ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಅತಂತ್ರ ಫಲಿತಾಂಶ: ಲೋಕಲ್ ಫೈಟ್ ನಲ್ಲೂ ಕೈ –ತೆನೆ ಮೈತ್ರಿ ಸಾಧ್ಯತೆ

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 3: ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎನಿಸಿರುವ, ರಾಜ್ಯದ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎಂದೇ ಬಿಂಬಿತವಾಗಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.

ಮೈಸೂರು ಮಹಾನಗರ ಪಾಲಿಕೆಯ ಸ್ಥಳೀಯ ಸಂಸ್ಥೆಗಳಿಗೆ ಆಗಸ್ಟ್ 31 ರಂದು ಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟವಾಗಿದೆ. ಆದರೆ ಫಲಿತಾಂಶ ಅತಂತ್ರವಾಗಿರುವುದು ಮಾತ್ರ ಹುರಿಯಾಳುಗಳಿಗೆ ಕಸಿವಿಸಿಯುಂಟಾದಂತಿದೆ.

ಪುತ್ತೂರು ನಗರಸಭೆ ಬಿಜೆಪಿ ತೆಕ್ಕೆಗೆ, ಉಳ್ಳಾಲ, ಬಂಟ್ವಾಳದಲ್ಲಿ ಅತಂತ್ರ, ಕೈಗೆ ಮುಖಭಂಗಪುತ್ತೂರು ನಗರಸಭೆ ಬಿಜೆಪಿ ತೆಕ್ಕೆಗೆ, ಉಳ್ಳಾಲ, ಬಂಟ್ವಾಳದಲ್ಲಿ ಅತಂತ್ರ, ಕೈಗೆ ಮುಖಭಂಗ

65 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 19, ಜೆಡಿಎಸ್ 18, ಬಿಎಸ್ ಪಿ ಹಾಗೂ ಇತರೆ 5 ಸ್ಥಾನಗಳಲ್ಲಿ ಗೆಲುವಿನ ಪತಾಕೆ ಹಾರಿಸಿದ್ದಾರೆ. 22 ಸ್ಥಾನ ಗಳಿಸಿದ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಪಾಲಿಕೆ ಚುನಾವಣೆಯಲ್ಲಿ ಮೊದಲ ಬಾರಿಗೆ 20 ಸ್ಥಾನ ದಾಟಿದೆ.

Results of local body elections in Mysore are intact

ಫಲಿತಾಂಶವೇ ಈ ರೀತಿ ಬಂದ ಹಿನ್ನೆಲೆ ಮೈಸೂರಿನಲ್ಲಿಯೂ ದೋಸ್ತಿ ಸರಕಾರ ಮುಂದುವರೆಯುವ ಸಾಧ್ಯತೆ ಇರುವುದರಿಂದ ಬಿಜೆಪಿ ಅತೀ ಹೆಚ್ಚು ಸ್ಥಾನ ಗಳಿಸಿದ್ದರೂ ಅಧಿಕಾರದ ಚುಕ್ಕಾಣಿ ಹಿಡಿಯುವುದು ಕಷ್ಟ ಸಾಧ್ಯವಾಗಿದೆ.

LIVE: ಸ್ಥಳೀಯ ಸಂಸ್ಥೆ ಫಲಿತಾಂಶ: ಪಕ್ಷಗಳ ಬಲಾಬಲ: ಕಾಂಗ್ರೆಸ್ 982 , ಬಿಜೆಪಿ 927, ಜೆಡಿಎಸ್ 375LIVE: ಸ್ಥಳೀಯ ಸಂಸ್ಥೆ ಫಲಿತಾಂಶ: ಪಕ್ಷಗಳ ಬಲಾಬಲ: ಕಾಂಗ್ರೆಸ್ 982 , ಬಿಜೆಪಿ 927, ಜೆಡಿಎಸ್ 375

1,2,6,7,8,14,17,19,22,24,26,27,31,36,37,41,44,45ನೇ ವಾರ್ಡ್ ಗಳಲ್ಲಿ ತೆನೆ ಜಯ ಸಾಧಿಸಿದೆ. ಇನ್ನು ಕಾಂಗ್ರೆಸ್ 5,10,11,12,13,15,16,29,31,33,34,38,39,43,48,50,54,60,61ನೇ ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ. ಹಾಗೆಯೇ 18,20,21,23,25,28,30,35,40,46,47,49,51,52,53,57,58,59,62,63,64,65ನೇ ವಾರ್ಡ್ ಗಳಲ್ಲಿ ಕಮಲ ಅರಳಿದೆ.

