• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಸಾಡಿದ್ದ ರೈಲು ಬೋಗಿಗಳೀಗ ಮೈಸೂರಿನ ಈ ಮಕ್ಕಳ ಸುಂದರ ಪಾಠ ಶಾಲೆ

By Coovercolly Indresh
|

ಮೈಸೂರು, ಜನವರಿ 14: ಶತಮಾನಗಳ ಇತಿಹಾಸವಿರುವ ಮೈಸೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆಯಲ್ಲಿತ್ತು. ಪುರಾತನ ಕಟ್ಟಡವಾದ ಕಾರಣ, ಯಾವ ಸಮಯದಲ್ಲಿ ಕಟ್ಟಡ ಕಳಚಿ ಬೀಳುವುದೋ ಎಂಬ ಆತಂಕದ ನಡುವೆಯೇ ಪಾಠ ಪ್ರವಚನಗಳು ಸಾಗುತ್ತಿದ್ದವು. ಹೀಗಿದ್ದಾಗ ಈ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಇಲಾಖೆ ಅಧಿಕಾರಿಗಳು, ಇಲ್ಲಿ ಮಕ್ಕಳಿಗೆ ಪಾಠ ಮಾಡದಂತೆ ಆದೇಶಿಸಿದರು. ಮುಂದೇನು ಎಂಬ ಯೋಚನೆ ಮಕ್ಕಳಲ್ಲಿ, ಶಿಕ್ಷಕರಲ್ಲಿ ತುಂಬಿಕೊಂಡಿತ್ತು. ಕೆಲ ಮಕ್ಕಳ ಪೋಷಕರು ಶಾಲೆ ಬಿಡಿಸುವ ಯೋಚನೆಯಲ್ಲೂ ಇದ್ದರು.

ಆಗ ಹೊರಬಂದಿದ್ದೇ ಈ ಆಲೋಚನೆ. ರೈಲ್ವೆ ಇಲಾಖೆ ಹಾಗೂ ಶಾಲಾ ಶಿಕ್ಷಕರ ಪರಿಶ್ರಮದಿಂದ ಉಪಯೋಗಕ್ಕೆ ಬಾರದೆ ಮೂಲೆಯಲ್ಲಿ ಬಿಸಾಡಿದ್ದ ರೈಲ್ವೆ ಬೋಗಿಗಳೇ ಈಗ ಮಕ್ಕಳಿಗೆ ಚೆಂದದ ಶಾಲೆಯಾಗಿದೆ. ನಗರದ ರೈಲ್ವೆ ಇಲಾಖೆಯ ಜಾಗದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿಭಿನ್ನ ಕಟ್ಟಡದ ಕಥೆಯಿಲ್ಲಿದೆ...

 ರೈಲ್ವೆ ಕಾರ್ಯಾಗಾರ ತಂಡದ ಮಾಸ್ಟರ್ ಪ್ಲಾನ್

ರೈಲ್ವೆ ಕಾರ್ಯಾಗಾರ ತಂಡದ ಮಾಸ್ಟರ್ ಪ್ಲಾನ್

ಸರ್ಕಾರಿ ಶಾಲೆಯನ್ನು ರೈಲ್ವೆ ಬೋಗಿಯನ್ನಾಗಿ ಪರಿವರ್ತಿಸಿ ಪಾಠ ಮಾಡುವುದನ್ನು ಕೇಳಿದ್ದೇವೆ. ಆದರೆ ಈ ಶಾಲೆಯಲ್ಲಿ ನಿಜವಾದ ರೈಲ್ವೆ ಬೋಗಿಯನ್ನೇ ಶಾಲೆಯನ್ನಾಗಿ ಪರಿವರ್ತಿಸಿ ಪಾಠ ಮಾಡಲಾಗುತ್ತಿದೆ. ಶಾಲೆ ತೊರೆಯಲು ಮುಂದಾಗಿದ್ದ ಮಕ್ಕಳೇ ಶಾಲೆಯನ್ನು ಹುಡುಕಿಕೊಂಡು ಬರುತ್ತಿದ್ದಾರೆ. ರೈಲ್ವೆ ಕಾರ್ಯಾಗಾರದ ಸುಪರ್ದಿಯಲ್ಲಿರುವ ಶಾಲೆಯು ಸ್ಥಾಪನೆಯಾಗಿದ್ದು ಮಹಾರಾಜರ ಕಾಲದಲ್ಲಿ. ಪುರಾತನ ಕಟ್ಟಡವೂ ಆಗಿದ್ದ ಈ ಶಾಲೆ ಶಿಥಿಲಾವಸ್ಥೆಗೆ ತಲುಪಿತ್ತು. ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಬಂದು ಪರಿಶೀಲಿಸಿ ಪ್ರಕಟಿಸಿದರು. ಇನ್ನೇನು ಮಾಡಬೇಕೆಂದು ಅರಿಯದ ಇಲ್ಲಿನ ಶಿಕ್ಷಕರು ತಲೆ ಮೇಲೆ ಕೈ ಹೊತ್ತು ಕುಳಿತಾಗ ಎದುರಾದದ್ದೇ ರೈಲ್ವೆ ಕಾರ್ಯಾಗಾರ ತಂಡದ ಮಾಸ್ಟರ್‌ ಪ್ಲಾನ್.

