Ayodhya Ram mandir: ಹಾರೋಹಳ್ಳಿಯ ಕೃಷ್ಣಶಿಲೆ ರಾಮಮಂದಿರದ ರಾಮಲಲ್ಲಾನಾಗಿದ್ದು ಹೇಗೆ?
ಮೈಸೂರು, ಜನವರಿ 04: ಎಲ್ಲಿಯ ಅಯೋಧ್ಯೆ? ಎಲ್ಲಿಯ ಹಾರೋಹಳ್ಳಿ? ಈಗ ಒಂದಕ್ಕೊಂದು ಸಂಬಂಧ ಬೆಸೆಯುತ್ತಿದೆ. ದೇವರ ಅನುಗ್ರಹವೇ ಹಾಗೆ. ಯಾವಾಗ? ಯಾವುದು? ದೇವರಿಗೆ ಕೃಪೆಗೆ ಪಾತ್ರವಾಗಿ ಬಿಡುತ್ತದೆಯೋ ಗೊತ್ತಾಗುವುದಿಲ್ಲ. ಆದರೆ ಕರ್ನಾಟಕದ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆಯ ಬಳಿಯ ಹಾರೋಹಳ್ಳಿಯ ರೈತನ ಜಮೀನಿನಲ್ಲಿದ್ದ ಶಿಲೆಯೊಂದು ರಾಮಲಲ್ಲಾನಾಗಿ ರಾಮಮಂದಿರಲ್ಲಿ ಪ್ರತಿಷ್ಠಾಪನೆಯಾಗುತ್ತದೆ ಎಂದರೆ ಎಷ್ಟು ಅಚ್ಚರಿಯೋ? ಅಷ್ಟೇ ಸಂತೋಷವೂ ಹೌದು.
ಇಡೀ ದೇಶ ರಾಮಮಂದಿರದ ಉದ್ಘಾಟನೆ ಮತ್ತು ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಎದುರು ನೋಡುತ್ತಿದೆ. ಇದರ ಜೊತೆಗೆ ವಿಗ್ರಹದ ಕೆತ್ತನೆಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಮಾಡಿರುವುದು ನಮಗೆ ಹೆಮ್ಮೆ ತರುವುದರೊಂದಿಗೆ ಕೆತ್ತನೆಗೆ ಬಳಸಲಾದ ಶಿಲೆ ಹೆಚ್.ಡಿ ಕೋಟೆ ತಾಲೂಕಿನ ಗುಜ್ಜೇಗೌಡನಪುರದ ಹಾರೋಹಳ್ಳಿ ಗ್ರಾಮದ್ದು ಎನ್ನುವುದೇ ಮತ್ತಷ್ಟು ಖುಷಿಯ ವಿಚಾರವಾಗಿದೆ.

ಪುಟ್ಟ ಗ್ರಾಮದ ಶಿಲೆಯೊಂದು ರಾಮನ ಅನುಗ್ರಹಕ್ಕೆ ಪಾತ್ರವಾಗಿ ಭಕ್ತರಿಂದ ಪೂಜಿಸಲ್ಪಡುತ್ತದೆ ಎಂದು ಯಾರೂ ನಂಬಿರಲಿಲ್ಲ. ಆದರೆ ಹೆಚ್.ಡಿ ಕೋಟೆ ತಾಲೂಕಿನಲ್ಲಿ ಕಷ್ಣ ಶಿಲೆ ಸಿಗುತ್ತದೆ ಎಂಬುದು ಮೈಸೂರಿನ ಬಹುತೇಕ ಶಿಲ್ಪಿಗಳಿಗೆ ತಿಳಿದಿದೆ. ಕಾರಣ ಇಲ್ಲಿನ ಶಿಲೆಗಳನ್ನು ಬಳಸಿ ಮೂರ್ತಿಗಳ ಕೆತ್ತನೆಯನ್ನು ಮೈಸೂರಿನ ಶಿಲ್ಪಿಗಳು ಮಾಡುತ್ತಾ ಬಂದಿದ್ದಾರೆ. ಆದರೆ ರಾಮಲಲ್ಲಾನ ಮೂರ್ತಿಗೆ ಇಲ್ಲಿಯ ಶಿಲೆ ಆಯ್ಕೆ ಆಗಿದ್ದು ಮಾತ್ರ ಆಕಸ್ಮಿಕವೆ.
