• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿದೇಶದಲ್ಲಿ ದಸರಾ ಮಹೋತ್ಸವದ ಪ್ರಚಾರ ಕೈಗೊಂಡ ಸಚಿವ ಸಾ.ರಾ.ಮಹೇಶ್

|

ಮೈಸೂರು, ಸೆಪ್ಟೆಂಬರ್ 28:ಇಂಟರ್ ನ್ಯಾಷನಲ್ ಫ್ರೆಂಚ್ ಟ್ರಾವೆಲ್ ಮಾರ್ಟ್ ವತಿಯಿಂದ ಪ್ಯಾರಿಸ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಎಕ್ಸ್‍ಪೋದಲ್ಲಿ ಕರ್ನಾಟಕ ಪ್ರವಾಸೋದ್ಯಮವೂ ಭಾಗಿಯಾಗಿದೆ.

ಯುಕೆ ಹಾಗೂ ಐರೋಪ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಜಾಗತಿಕ ಪ್ರವಾಸೋದ್ಯಮ ಮೇಳ ಹಾಗೂ ರೋಡ್‍ ಶೋನಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಸಾ.ರಾ.ಮಹೇಶ್, ವಿದೇಶಿ ಪ್ರವಾಸಿಗರನ್ನು ರಾಜ್ಯದತ್ತ ಸೆಳೆಯಲು ಹಾಗೂ ನಮ್ಮಲ್ಲಿರುವ ಪ್ರೇಕ್ಷಣೀಯ ಸ್ಥಳಗಳನ್ನು ವಿದೇಶಿಗರ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿದೇಶಿ ಸಮ್ಮೇಳನ ಅತ್ಯಂತ ಪ್ರಯೋಜನಕಾರಿ ಆಗಿದೆ ಎಂದರು.

ದಸರಾ ಗಜರಾಜರಿಗೆ ಬೆಣ್ಣೆಯಲ್ಲಿ ಬೇಯಿಸಿದ ಘಮಘಮಿಸುವ ತರಹೇವಾರಿ ಖಾದ್ಯ

ಪ್ರಸ್ತುತ ಮೂರು ಇಲಾಖೆಗಳಿಂದ ಒಂದು ಮಳಿಗೆಯನ್ನು ತೆರೆದಿದ್ದು, ವಿದೇಶಿಗರನ್ನು ಸೆಳೆಯುವ ರಾಜ್ಯದ ಪ್ರವಾಸೋದ್ಯಮದ ಸ್ಥಳಗಳು, ಜಂಗಲ್ ಲಾಡ್ಜ್ ವ್ಯವಸ್ಥೆ ಹಾಗೂ ಕೆಎಎಸ್ ಟಿಡಿಸಿ ಸಿಗುವ ಅಗತ್ಯ ಮಾಹಿತಿಗಳನ್ನು ಒಳಗೊಂಡ ಸಮಗ್ರ ಭಂಡಾರವನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ತೆರೆದಿಡಲಾಗಿದೆ.

ದಸರಾ ಕ್ರೀಡಾಕೂಟದಲ್ಲಿ ಅವಕಾಶ ವಂಚಿತರಾದ ಗ್ರಾಮೀಣ ಕ್ರೀಡಾಪಟುಗಳು

ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿದೇಶಿ ಮಾದರಿಗಳನ್ನು ಅನುಸರಿಸುವ ಕುರಿತು ಇಲ್ಲಿರುವ ಮಳಿಗೆಗಳಿಂದಲೂ ಸಾಕಷ್ಟು ಮಾಹಿತಿ ದೊರೆತಿದೆ. ರಾಜ್ಯಕ್ಕೆ ಮರಳಿಬರುತ್ತಿದ್ದಂತೆ ಇವೆಲ್ಲವುಗಳ ಬಗ್ಗೆ ತಿಳಿಸಿಕೊಡಲಾಗುವುದು ಎಂದು ಸಚಿವರು ತಿಳಿಸಿದರು.

ದಸರಾ ವಸ್ತು ಪ್ರದರ್ಶನ: ಈ ಬಾರಿ ಪ್ರಾಧಿಕಾರವೇ ನಿರ್ವಹಿಸಲಿದೆಯಾ?

ಒಟ್ಟಿನಲ್ಲಿ ಸಾ.ರಾ.ಮಹೇಶ್ ವಿದೇಶದಲ್ಲಿ ಮೈಸೂರು ದಸರಾ ಮಹೋತ್ಸವದ ಪ್ರಚಾರ ಕೈಗೊಳ್ಳುವ ಮೂಲಕ ವಿಶಿಷ್ಟತೆ ಮೆರೆದಿದ್ದಾರೆ.

English summary
Minister SA RA Mahesh has campaigned Mysore Dasara Festival in abroad. He has participated in Global Tourism Fair and Road Show held in UK and European countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X