• search
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿರ್ಮಲಾ ಸೀತಾರಾಮನ್ ಸಿಟ್ಟು, ಪ್ರತಾಪ್ ಸಿಂಹ ಸಮಜಾಯಿಶಿ

By Manjunatha
|
   ನಿರ್ಮಲಾ ಸೀತಾರಾಮನ್ ಸಿಟ್ಟು ಮಾಡಿಕೊಂಡದ್ದು ಸ್ವಾಭಾವಿಕ ಎಂದ ಪ್ರತಾಪ್ ಸಿಂಹ..! | Oneindia Kannada

   ಮೈಸೂರು, ಆಗಸ್ಟ್ 25: ನಿನ್ನೆ ಕೊಡಗಿಗೆ ಭೇಟಿ ನೀಡಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರು ಸುದ್ದಿಗೋಷ್ಠಿ ಸಮಯದಲ್ಲಿ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಮತ್ತು ಜಿಲ್ಲಾಧಿಕಾರಿ ಮೇಲೆ ಕೋಪಗೊಂಡಿದ್ದರು. ಇದು ವಿವಾದ ಹುಟ್ಟುಹಾಕಿತ್ತು. ಈಗ ಇದಕ್ಕೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.

   ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿ ವಿಡಿಯೋ ಅಪ್‌ಲೋಡ್ ಮಾಡಿರುವ ಪ್ರತಾಪ್ ಸಿಂಹ ಘಟನೆಯನ್ನು ವಿವರಿಸಿ, ನಿರ್ಮಲಾ ಸೀತಾರಾಮನ್ ಅವರು ಸಿಟ್ಟಾಗಿದ್ದು 'ಸ್ವಾಭಾವಿಕ' ಮತ್ತು 'ಸಣ್ಣ ಘಟನೆ' ಎಂದಿದ್ದಾರೆ.

   ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗರಂ ಆಗಿದ್ದೇಕೆ? ಇಲ್ಲಿದೆ ಕಾರಣ

   ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿಗೆ ಬರುವ ಮುನ್ನಾ ಸೇನೆಯ ಮಾಜಿ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದರು ಆ ಚರ್ಚೆ ಸ್ವಲ್ಪ ದೀರ್ಘವಾಗಿ ನಡೆಯಿತು ಆದರೆ ಚರ್ಚೆಯ ನಡುವಿನಲ್ಲೇ ನಿರ್ಮಲಾ ಅವರನ್ನು ಎಬ್ಬಿಸಿ ಕರೆದುಕೊಂಡು ಬರಲಾಯಿತು. ಇದರಿಂದ ಅವರು ಸಿಟ್ಟಾಗಿದ್ದರು ಎಂದು ಪ್ರತಾಪ್ ಸಿಂಹ ಸಮಜಾಯಿಶಿ ನೀಡಿದ್ದಾರೆ.

   ರಾಜಕೀಯದಲ್ಲಿ ಯಾರೂ ಋಷಿ ಅಲ್ಲ

   ರಾಜಕೀಯದಲ್ಲಿ ಯಾರೂ ಋಷಿ ಅಲ್ಲ

   ಸಾರ್ವಜನಿಕ ಜೀವನದಲ್ಲಿ ಇದು ಅತಿ ಸಾಮಾನ್ಯ ಎಂದಿರುವ ಪ್ರತಾಪ್ ಸಿಂಹ ತಮ್ಮ ಪಕ್ಷದ ಸಚಿವೆಯ ಬೆಂಬಲಕ್ಕೆ ನಿಂತಿದ್ದಾರೆ. ಇಲ್ಲಿ ಯಾರೂ ಋಷಿಗಳಲ್ಲ, ಅವರಿಗೆ ಸಿಟ್ಟು ಬಂದದ್ದು ಸ್ವಾಭಾವಿಕ, ಸೇನೆಯನ್ನು ಪರಿವಾರ ಎಂದು ಅವರು ಭಾವಿಸಿದ್ದಾರೆ ಹಾಗಾಗಿ ಅದಕ್ಕೆ ಅವರು ಮಹತ್ವ ನೀಡಿದರು ಎಂದು ಅವರು ಹೇಳಿದ್ದಾರೆ.

   ಈಗ ಕೊಟ್ಟಿರುವುದು ಅಂತಿಮವಲ್ಲ

   ಈಗ ಕೊಟ್ಟಿರುವುದು ಅಂತಿಮವಲ್ಲ

   ನಿರ್ಮಲಾ ಸೀತಾರಾಮನ್ ಅವರು ಕೇವಲ 8 ಕೋಟಿ ಅನುದಾನ ಕೊಟ್ಟಿದ್ದಾರೆ ಎಂಬ ಚರ್ಚೆಗೂ ಉತ್ತರ ನೀಡಿದ ಪ್ರತಾಪ್ ಸಿಂಹ ಅವರು, ಈಗ ಅವರು ತಮ್ಮ ಸಂಸದರ ನಿಧಿ ಹಾಗೂ ತಮ್ಮ ರಕ್ಷಣಾ ಇಲಾಖೆಯಿಂದ ಒಟ್ಟು ಸೇರಿ 8 ಕೋಟಿ ನೀಡಿದ್ದಾರೆ. ದೆಹಲಿಗೆ ಹೋಗಿ ಗೃಹ ಸಚಿವರನ್ನು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರನ್ನು ಭೇಟಿ ಮಾಡಿ ಜೊತೆಗೆ ಪ್ರಧಾನಿಗಳನ್ನೂ ಭೇಟಿ ಮಾಡಿ ಕೊಡಗಿನ ಪರಿಸ್ಥಿತಿ ವಿವರಿಸಿ ಸೂಕ್ತ ಅನುದಾನ ಬಿಡುಗಡೆ ಮಾಡಿಸುವುದಾಗಿ ನಿರ್ಮಲಾ ಅವರು ಹೇಳಿರುವುದಾಗಿ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ.

