• search
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು :ಪ್ರೊ.ಕೆ.ಎಸ್‌.ಭಗವಾನ್‌ಗೆ ಬೆದರಿಕೆ ಪತ್ರ

|

ಮೈಸೂರು, ಸೆಪ್ಟೆಂಬರ್, 10 : 'ನೀವು ಸುರಕ್ಷಿತ ಎಂದು ಭಾವಿಸಬೇಡಿ, ಹಾವಿನ ದ್ವೇಷ 12 ವರುಷ, 3 ಯಶಸ್ವಿಯಾಗಿದೆ, ಮುಂದೆ ನೀವು. ನಾವು ಬಂದರೆ ಯಾವ ಪೊಲೀಸರು ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ' ಎಂದು ಅನಾಮಿಕ ವ್ಯಕ್ತಿಗಳಿಂದ ಸಾಹಿತಿ ಪ್ರೊ.ಕೆ.ಎಸ್‌.ಭಗವಾನ್‌ ಅವರಿಗೆ ಬೆದರಿಕೆ ಪತ್ರ ಬಂದಿದೆ.

ಬುಧವಾರ ಮಧ್ಯಾಹ್ನ 12.45ರ ಸುಮಾರಿಗೆ ಮೈಸೂರಿನ ಕುವೆಂಪು ನಗರದಲ್ಲಿರುವ ಪ್ರೊ.ಕೆ.ಎಸ್.ಭಗವಾನ್ ಅವರ ನಿವಾಸಕ್ಕೆ ಅಂಚೆ ಮೂಲಕ ಈ ಬೆದರಿಕೆ ಪತ್ರ ಬಂದಿದೆ. ಪೋಸ್ಟಲ್ ಕವರ್‌ನಲ್ಲಿ ಇಂಗ್ಲಿಷ್‌ನಲ್ಲಿ ಟೈಪ್ ಮಾಡಿದ ಪತ್ರವನ್ನು ಇಟ್ಟು ಕಳುಹಿಸಲಾಗಿದೆ. [ಭಗವಾನ್ ವಿರುದ್ಧ ಟ್ವೀಟ್, ಯುವಕನ ಬಂಧನ]

ಧಾರವಾಡದ ಕಲ್ಯಾಣನಗರದಲ್ಲಿ ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾದ ಬಳಿಕ ಮೈಸೂರಿನಲ್ಲಿರುವ ಪ್ರೊ.ಕೆ.ಎಸ್‌.ಭಗವಾನ್‌ ಅವರ ನಿವಾಸಕ್ಕೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಭಗವಾನ್‌ ಅವರು ಹಲವು ವಿಚಾರಗಳ ಕುರಿತು ವಿವಾದಿತ ಹೇಳಿಕೆಗಳನ್ನು ನೀಡಿದ್ದರಿಂದ ಈ ಭದ್ರತೆ ನೀಡಲಾಗಿದೆ. [ಎಂಎಂ ಕಲಬುರ್ಗಿ ಅವರ ಮೇಲೆ ದಾಳಿ ನಡೆದಿದ್ದು ಹೇಗೆ?]

ಬುಧವಾರ ತಮಗೆ ಬಂದ ಪತ್ರವನ್ನು ಕೆ.ಎಸ್‌. ಭಗವಾನ್‌ ಅವರು ತಮ್ಮ ನಿವಾಸದ ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕುವೆಂಪು ನಗರ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ಪತ್ರ ಎಲ್ಲಿಂದ ಬಂತು? ಎಂಬ ತನಿಖೆ ನಡೆಯುತ್ತಿದೆ. [ಭಗವದ್ಗೀತೆ ಸುಡಲೆತ್ನಿಸಿದ ಭಗವಾನ್ ವಿರುದ್ಧ ದೂರು]

ಪತ್ರದಲ್ಲಿ ಏನಿದೆ? : 'ನೀವು ಸುರಕ್ಷಿತ ಎಂದು ಭಾವಿಸುವುದು ಬೇಡ, ನಾವು ಗುರಿಯನ್ನು ಎಂದೂ ತಪ್ಪಿಲ್ಲ. ನಮಗೆ ಗೊತ್ತು ಏನು ಮಾಡಬೇಕು ಎಂದು. ನಾವು ಬಂದರೆ ಯಾವ ಪೊಲೀಸರು ನಿಮ್ಮನ್ನು ರಕ್ಷಿಸಲಾರರು. ಕೌಂಟ್ ಯುವರ್ ಡೇಸ್' ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.

ಕೆ.ಎಸ್‌. ಭಗವಾನ್‌ ವಿವಾದಿತ ಹೇಳಿಕೆಗಳು : 'ಭಗವದ್ಗೀತೆಯನ್ನು ಸುಟ್ಟು ಹಾಕಬೇಕು', 'ತುಂಬು ಗರ್ಭಿಣಿ ಸೀತೆಯನ್ನು ಕಾಡಿಗೆ ಕಳುಹಿಸಿದ ಶ್ರೀರಾಮ ಆದರ್ಶನಾಗುವುದಿಲ್ಲ. 16,000 ಮಡದಿಯರನ್ನು ಹೊಂದಿದ್ದ ಶ್ರೀ ಕೃಷ್ಣ ಪಾಪಿ' ಎಂದು ಪ್ರೊ.ಕೆ.ಎಸ್.ಭಗವಾನ್ ವಿವಾದಿತ ಹೇಳಿಕೆಗಳನ್ನು ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On Wednesday Prof K.S.Bhagwan received an anonymous letter warning to kill him. The letter in English was delivered by the postman at Bhagwan’s house on Kuvempunagar Mysuru. Letter was handed over to Kuvempunagar police, who have been guarding the house round the clock.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more