ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ರೇಸ್ ಕ್ಲಬ್ ಪುನರಾರಂಭ; ಆನ್ ಲೈನ್ ಬೆಟ್ಟಿಂಗ್‌ಗೆ ಅವಕಾಶ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 9: ಕೊರೊನಾ ಲಾಕ್ ಡೌನ್ ನಿಂದ ಬಂದ್ ಆಗಿದ್ದ ಮೈಸೂರು ರೇಸ್ ಕ್ಲಬ್ ಇದೀಗ ಪುನರಾರಂಭಗೊಂಡಿದ್ದು, ದೇಶದಲ್ಲೇ ಮೊದಲ ಬಾರಿಗೆ ಆನ್ ಲೈನ್ ಬೆಟ್ಟಿಂಗ್ ಆರಂಭಿಸಿದೆ.

ಕೊರೊನಾ ಲಾಕ್ ಡೌನ್ ನಿಂದಾಗಿ ಕಳೆದ 8 ತಿಂಗಳಿಂದ ರೇಸ್ ಕ್ಲಬ್ ಬಂದ್ ಆಗಿತ್ತು. ಇದೀಗ ಮತ್ತೆ ರೇಸ್ ಪುನರಾರಂಭವಾಗಿದ್ದು, ಇನ್ನು ಮುಂದೆ ಚಳಿಗಾಲದ ರೇಸ್ ಸಂಪೂರ್ಣ ಆನ್ ಲೈನ್ ಆಗಿದೆ. ರೇಸ್ ಕ್ಲಬ್ ನಿಂದ ಆನ್ ಲೈನ್ ಬೆಟ್ಟಿಂಗ್ ಪೋರ್ಟಲ್ ಆರಂಭಿಸಲಾಗಿದೆ.

ಮೈಸೂರಿನಲ್ಲಿ ರೇಸುಗಳು ಆರಂಭ, ಪ್ರವೇಶ ದರ 10 ರು.ಮೈಸೂರಿನಲ್ಲಿ ರೇಸುಗಳು ಆರಂಭ, ಪ್ರವೇಶ ದರ 10 ರು.

ರೇಸ್ ಪ್ರಿಯರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಆನ್ ಲೈನ್ ಬೆಟ್ಟಿಂಗ್ ಆರಂಭ ಮಾಡಲಾಗಿದ್ದು, ಮನೆಯಲ್ಲೇ ಕೂತು ರೇಸ್ ವೀಕ್ಷಿಸಲು, ಬೆಟ್ಟಿಂಗ್ ಆಡಲು ಅವಕಾಶ ಮಾಡಿಕೊಡಲಾಗಿದೆ. ರೇಸ್ ಕ್ಲಬ್ ಆನ್ ಲೈನ್ ಬೆಟ್ಟಿಂಗ್ ನಡೆಸಲು ರಾಜ್ಯ ಸರ್ಕಾರದಿಂದ ಅನುಮತಿ ನೀಡಿದ್ದು, ಕೊರೊನಾ ಹಿನ್ನೆಲೆ ಜನಸಂದಣಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ.

Mysuru: Race Club Resumed After 8 Months And Started Online Betting

www.betmysore.com ಹಾಗೂ www.turfwinners.com ಎಂಬ ಎರಡು ಆನ್ ಲೈನ್ ಪೋರ್ಟಲ್ ನಲ್ಲಿ ಬೆಟ್ಟಿಂಗ್ ಗೆ ಅವಕಾಶ ನೀಡಲಾಗಿದೆ. ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಮೈಸೂರು ರೇಸ್ ಕ್ಲಬ್ ಅಧ್ಯಕ್ಷ ನಿತ್ಯಾನಂದ್ ರಾವ್, ಕಳೆದ 8 ತಿಂಗಳು ರೇಸ್ ಕ್ಲಬ್ ಬಂದ್ ನಿಂದಾಗಿ ಸುಮಾರು 3 ಕೋಟಿಯಷ್ಟು ನಷ್ಟ ಉಂಟಾಗಿತ್ತು. ಇದೀಗ ರಾಜ್ಯ ಸರ್ಕಾರ ಮತ್ತೆ ಅವಕಾಶ ನೀಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
English summary
Mysore Race Club, which has been closed since 8 months due to Coronavirus Lockdown has now resumed and started online betting,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X