ಪ್ರತಾಪ ಸಿಂಹಗೆ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಯೋಗ್ಯತೆಯಿಲ್ಲ: ಪುಷ್ಪ ಅಮರ್‌ನಾಥ್

ಮೈಸೂರು, ಆಗಸ್ಟ್ 24: ಅಭಿವೃದ್ಧಿ ವಿಚಾರ ಮಾತನಾಡಲು ಬನ್ನಿ ಎಂದರೆ ಪಲಾಯನ ಮಾಡುವ ಪ್ರತಾಪ್‌ ಸಿಂಹರಿಗೆ ಎದುರು ಬಂದು ಚರ್ಚೆ ಮಾಡುವ ದೈರ್ಯವಿಲ್ಲ, ಅಂತಹದರಲ್ಲಿ ಸಿದ್ದರಾಮಯ್ಯರ ಬಗ್ಗೆ, ಅವರ ಪತ್ನಿಯ ಬಗ್ಗೆ ಯೋಗ್ಯತೆ ಇಲ್ಲ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಕಿಡಿ ಕಾರಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಪ್ರತಾಪ್‌ ಸಿಂಹರಿಗೆ ಶೀಘ್ರದಲ್ಲಿ ಸಿಡಿ ಸಿಂಹ ಎಂದು ಕರೆಯಬೇಕು. ರಾಜಕಾರಣಿಗಳಲ್ಲಿ ಇವರ ವಿಡಿಯೋಗಳಿರುವಷ್ಟು ಬೇರೆ ಯಾರದ್ದು ಇಲ್ಲ, ಚರ್ಚೆಗೆ ಕರೆ ಲಕ್ಷ್ಮಣ ಅವರ ಪಂಥಾಹ್ವಾನ ನೀಡಿದರೆ ಪಲಾಯನ ಮಾಡುತ್ತಾರೆ. ಎದುರಿಗೆ ಬಂದು ಮಾತನಾಡುವ ಶಕ್ತಿಯಿಲ್ಲ. ಅಂತಹದರಲ್ಲಿ ಸಿದ್ದರಾಮಯ್ಯರ ಬಗ್ಗೆ ಮಾತನಾಡುತ್ತಾರೆ. ದೇವಾಲಯಕ್ಕೆ ಬಾಡೂಟ ಮಾಡಿ ಹೋಗಿದ್ದಾರೆ ಎಂಬ ವಿಚಾರವನ್ನಿಟ್ಟುಕೊಂಡು ಎಂದು ಟೀಕಿಸುತ್ತಾರೆ" ಎಂದು ಕಿಡಿಕಾರಿದರು

ನಾನು ದಲಿತೆ, ನನ್ನ ಆಹಾರ ಪದ್ದತಿ ಬೇರೆ, ಲಿಂಗಾಯಿತರ ಆಹಾರ ಪದ್ದತಿ ಬೇರೆ, ಬ್ರಾಹ್ಮಣರ ಆಹಾರ ಪದ್ದತಿಯೇ ಬೇರೆ. ನಾವು ದೇವರಿಗೆ ಕುರಿ, ಕೋಳಿ ಬಾಡೂಟವನ್ನು ದೇವರಿಗೆ ನೈವೇದ್ಯ ಇಡುತ್ತೇವೆ, ಆಹಾರ ನನಗೆ ಸಂವಿಧಾನ ಕೊಟ್ಟಿರುವ ಹಕ್ಕು, ಹಾಗಂತ ದೇವಾಲಯಕ್ಕೆ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಕಾನೂನು ಇಲ್ಲ . ಇಂದು ಮೇಲಿನ ಜಾತಿಯವರು ಕೂಡ ಮಾಂಸ ತಿನ್ನುತ್ತಾರೆ. ಆದರೆ ಇದನ್ನು ಇಟ್ಟುಕೊಂಡು ಪ್ರತಾಪ್ ಸಿಂಹ ಕೀಳು ರಾಜಕೀಯ ಮಾಡುತ್ತಿದ್ದಾರೆ, ಅವರ ತಲೆ ಖಾಲಿಯಾಗಿದೆ ಎಂದು ವ್ಯಂಗ್ಯವಾಡಿದರು.

Pushpa Amarnath Slams Pratap Simha for Comment on Siddaramaiah

ಇನ್ನು ಸಿದ್ದರಾಮಯ್ಯ ಪತ್ನಿ ಬಗ್ಗೆ ಮಾತನಾಡುತ್ತೀರಿ, ಆದರೆ ಸಿದ್ದರಾಮಯ್ಯ ಗೌರವಯುತವಾಗಿ ಪತ್ನಿಯನ್ನು ಚೆನ್ನಾಗಿ ಬಾಳಿಸುತ್ತಿದ್ದಾರೆ. ಆದರೆ ನಿಮ್ಮ ಪ್ರಧಾನಿ ಪತ್ನಿಯಿದ್ದರೂ ಪತ್ನಿಯಿಲ್ಲ ಎಂದು ಹೇಳುತ್ತಾರೆ, ನೀವು ಪತ್ನಿಯನ್ನು ತಂಗಿ ಎಂದು ಹೇಳಿ ನಿವೇಶನ ಪಡೆದ್ದೀರಾ, ನಿಮ್ಮಂತಹವರಿಗೆ ಸಿದ್ದರಾಮಯ್ಯರ ಹೆಸರನ್ನು ಹೇಳಲು ನಾಲಾಯಕ್ಕು ಎಂದು ಪ್ರತಾಪ್‌ ಸಿಂಹ ವಿರುದ್ಧ ಪುಷ್ಪಾ ಅಮರನಾಥ್‌ ಕಿಡಿ ಕಾರಿದರು.

ಯುವಕರಿಗೆ ಉದ್ಯೋಗ ಕಲ್ಪಿಸದೆ ಬಡವರ ಮನೆಯ ಮಕ್ಕಳನ್ನು ಧರ್ಮದ ಹೆಸರಿನಲ್ಲಿ ಬಿಜೆಪಿ ಬಲಿ ಕೊಡುತ್ತಿದೆ. ಇಂತಹ ಕೃತ್ಯಗಳಿಗೆ ತಮ್ಮ ಮಕ್ಕಳನ್ನು ಕಳಿಸದ ಬಿಜೆಪಿ ನಾಯಕರಿಗೆ ನೈತಿಕತೆ, ಮಾನವೀಯತೆ, ಮನುಷ್ಯತ್ವ ಇದೆಯಾ? ಎಂದ ಅವರು ಮೈಸೂರಿಗೆ ಬಿಜೆಪಿ ಶಾಸಕ ಬಿ.ಎಸ್‌.ಯಡಿಯೂರಪ್ಪರಿಗೂ ಕಪ್ಪುಬಾವುಟ ಪ್ರದರ್ಶಿಸಿ, ಅವರ ಕಾರಿನ ಮೇಲೂ ನಾವು ಮೊಟ್ಟೆ ಹೊಡೆಯಬಹುದಿತ್ತು. ಆದರೆ, ಅದು ಕಾಂಗ್ರೆಸ್‌ ಸಂಸ್ಕೃತಿಯಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+