ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಟ್ರಿಣ್ –ಟ್ರಿಣ್ ಯೋಜನೆಗೆ ಎರಡು ವರ್ಷದ ಸಂಭ್ರಮ

|
Google Oneindia Kannada News

ಮೈಸೂರು, ಜೂನ್ 10: ಸಾಂಸ್ಕೃತಿಕ ನಗರಿ ಮೈಸೂರಿನ ಹಿರಿಮೆಯ ಯೋಜನೆಯೆಂದೇ ಹೆಸರಾದ ಸಾರ್ವಜನಿಕ ಬೈಸಿಕಲ್‌ ಹಂಚಿಕೆ ಟ್ರಿಣ್ ಟ್ರಿಣ್ ಎರಡು ವರ್ಷ ಪೂರೈಸಿದೆ. ಇದುವರೆಗೂ ಬೈಸಿಕಲ್ ಬಳಸಿರುವವರ ಸಂಖ್ಯೆ 12 ಸಾವಿರವನ್ನು ಮೀರಿದೆ. 2017ರ ಜೂನ್‌ 4ರಂದು ಆರಂಭವಾದ ಈ ಸೇವೆಯನ್ನು ದಿನವೂ 1,000 ರಿಂದ 1,200 ಮಂದಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಅಕ್ಕಪಕ್ಕದ ಕೆಲಸ ಕಾರ್ಯಗಳಿಗೆ ತೆರಳಲು ಹಲವರು ಟ್ರಿಣ್ ಟ್ರಿಣ್ ಸೈಕಲ್‌ಗಳು ಸಹಾಯಕವಾಗಿದೆ. ನಗರದಾದ್ಯಂತ 52 ಡಾಕಿಂಗ್‌ ಕೇಂದ್ರಗಳಿರುವ ಈ ವ್ಯವಸ್ಥೆಯಲ್ಲಿ ಒಟ್ಟು 450 ಸೈಕಲ್‌ಗಳು ಇವೆ. ಚಾಮುಂಡಿ ಬೆಟ್ಟಕ್ಕೆ ತೆರಳುವವರಿಗೆ ಅನುಕೂಲವಾಗಲು ಗಿಯರ್ ಇರುವ 20 ಸೈಕಲ್‌ ವ್ಯವಸ್ಥೆ ಸಹ ಇದೆ. ಮಳೆ ಅಥವಾ ಅತಿಯಾದ ಬಿಸಿಲು ಇದ್ದ ಅವಧಿಯಲ್ಲಿ ಸೈಕಲ್‌ ಬಳಕೆಯ ಪ್ರಮಾಣ ಕಡಿಮೆಯಾಗುತ್ತದೆ. ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲೂ ಬಳಕೆಯ ಪ್ರಮಾಣ ಕಡಿಮೆಯಿರುತ್ತದೆ. ಏಕೆಂದರೆ ಈ ಸೇವೆ ಬಳಸುವವರಲ್ಲಿ ಬಹುಪಾಲು ಮಂದಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು, ಕಚೇರಿಗಳಲ್ಲಿ ಕೆಲಸ ಮಾಡುವವರು ಆಗಿದ್ದಾರೆ.

11 ಸಾವಿರ ಸವಾರರನ್ನು ಹೊಂದಿದ ಮಹತ್ವಾಕಾಂಕ್ಷಿ ಟ್ರಿಣ್ -ಟ್ರಿಣ್ ಯೋಜನೆ11 ಸಾವಿರ ಸವಾರರನ್ನು ಹೊಂದಿದ ಮಹತ್ವಾಕಾಂಕ್ಷಿ ಟ್ರಿಣ್ -ಟ್ರಿಣ್ ಯೋಜನೆ

ಆರಂಭದ ವರ್ಷಕ್ಕೆ ಹೋಲಿಸಿದರೆ, ಎರಡನೇ ವರ್ಷದಲ್ಲಿ ನೋಂದಣಿಯಾದವರ ಸಂಖ್ಯೆ ಇಳಿಮುಖಗೊಂಡಿದೆ. ಈ ಸೇವೆ ಆರಂಭವಾದ 14 ತಿಂಗಳಲ್ಲಿ ನೋಂದಣಿ ಸಂಖ್ಯೆ 10 ಸಾವಿರ ಗಡಿ ತಲುಪಿತ್ತು. ಬಳಿಕದ 10 ತಿಂಗಳಲ್ಲಿ ಹೆಚ್ಚುವರಿಯಾಗಿ ಎರಡು ಸಾವಿರ ಮಂದಿ ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಸೇವೆಯನ್ನು ಹೊಸ ಪ್ರದೇಶಗಳಿಗೆ ವಿಸ್ತರಿಸದಿರುವುದೇ ನೋಂದಣಿ ಪ್ರಮಾಣದ ವೇಗ ತಗ್ಗಲು ಕಾರಣ. ಹೊಸ ಬಳಕೆದಾರರನ್ನು ಸೆಳೆಯಲು ಸಾಧ್ಯವಾಗುತ್ತಿಲ್ಲ. ಡಾಕಿಂಗ್‌ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಸದಸ್ಯರ ಸಂಖ್ಯೆಯೂ ಹೆಚ್ಚಳವಾಗಬಹುದು ಎಂದು ನಿರೀಕ್ಷಿಸಲಾಗಿದೆ.

 Second year birthday of Trin trin bicycle sharing system in mysuru

ನಿಲ್ದಾಣಗಳ ಕೇಂದ್ರಗಳನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಆರಂಭದಿಂದಲೂ ಇದೆ. ಆದರೆ, ಚುನಾವಣೆ ನೀತಿ ಸಂಹಿತೆ ಮತ್ತು ಇತರ ಕೆಲವು ಕಾರಣಗಳಿಂದಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗಿಲ್ಲ. ಮುಂದಿನ ದಿನಗಳಲ್ಲಿ, ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

ಶೀಘ್ರದಲ್ಲೇ ದಾವಣಗೆರೆಯಲ್ಲಿ ಬೈಸಿಕಲ್ ಶೇರಿಂಗ್ ಸೇವೆ ಆರಂಭ ಶೀಘ್ರದಲ್ಲೇ ದಾವಣಗೆರೆಯಲ್ಲಿ ಬೈಸಿಕಲ್ ಶೇರಿಂಗ್ ಸೇವೆ ಆರಂಭ

ಜನಸ್ನೇಹಿಯಾದ ಈ ಯೋಜನೆ ಮತ್ತಷ್ಟು ವರ್ಷ ಹೀಗೇ ಯಶಸ್ವಿಯಾಗಿ ಮುಂದುವರೆಯಬೇಕೆಂಬ ಆಶಯ ಪ್ರತಿಯೊಬ್ಬ ಬಳಕೆದಾರರದ್ದೂ ಆಗಿದೆ.

English summary
It is a Second year birthday of Trin–Trin bicycle sharing system in mysuru. around 12 thousand people are using this facility. Daily 1000 to 1200 people are making use these cycle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X