ಮೈಸೂರಿನಲ್ಲಿ ಕಾಣಿಸಿಕೊಂಡ ವಿಶೇಷ ಅತಿಥಿ
ಆಕ್ರಮಣ ಕಾರಿ ಸ್ವಭಾವದ, ಉತ್ತರ ಭಾರತದಲ್ಲಿ ಕಾಣಸಿಗುವ ರ್‍ಹಿಸೆಸ್ ಮಂಕಿ ಮೈಸೂರಿನಲ್ಲಿ ಕಾಣಿಸಿಕೊಂಡು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಮಹಾರಾಜ ಪದವಿ ಪೂರ್ವ ಕಾಲೇಜಿನ ಕಾಂಪೌಂಡ್ ಮೇಲೆ ನಿರ್ಭೀತಿಯಿಂದ ರಿಸೆಸ್ ಮಂಗ ಸಂಚರಿಸುವುದನ್ನು ಸಾರ್ವಜನಿಕರು ಗುರುತಿಸಿದರು.

ನಂತರ ಅಲ್ಲಿಂದ ಮಂಗ ಮಹಾರಾಜ ಪ್ರೌಢಶಾಲೆಯ ಕಟ್ಟಡದ ಬಳಿ, ಹಳೆ ಜಿಲ್ಲಾಧಿಕಾರಿ ಕಚೇರಿ ಪಕ್ಕದ ಮೈದಾನದಲ್ಲಿರುವ ಮರವೇರಿ ಕುಳಿತು ವಿಶ್ರಾಂತಿ ಪಡೆಯಿತು. ಹೊಸ ಪರಿಸರದ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗದಲ್ಲಿ ಓಡಾಡುತ್ತಿದ್ದವರ ಮೇಲೆ ದಾಳಿ ಮಾಡುವಂತೆ ಇದು ಹೆದರಿಸುತ್ತಿತ್ತು.
ರ್‍ಹಿಸೆಸ್ ಮಂಗದ ಹಿಂಭಾಗ ಕೆಂಪು ಬಣ್ಣದಿಂದ ಕೂಡಿರುತ್ತದೆ. ಮೈ ಮೇಲೆ ಕೂದಲು ಹೆಚ್ಚಾಗಿರುತ್ತದೆ. ತಲೆ ಮೇಲಿನ ಕೂದಲು ಟೊಪ್ಪಿಗೆಯಂತೆ ಕಾಣುತ್ತದೆ. ಬಾಲವೂ ಸ್ವಲ್ಪ ಚಿಕ್ಕದಾಗಿರುತ್ತದೆ. ಸಾಮಾನ್ಯ ಕೋತಿಗಳ ಸಂತತಿಯನ್ನು ತಗ್ಗಿಸಿ ತಮ್ಮ ಆವಾಸ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ರಿಸೆಸ್ ಮಂಗ ಹೋರಾಟಕ್ಕಿಳಿದಿವೆ. ಅದರ ಸೂಚಕವಾಗಿಯೇ ಈ ಮಾದರಿ ಕೋತಿಗಳು ದಕ್ಷಿಣದಲ್ಲಿ ಕಾಣಿಸಿಕೊಂಡಿವೆ ಎಂದು ವನ್ಯಜೀವಿ ತಜ್ಞರು ಅಂದಾಜಿಸಿದ್ದಾರೆ.
"ಉತ್ತರ ಭಾರತವಲ್ಲದೆ ನೇಪಾಳ, ದಕ್ಷಿಣ ಚೀನಾ, ಆಗ್ನೇಯ ಏಷ್ಯಾದಲ್ಲಿ ರಿಸೆಸ್ ಮಂಗ ಸಂತತಿ ಹೆಚ್ಚಾಗಿ ಕಂಡು ಬರುತ್ತದೆ. ಉತ್ತರ ಭಾರತದಲ್ಲಿ ಇದರ ಸಂತತಿ ಹೆಚ್ಚಾಗುತ್ತಿದ್ದು, ಕ್ರಮೇಣ ದಕ್ಷಿಣ ಭಾರತದತ್ತ ವಲಸೆ ಬಂದು ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿವೆ. ಈಗಾಗಲೇ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲೂ ಗುಂಪಾಗಿ ಕಾಣಿಸಿಕೊಳ್ಳುತ್ತಿವೆ" ಎಂದು ವನ್ಯಜೀವಿ ಸಂರಕ್ಷಕ ಪ್ರದೀಪ್ ಹೇಳಿದ್ದಾರೆ.
ರ್‍ಹೀಸಸ್ ಮಂಗವು ಪ್ರೈಮೇಟ್ ಗಣ, ಸರ್ಕೊಪಿತಿಸಿಡೀ ಕುಟುಂಬ, ಸರ್ಕೊಪಿತಿಸಿನೀ ಉಪಕುಟುಂಬ, ಮಕಾಕ ಜಾತಿಯ ನಾಲ್ಕು ಪ್ರಭೇದಗಳ ಪೈಕಿ ಒಂದು ಮಂಗವಾಗಿದೆ. ಹಳದಿ ಮಿಶ್ರಿತ ಅಥವಾ ಮರಳಿನ ಬಣ್ಣವನ್ನು ಹೊಂದಿದ್ದು, 47-64 ಸೆಮೀ ಉದ್ದದ ಬಲಿಷ್ಠ ದೇಹವನ್ನು ಹೊಂದಿರುತ್ತದೆ. ಈ ಮಂಗಗಳ ತೂಕ 4.5-11ಕೆಜಿವರೆಗೂ ಇರುತ್ತದೆ. ಚಿಕ್ಕಪುಟ್ಟ ಕೀಟಗಳು, ಹಣ್ಣುಗಳು ಮತ್ತು ಬೇರುಗಳನ್ನು ತಿಂದು ಬದುಕುತ್ತವೆ.












Click it and Unblock the Notifications