ಮರದ ನೆರಳೇ ಈ ಮಕ್ಕಳಿಗೆ ಕ್ಲಾಸ್ ರೂಂ; ಯರ್ರೇನಹಳ್ಳಿ ಸರ್ಕಾರಿ ಶಾಲೆ ಕಥೆಯಿದು

  ಪ್ರತಿಭಟನಾಕಾರರಿಗೆ ಸುರೇಶ್ ಅಂಗಡಿ ಖಡಕ್ ಎಚ್ಚರಿಕೆ | SURESH ANGADI | ONEINDIA KANNADA
   ಪರ್ಯಾಯ ವ್ಯವಸ್ಥೆ ಹುಡುಕಾಟದಲ್ಲಿ ದೊರೆತ ಆಲೋಚನೆ

  ಪರ್ಯಾಯ ವ್ಯವಸ್ಥೆ ಹುಡುಕಾಟದಲ್ಲಿ ದೊರೆತ ಆಲೋಚನೆ

  ಶಾಲೆಯ ಆ ಕಟ್ಟಡವು ರೈಲ್ವೆ ಕಾರ್ಯಾಗಾರದ ಜಾಗದಲ್ಲಿದ್ದ ಕಾರಣ ಶಿಕ್ಷಕ ವೃಂದ ಶಿಕ್ಷಣ ಇಲಾಖೆ ಹಾಗೂ ರೈಲ್ವೆ ಇಲಾಖೆಗೆ ತಮ್ಮ ಕಟ್ಟದ ಅಬಿವೃದ್ಧಿಗೆ ಸಹಕರಿಸಬೇಕೆಂದು ಕೇಳಿಕೊಂಡಿತ್ತು. ಆದರೆ ಶಿಕ್ಷಣ ಇಲಾಖೆ ಈ ಜಾಗ ನಮ್ಮದಲ್ಲ, ನೀವು ರೈಲ್ವೆ ಇಲಾಖೆಗೆ ಕೇಳಿ ಎಂದರು. ರೈಲ್ವೆ ಇಲಾಖೆಗೆ ಕೇಳಿದಾಗ ಇದಕ್ಕೆ ಲಕ್ಷಗಟ್ಟಲೆ ಖರ್ಚಾಗಬಹುದೆಂದು ಅಂದಾಜಿಸಲಾಯಿತು. ಅದರೊಟ್ಟಿಗೆ ಪರ್ಯಾಯವಾಗಿ ಯಾವ ಯೋಜನೆ ರೂಪಿಸಬಹುದೆಂದು ಯೋಚಿಸುತ್ತಿದ್ದಾಗ ಹೊಳೆದದ್ದು ಈ ಪ್ಲಾನ್. ರೈಲ್ವೆ ಬೋಗಿಗಳನ್ನೇ ಶಾಲೆಯಂತೆ ಯಾಕೆ ಮಾಡಿಕೊಳ್ಳಬಾರದು ಎಂಬ ಯೋಚನೆ ಹೊಳೆಯಿತು.

