ನೂ ನೀಡಿಲ್ಲ. ಹಾಗಾಗಿ ನಮಗೆ ಎಷ್ಟು ಹಣ ಪಿಎಫ್ ಗಾಗಿ ಮುರಿದುಕೊಳ್ಳಲಾಗುತ್ತಿದೆ ಎಂಬ ಮಾಹಿತಿಯಿಲ್ಲ. ದಿನಕ್ಕೆ 12 ಗಂಟೆ ದುಡಿಯುತ್ತೇವೆ' ಎಂದು ರಕ್ಷಣಾ ಸಿಬ್ಬಂದಿಯೊಬ್ಬರು ತಿಳಿಸುತ್ತಾರೆ.

ರಕ್ಷಣಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣರವನ್ನು ಫೋನ್ ಸಂಪರ್ಕಕ್ಕೆ ಪ್ರಯತ್ನಿಸಿದರೂ ಅವರು ದೊರಕದೇ ಇರುವುದು ಬೇಸರದ ಸಂಗತಿ. ಇನ್ನಾದರೂ ವಿವಿ ಆಡಳಿತ ಮಂಡಳಿ ಇವರ ಪರಿಶ್ರಮಕ್ಕೆ ಸಂಬಳವನ್ನು ನೀಡುವತ್ತ ಮುಂದಾಗಬೇಕೆಂಬುದು 'ಒನ್ ಇಂಡಿಯಾ' ಅಭಿಲಾಷೆ.

English summary
Security guards, who work in contract basis in Mysuru University have hot recieved their complete salary yet. The security gaurds blames, a private company who recruited them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X