ಫ್ರೀ ಕಾಶ್ಮೀರ ವಿವಾದ: ಪೋಲಿಸರಿಂದ ನಳಿನಿಗೆ ಪ್ರಶ್ನೆಗಳ ಸುರಿಮಳೆ

ಮೈಸೂರು, ಜನವರಿ 12: ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ವೇಳೆ "ಫ್ರೀ ಕಾಶ್ಮೀರ' ಫಲಕ ಪ್ರದರ್ಶನ ಮಾಡಿದ್ದ ವಿಶ್ವವಿದ್ಯಾಲಯದ ಹಳೇ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಅವರನ್ನು ಮೈಸೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಮೈಸೂರಿನ ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್, ನರಸಿಂಹರಾಜದ ಎಸಿಪಿ ಶಿವಶಂಕರ್, ಜಯಲಕ್ಷ್ಮಿಪುರಂ ಠಾಣೆ ಇನ್ಸ್ ಪೆಕ್ಟರ್ ಸುರೇಶ್‌ಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ.

ನಿನ್ನೆ ಬೆಳಗ್ಗೆ ಸುಮಾರು 10 ಗಂಟೆಗೆ ಜಯಲಕ್ಷ್ಮಿಪುರಂ ಠಾಣೆಗೆ ನಳಿನಿ ಹಾಜರಾಗಿದ್ದರು. 11 ಗಂಟೆಯಿಂದ ವಿಚಾರಣೆ ಆರಂಭ ಮಾಡಿದ್ದರು. ಸಂಜೆ 5.30ರವರೆಗೆ ನಡೆದ ಪೊಲೀಸರ ವಿಚಾರಣೆ ನಡೆಸಿದ್ದಾರೆ.

Questions From Mysuru Police To Nalini

ಪ್ರತಿಭಟನೆ ವೇಳೆ "ಫ್ರಿ ಕಾಶ್ಮೀರ' ಫ್ಲೆ ಕಾರ್ಡ್ ಪ್ರದರ್ಶನದ ಬಗ್ಗೆ ಸುಮಾರು 100 ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರ ಪಡೆಯಲಾಗಿದೆ. ನಳಿನಿ ಬಾಲಕುಮಾರ್ ಅವರ ಪ್ರತಿ ಹೇಳಿಕೆಗಳನ್ನು ಲಿಖಿತ ರೂಪದಲ್ಲಿ ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.

Questions From Mysuru Police To Nalini

ಅಗತ್ಯವಿರುವ ಮಾಹಿತಿಗಳು ವಿಡಿಯೋದಲ್ಲಿ ಕೂಡ ದಾಖಲು ಮಾಡಿದ್ದು, ಸದ್ಯ ಮೊದಲ ದಿನದ ವಿಚಾರಣೆಯನ್ನು ಪೊಲೀಸರು ಮುಗಿಸಿದ್ದಾರೆ. ಅಗತ್ಯಬಿದ್ದಲ್ಲಿ ಮತ್ತೆ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+