   ಸಾ.ರಾ.ಮಹೇಶ್‌ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

   ರಾಜ್ಯ ಸರ್ಕಾರವನ್ನು ಟೀಕಿಸಲು ನಮ್ಮಲ್ಲಿ ಸರಕಿದೆ

   ರಾಜ್ಯ ಸರ್ಕಾರವನ್ನು ಟೀಕಿಸಲು ನಮ್ಮಲ್ಲಿ ಸರಕಿದೆ

   ಕೊಡಗು ಸಂಕಷ್ಟದಲ್ಲಿದೆ, ಈ ಸಮಯದಲ್ಲಿ ಇಂತಹಾ ಸಣ್ಣ ವಿಷಯ ಮುಂದಿಟ್ಟುಕೊಂಡು ರಾಜಕೀಯ ಕೆಸರೆರೆಚಾಟ ಮಾಡಲು ಇದು ಸಮಯವಲ್ಲ ಎಂದಿರುವ ಪ್ರತಾಪ್ ಸಿಂಹ ಅವರು, ರಾಜ್ಯ ಸರ್ಕಾರವನ್ನು ಟೀಕಿಸಲು ಬಿಜೆಪಿ ಸಾಕಷ್ಟು ಕಾರಣಗಳಿದೆ. ಬೆಂಗಳೂರಿಗೆ ಕುಡಿಯುವ ನೀರು ಕೊಡುತ್ತಿರುವ ಕೊಡಗಿಗೆ ರಾಜ್ಯ ಸರ್ಕಾರ ಎಷ್ಟು ಕೊಟ್ಟಿದೆ ಎಂದು ನಾವೂ ಪ್ರಶ್ನಿಸಬಹುದು ಆದರೆ ಈಗ ಅದಕ್ಕೆ ಸಮಯವಲ್ಲ ಎಲ್ಲರೂ ಸೇರಿ ಕೊಡಗಿನಲ್ಲಿ ಪುನರ್ವಸತಿ ಕಲ್ಪಿಸುವ ಕಾರ್ಯ ಮಾಡೋಣ ಎಂದು ಹೇಳಿದ್ದಾರೆ.

   ಒಕ್ಕಲಿಗ ಸಮುದಾಯ ತಲೆ ತಗ್ಗಿಸುವ ಕಾರ್ಯ ಮಾಡಬೇಡಿ

   ಒಕ್ಕಲಿಗ ಸಮುದಾಯ ತಲೆ ತಗ್ಗಿಸುವ ಕಾರ್ಯ ಮಾಡಬೇಡಿ

   ಸಾಮಾಜಿಕ ಜಾಲತಾಣದ ಕೆಲವು ಜೆಡಿಎಸ್ ಬೆಂಬಲಿಗರ ವರ್ತನೆಯಿಂದ ಬೇಸರಗೊಂಡಿದ್ದ ಪ್ರತಾಪ್ ಸಿಂಹ, 'ಗೌಡ' ಎಂದು ಹೆಸರ ಹಿಂದೆ ಸೇರಿಸಿಕೊಂಡಿರುವ ಕೆಲವರು ಫೇಸ್‌ಬುಕ್‌ನಲ್ಲಿ ಅವಾಚ್ಯಗಳನ್ನು ಬಳಸಿ ಕಮೆಂಟ್ ಮಾಡುತ್ತಿದ್ದಾರೆ. ಗೌಡ ಎಂದು ಹೆಸರು ಇಟ್ಟುಕೊಂಡು ಒಕ್ಕಲಿಗ ಸಮುದಾಯವೇ ತಲೆತಗ್ಗಿಸುವ ಕಾರ್ಯದಲ್ಲಿ ಅವರು ನಿರತರಾಗಿದ್ದಾರೆ ಇದೆಲ್ಲಾ ಬೇಡ ಎಂದು ಅವರು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.

   ಕೊಡಗಿಗೆ 1 ಕೋಟಿ ನೀಡಿದ ಕೇಂದ್ರ ಸಚಿವೆ, ಹೆಚ್ಚಿನ ನೆರವಿಗೆ ಮನವಿ ಮಾಡುವುದಾಗಿ ಭರವಸೆ

   ನಾಯಿ ಬೊಗಳಿದರೆ ತಲೆ ಕೆಡಿಸಿಕೊಳ್ಳುವುದಿಲ್ಲ

   ಇತ್ತೀಚಿನ ಘಟನೆಯೊಂದರ ಉದಾಹರಣೆ ನೀಡಿದ ಪ್ರತಾಪ್ ಸಿಂಹ ಕಾಂಗ್ರೆಸ್ ನಾಯಕಿಯೊಬ್ಬರು ಫೇಸ್‌ಬುಕ್‌ನಲ್ಲಿ ಏನೇನೋ ಬರೆದುಕೊಂಡಿದ್ದರ ಬಗ್ಗೆ ಉಲ್ಲೇಖಿಸಿದರು. ಕಠಿಣವಾಗಿ ಹೇಳಬೇಕೆಂದರೆ 'ಆನೆ ನಡೆದು ಕೊಂಡು ಹೋಗೇಕಾದರೆ ನಾಯಿ ಬೊಗಳುವುದು ಸಾಮಾನ್ಯ, ಇಂತಹುದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ' ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   ಇನ್ನಷ್ಟು ಮೈಸೂರು ಸುದ್ದಿಗಳುView All

   English summary
   Kodagu-Mysuru MP Prathap Simha gave clarification through facebook live video about Nirmala Sitharaman angry on in charge minister SR Mahesh. He says it is a small incident.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more