ಸ್ಥಳೀಯ ಸಂಸ್ಥೆ ಚುನಾವಣೆ: ಉತ್ತರ ಕನ್ನಡದಲ್ಲಿ ಬಿಜೆಪಿ, ಕಾಂಗ್ರೆಸ್ ಸಮಬಲಸ್ಥಳೀಯ ಸಂಸ್ಥೆ ಚುನಾವಣೆ: ಉತ್ತರ ಕನ್ನಡದಲ್ಲಿ ಬಿಜೆಪಿ, ಕಾಂಗ್ರೆಸ್ ಸಮಬಲ

56 ನೇ ವಾರ್ಡ್ ನಲ್ಲಿ ಬಿಎಸ್ಪಿ ಗೆಲುವಿನ ನಗೆ ಬೀರಿದೆ. 3,4,9, 42,55 ನೇ ವಾರ್ಡ್ ಗಳಲ್ಲಿ ಪಕ್ಷೇತರರು ಗೆದ್ದು ಬೀಗಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ಗದ್ದುಗೆಗೆ ಏರಲು 33 ಸದಸ್ಯರ ಬೆಂಬಲದ ಜೊತೆಗೆ ಮ್ಯಾಜಿಕ್ ನಂಬರ್ 38 ಬೇಕು. ಮೇಯರ್ ಆಯ್ಕೆಯಲ್ಲಿಯೂ ಸಹ ಸ್ಥಳೀಯ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರ ಮತ ನಿರ್ಣಾಯಕವಾಗಲಿದೆ.

Results of local body elections in Mysore are intact

ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ಸಾಧ್ಯತೆ ಇದೆ. ಕಳೆದ ಬಾರಿ ನಡೆದಿದ್ದ ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲೂ ಅತಂತ್ರವಾಗಿ ಜೆಡಿಎಸ್- ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿದಿತ್ತು.

ಇದೀಗ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರವಿದ್ದು ಈ ಹಿನ್ನೆಲೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ಒಟ್ಟು 23 ಸ್ಥಾನಗಳನ್ನು ಹೊಂದಿರುವ ಪಿರಿಯಾಪಟ್ಟಣ ಪುರಸಭೆಯಲ್ಲಿ ಜೆಡಿಎಸ್ 14 ಸ್ಥಾನ, ಕಾಂಗ್ರೆಸ್ 8 ಹಾಗೂ ಪಕ್ಷೇತರರು 1 ಸ್ಥಾನ ಗೆದ್ದಿದ್ದು, ಇಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುತ್ತದೆ.

ಇನ್ನು ಟಿ.ನರಸೀಪುರ ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್ 10, ಜೆಡಿಎಸ್ 3, ಬಿಜೆಪಿ 4 ಪಕ್ಷೇತರರು 6 ಸ್ಥಾನಗಳಲ್ಲಿ ಗೆದ್ದಿದ್ದು ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಎಚ್.ಡಿ ಕೋಟೆ ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್ 11, ಜೆಡಿಎಸ್ 8, ಬಿಜೆಪಿ 1, ಬಿಎಸ್ಪಿ 1 ಹಾಗೂ ಪಕ್ಷೇತರರ 2 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದಾರೆ.

ಇಲ್ಲಿಯೂ ಸಹ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಹೆಸರು ಮಾಡಿದ್ದ ಉರಗ ತಜ್ಞ ಸ್ನೇಕ್ ಶ್ಯಾಮ್​ ಸೋಲನನ್ನುಭವಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಶ್ಯಾಮ್ ಜೆಡಿಎಸ್ ಅಭ್ಯರ್ಥಿ ಎಸ್.ಬಿ.ಎಂ ಮಂಜು ವಿರುದ್ಧ ಸೋಲು ಕಂಡಿದ್ದಾರೆ.

ಬಿಜೆಪಿಯಿಂದ ಟಿಕೆಟ್ ಸಿಗದೇ ಬಂಡಾಯವಾಗಿ ಸ್ಪರ್ಧಿಸಿದ್ದ ಎಂ.ವಿ.ರಾಮ್ ಪ್ರಸಾದ್ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಜೆಡಿಎಸ್ ನಗರಾಧ್ಯಕ್ಷ ಚೆಲುವೆಗೌಡ ಸೋಲು ಕಂಡಿದ್ದು, ಹರೀಶ್ ಗೌಡ ಬೆಂಬಲಿಗರ ಪರ ಮತದಾರರು ಮತ ಹಾಕಿದ್ದಾರೆ.

ಜೆಡಿಎಸ್ ಮುಖಂಡ ಕೆ.ವಿ.ಮಲ್ಲೇಶ್ ಅವರಿಗೂ ಕೂಡ ಗೆಲುವು ಕೈ ಹಿಡಿದಿಲ್ಲ. ಕಾಂಗ್ರೆಸ್ ಮುಖಂಡ ಸುಹೇಲ್ ಬೇಗ್ ಕೂಡ ಸೋಲು ಕಂಡಿದ್ದಾರೆ.

English summary
Results of local body elections in Mysore are intact. Elections were held for 65 wards. In it BJP 22, Congress 19, JDS 18, BSP and others won 5 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X