ವ್ಯವಸಾಯಕ್ಕೆ ಅಡ್ಡಿಯಾದ ಜಮೀನಿನಲ್ಲಿದ್ದ ಶಿಲೆ
ಇವತ್ತು ರಾಮಲಲ್ಲಾ ಮೂರ್ತಿಯ ಕೆತ್ತನೆಗೆ ಶಿಲ್ಪಿ ಅರುಣ್ ಯೋಗಿರಾಜ್ ಬಳಸಿಕೊಂಡಿರುವ ಶಿಲೆಯನ್ನು ಮೈಸೂರು ತಾಲೂಕಿನ ಗುಜ್ಜೇಗೌಡನಪುರ ಸಮೀಪದ ಹಾರೋಹಳ್ಳಿ ಗ್ರಾಮದ ನಿವಾಸಿ ಹನುಮಯ್ಯ ಅವರ ಪುತ್ರ ಹೆಚ್.ರಾಮದಾಸ್ ಅವರು ಗ್ರಾಮದಿಂದ 2.ಕಿ.ಮೀ ದೂರದ ಸರ್ವೇ ನಂ.176,177ರ ಜಮೀನಿನಿಂದ ಅಯೋಧ್ಯೆಗೆ ರವಾನಿಸಿದ್ದಾಗಿದೆ. ಈ ಸರ್ವೆ ನಂಬರ್‌ನಲ್ಲಿ ರಾಮದಾಸ್ ಅವರಿಗೆ ಮೂರು ಎಕರೆ ಜಮೀನಿದ್ದು, ಈ ಜಮೀನಿನಲ್ಲಿರುವ ಕಲ್ಲುಗಳು ವ್ಯವಸಾಯಕ್ಕೆ ಅಡ್ಡಿಯಾಗಿತ್ತು. ಹೀಗಾಗಿ ಆ ಕಲ್ಲುಗಳನ್ನು ಜೆಸಿಬಿ ಬಳಸಿ ತೆಗೆದು ಹಾಕುವ ತೀರ್ಮಾನಕ್ಕೆ ಬಂದಿದ್ದರು.

ಮೇಲ್ನೋಟಕ್ಕೆ ಕಲ್ಲು ಭೂಮಿ ಮೇಲೆ ಚಿಕ್ಕದಾಗಿ ಕಾಣಿಸುತ್ತಿತ್ತಾದರೂ ಜೆಸಿಬಿ ತರಿಸಿ ಮಣ್ಣು ಬಗೆದಾಗ ಬೃಹತ್ ಗಾತ್ರದಲ್ಲಿ ಕಲ್ಲು ಹರಡಿಕೊಂಡಿರುವುದು ಪತ್ತೆಯಾಗಿತ್ತು. ಮಣ್ಣು ತೆಗೆದಂತೆಲ್ಲ ಅದರ ಗಾತ್ರವೂ ಅರಿವಿಗೆ ಬಂದಿತ್ತು. ಆದರೆ ಇಲ್ಲಿಗೆ ನಿಲ್ಲಿಸುವುದು ಬೇಡ ಹೇಗಾದರೂ ಮಾಡಿ ಕಲ್ಲನ್ನು ತೆಗೆದು ಬಿಡಿ ಎಂದು ಜಮೀನಿನ ಮಾಲೀಕ ರಾಮದಾಸ್ ಅವರು ಜೆಸಿಬಿ ಚಾಲಕ ಶ್ರೀನಿವಾಸ್ ಅವರಿಗೆ ತಿಳಿಸಿದರು.
ಜೆಸಿಬಿ ಚಾಲಕ ನೀಡಿದ ಮಾಹಿತಿ
ಇದೇ ಸಂದರ್ಭದಲ್ಲಿ ಅಯೋಧ್ಯೆಯ ರಾಮಮಂದಿರದ ರಾಮಲಲ್ಲಾ ಮೂರ್ತಿ ಕೆತ್ತನೆಗಾಗಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಶಿಲೆಗಾಗಿ ಹುಡುಕಾಟ ನಡೆಸುತ್ತಿರುವ ವಿಷಯ ಜೆಸಿಬಿ ಚಾಲಕ ಶ್ರೀನಿವಾಸ್ ಅವರ ಕಿವಿಗೆ ಬಿದ್ದಿತು. ಹೀಗಾಗಿ ಅವರು ಪರಿಚಿತ ಶಿಲ್ಪಿಯೂ ಆಗಿದ್ದ ಅರುಣ್ ಯೋಗಿರಾಜ್ ಅವರನ್ನು ಸಂಪರ್ಕಿಸಿ ಹಾರೋಹಳ್ಳಿ ಗ್ರಾಮದ ರಾಮದಾಸ್ ಅವರ ಜಮೀನಿನಲ್ಲಿ ಕಂಡು ಬಂದ ಭಾರೀ ಗಾತ್ರದ ಶಿಲೆಯ ಬಗ್ಗೆ ಮಾಹಿತಿ ನೀಡಿದ್ದರು.