   ತಿಂಗಳ ಅವಧಿಯಲ್ಲಿ ರೂಪುಗೊಂಡಿತು ಚೆಂದದ ಶಾಲೆ

  ತಿಂಗಳ ಅವಧಿಯಲ್ಲಿ ರೂಪುಗೊಂಡಿತು ಚೆಂದದ ಶಾಲೆ

  ರೈಲ್ವೆ ಕಾರ್ಯಾಗಾರದಲ್ಲಿ ಗುಜರಿಗೆ ಹಾಕಬಹುದೆಂದು ಎತ್ತಿಟ್ಟಿದ್ದ ರೈಲ್ವೆ ಬೋಗಿಗಳಿಗೆ ಹೊಸ ರೂಪ ಕೊಟ್ಟು ಅದಕ್ಕೆ ಶಾಲೆಯ ಸಾಮಗ್ರಿಗಳನ್ನು ಅಳವಡಿಸಲಾಯಿತು. ಇದಕ್ಕಾಗಿ ಮೂರು ಕ್ರೈನ್ ಗಳನ್ನು ಬಳಸಿ 2 ರೈಲು ಬೋಗಿಗಳನ್ನು ಶಾಲೆಯ ಮುಂದೆ ಸ್ಥಳಾಂತರಿಸಲಾಯಿತು. ಹಳೆಯ ಬೋಗಿಗೆ ಮೊದಲು ತುಕ್ಕು ಹಿಡಿಯದಂತೆ ಗುಣಮಟ್ಟದ ಪೇಂಟ್ ಮಾಡಿ, ಅದಕ್ಕೆ ಅಂದ ಚೆಂದದ ಕನ್ನಡ ಪದಗಳಿಂದ ರೂಪಕೊಡಲಾಯಿತು. ಬೋಗಿಯೊಳಗೇ ಶಿಕ್ಷಕರ ಕೊಠಡಿಯನ್ನೂ ರೂಪಿಸಲಾಯಿತು. ಒಂದು ಶಾಲೆಯಲ್ಲಿ ಇರಬೇಕಾದ ಎಲ್ಲಾ ಸೌಲಭ್ಯಗಳನ್ನು ಇಲ್ಲಿ ನೀಡಲಾಯಿತು. ಫ್ಯಾನ್‌, ಲೈಟ್ ಎಲ್ಲವನ್ನು ಅಳವಡಿಸಲಾಯಿತು. ಬಯೋ ಟಾಯ್ಲೆಟ್ ವ್ಯವಸ್ಥೆಯನ್ನು ಸಹ ಮಾಡಲಾಯಿತು. ಇವೆಲ್ಲದಕ್ಕೂ ಹಿಡಿದಿದ್ದು ಕೇವಲ 1 ತಿಂಗಳ ಕಾಲಾವಧಿ.

  ಹತ್ತಿ ಬಿಡಿಸುತ್ತಿದ್ದವರನ್ನು ಶಾಲೆ ಮೆಟ್ಟಿಲು ಹತ್ತಿಸಿದ ಅಧಿಕಾರಿಗಳು!

   ಒಂದು ಬೋಗಿಯಲ್ಲಿ ಮೂವತ್ತಕ್ಕೂ ಹೆಚ್ಚು ಮಕ್ಕಳ ಕಲಿಕೆ

  ಒಂದು ಬೋಗಿಯಲ್ಲಿ ಮೂವತ್ತಕ್ಕೂ ಹೆಚ್ಚು ಮಕ್ಕಳ ಕಲಿಕೆ

  2 ಬೋಗಿಗಳಲ್ಲಿ ಎರಡೆರಡು ತರಗತಿಗಳೆಂಬಂತೆ ಒಟ್ಟು ತರಗತಿಗಳನ್ನು ವಿಭಾಗಿಸಲಾಗಿದೆ. ಒಂದು ಬೋಗಿಯಲ್ಲಿ 30ಕ್ಕೂ ಹೆಚ್ಚು ಮಕ್ಕಳು ಕುಳಿತು ಪಾಠ ಕೇಳಬಹುದು. ಇವೆಲ್ಲದಕ್ಕೂ ಉಚಿತ ವಿದ್ಯುತ್‌ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿದ ರೈಲ್ವೆ ಇಲಾಖಾ ಅಧಿಕಾರಿಗಳಾದ ಮಾಯಗಣ್ಣನವರು, "ಶಾಲಾ ಶಿಕ್ಷಕರು ಈ ಶಾಲೆ ಶಿಥಿಲಾವಸ್ಥೆಯಲ್ಲಿದೆ ಎಂದಾಗ ಹೀಗೊಂದು ಯೋಚನೆ ಹೊಳೆಯಿತು. ಇದಕ್ಕೆ ನಮ್ಮ ಹಳೆಯ ಎಲ್ಲಾ ವಸ್ತುಗಳನ್ನು ಬಳಸಿಕೊಳ್ಳಲಾಗಿದೆ" ಎಂದು ತಿಳಿಸಿದರು.

  ರೈಲು ಬೋಗಿಯ ಶಾಲೆಯನ್ನು ಕಂಡ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀಯವರು ತಮ್ಮ ಶ್ರಮ ಫಲಿಸಿತೆಂಬ ಸಂತಸದಲ್ಲಿದ್ದಾರೆ. ಈ ತೆರನಾದ ನೂತನ ಕಾರ್ಯಕ್ಕೆ ನಾಂದಿ ಹಾಡಿದ ರೈಲ್ವೆ ಇಲಾಖೆ ತಂಡದ ಪರಿಶ್ರಮಕ್ಕೆ ನಿಜಕ್ಕೂ ಧನ್ಯವಾದ ಹೇಳಲೇಬೇಕು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  By the effort of Mysore Railway Department and the school teachers, railway bogies became classrooms for students
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more