ಚಾಲಕ ಶ್ರೀನಿವಾಸ್ ಅವರ ಮಾತಿನಂತೆ ಶಿಲ್ಪಿ ಅರುಣ್ ಯೋಗಿರಾಜ್ ಅವರು ತನ್ನ ಸಹೋದರ ಸೂರ್ಯ ಪ್ರಕಾಶ್ ಅವರೊಂದಿಗೆ ಹಾರೋಹಳ್ಳಿಗೆ ತೆರಳಿ ನೋಡಿದಾಗ ಅಲ್ಲಿರುವುದು ಅತ್ಯಂತ ವಿಶೇಷವಾದ ಕೃಷ್ಣಶಿಲೆ ಎನ್ನುವುದು ತಿಳಿದು ಬಂದಿತು. ಕೂಡಲೇ ಅಯೋಧ್ಯೆ ರಾಮಮಂದಿರ ನಿರ್ಮಾಣ ಟ್ರಸ್ಟ್‌ನ ಗಮನಕ್ಕೆ ತಂದಿದ್ದು, ಅದರಂತೆ ಅಯೋಧ್ಯೆಯಿಂದ ಆಗಮಿಸಿದ ಗುರುಗಳ ತಂಡ ಕೃಷ್ಣ ಶೀಲೆಯನ್ನು ವೀಕ್ಷಿಸಿ, ಪರಿಶೀಲಿಸಿ ಒಪ್ಪಿಗೆ ಸೂಚಿಸಿತ್ತು.
ಜಮೀನು ಮಾಲೀಕರಿಗೆ ಖುಷಿಯೋ ಖುಷಿ
ಆ ನಂತರ ಅಯೋಧ್ಯೆಯಿಂದಲೇ ಬಂದ ವಾಹನ ಆರು ತಿಂಗಳ ಹಿಂದೆಯೇ ಎರಡು ಶಿಲೆಯನ್ನು ಕೊಂಡೊಯ್ದಿತ್ತು. ಅದಾದ ಬಳಿಕ ಮತ್ತೆ ಮೂರು ಶಿಲೆಯನ್ನು ಅಯೋಧ್ಯೆಗೆ ಕೊಂಡೊಯ್ಯಲಾಗಿದೆ. ಶಿಲೆಯಲ್ಲಿ ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ದೇವರ ಮೂರ್ತಿ ಕೆತ್ತನೆಗಾಗಿ ಬಳಸಿಕೊಂಡಿದ್ದಾರೆ ಎಂದು ಜಮೀನು ಮಾಲೀಕರಾದ ರಾಮದಾಸ್ ಹೇಳಿದ್ದು, ಅಲ್ಲದೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಬಾಲರಾಮನ (ರಾಮಲಲ್ಲಾ) ಮೂರ್ತಿ ಆಯ್ಕೆಯಾಗಿರುವುದು ಖುಷಿ ತಂದಿರುವುದಾಗಿ ತಿಳಿಸಿದ್ದಾರೆ.
ರಾಮಲಲ್ಲಾ ಮೂರ್ತಿ ಕೆತ್ತನೆಗೆ ಬಳಕೆಯಾದ ಕಲ್ಲು ನಮ್ಮ ಜಮೀನಿನಲ್ಲಿ ದೊರೆತದ್ದು ನಮ್ಮ ಪೂರ್ವ ಜನ್ಮದ ಪುಣ್ಯ, ಅಯೋಧ್ಯೆ ಟ್ರಸ್ಟ್‌ನವರಿಗೆ ಕಲ್ಲನ್ನು ಯಾವುದೇ ಹಣ ಪಡೆಯದೇ ದಾನವಾಗಿ ಕೊಟ್ಟಿದ್ದೇವೆ. ಈಗ ಇದೇ ಕಲ್ಲನ್ನು ನಂಜನಗೂಡು ತಾಲೂಕಿನ ಚಂದ್ರವಾಡಿ ಗ್ರಾಮದ ರಾಚಪ್ಪಾಜಿ ದೇವರ ಮೂರ್ತಿ ಕೆತ್ತನೆಗೂ ಕೇಳಿದ್ದು, ಅಲ್ಲಿಗೆ ನಾನೇ ಮೂರ್ತಿ ಕೆತ್ತನೆ ಮಾಡಿಸಿ ಕೊಡುವುದಾಗಿಯೂ ಹೇಳಿದ್ದಾರೆ. ತಮ್ಮ ಊರಿನ ಶಿಲೆ ರಾಮಮಂದಿರದಲ್ಲಿ ರಾಮಲಲ್ಲನಾಗಿ ಪ್ರತಿಷ್ಟಾಪನೆ ಆಗುತ್ತಿರುವುದಕ್ಕೆ ಹಾರೋಹಳ್ಳಿ ಗ್ರಾಮಸ್ಥರು ಸಂತಸಪಡುತ್ತಿದ್ದಾರೆ.
-
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Mysuru-Nanjangud special train: ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ: ಸಚಿವ ವಿ.ಸೋಮಣ್ಣ ಮಾಹಿತಿ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್












Click it and Unblock the Notifications