Pratap Simha: ದಿಢೀರ್ ಫೇಸ್‌ಬುಕ್ ಲೈವ್ ಬಂದು ಪ್ರತಾಪ್ ಸಿಂಹ ಭಾವುಕರಾಗಿ ಹೇಳಿದ್ದೇನು ಗೊತ್ತಾ?-ಮಾಹಿತಿ ಇಲ್ಲಿದೆ
ಮೈಸೂರು, ಮಾರ್ಚ್, 11: ಇದೀಗ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಗುಂಗು ಎಲ್ಲೆಡೆ ಹಬ್ಬಿಬಿಟ್ಟಿದೆ. ಟಿಕೆಟ್ ವಿಚಾರವಾಗಿ ಭಾರೀ ಪೈಪೋಟಿಗಳು ಸಹ ನಡೆಯುತ್ತಿವೆ. ಇನ್ನೂ ಮೈಸೂರು ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರತಾಪ್ ಸಿಂಹ ಅವರ ಕೈತಪ್ಪಲಿದೆ ಎನ್ನುವ ಸುದ್ದಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದೇ ವಿಚಾರವಾಗಿ ರಾತ್ರೋರಾತ್ರಿ ಫೇಸ್‌ಬುಕ್ ಲೈವ್‌ನಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈ ಬಾರಿ ಸಂಸದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದೇ ವಿಚಾರವಾಗಿ ಪ್ರತಾಪ್ ಸಿಂಹ ಅವರೇ ಫೇಸ್ ಬುಕ್ ಲೈವ್ ಬಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ವಿಡಿಯೋದಲ್ಲಿ ಅವರು ಭಾವುಕರಾಗಿದ ಕ್ಷಣವೂ ಸಹ ಕಂಡು ಬಂದಿದೆ. ಟಿಕೆಟ್ ಬಗ್ಗೆ ನಿರ್ಣಯ ತಾಯಿ ಚಾಮುಂಡೇಶ್ವರಿ ಮಾಡುತ್ತಾಳೆ. ನನ್ನ ರಾಜಕೀಯ ಹಿತಾಸಕ್ತಿಗಾಗಿ ಯಾರ ಮನೆಯನ್ನು ಸುತ್ತಿಲ್ಲ. ನನಗೆ ನಾಳೆ ಟಿಕೆಟ್ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಅಂತಲೂ ಹೇಳಿದ್ಧಾರೆ. ಹಾಗೆಯೇ ಇದೇ ವೇಳೆ ತಮ್ಮ ಸಾಧನೆಗಳ ಬಗ್ಗೆಯೂ ಹೇಳಿ ಭಾವುಕರಾಗಿರುವುದು ಕಂಡುಬಂದಿದೆ.

ಇನ್ನು ಇದೇ ವೇಳೆ ಪ್ರತಾಪ್ ಸಿಂಹ ಅವರು, ನನ್ನಿಂದ ಸೋತಿದ್ದೇವೆ ಎಂದು ಹೇಳುವುದು ಸರಿಯಲ್ಲ ಅಂತಾ ಸ್ವಪಕ್ಷದ ನಾಯಕರ ವಿರುದ್ದವೇ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದರು. ನಾಳೆ ಬೆಳಗ್ಗೆ ನನಗೆ ವರಿಷ್ಠರು ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸ ಇದೆ. ನಿಮ್ಮ ಪ್ರೀತಿಯೇ ನನಗೆ ಸಾಕು ಅಂತ ಲೈವ್‌ನಲ್ಲಿಯೇ ಹೇಳುವ ಮೂಲಕ ಭಾವುಕರಾದರು.
ನನ್ನ ಪರವಾಗಿ ನೀವೂ ಪ್ರಾರ್ಥಿಸಿ ಅಂತಾ ಅಭಿಮಾನಿಗಳಲ್ಲಿ ಕೇಳಿಕೊಂಡರು. ಈ ಪ್ರೀತಿ ಹಾರೈಕೆ ಮುಂದಿನ ಐದು ವರ್ಷಗಳ ಕಾಲ ವರವಾಗಿ ಕೆಲಸ ಮಾಡುವುದಕ್ಕೆ ಅನುಕೂಲವಾಗಲಿ ಇನ್ನೂ ಐದು ವರ್ಷಗಳ ಕಾಲ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತೇನೆ ನಿಮ್ಮ ಸಹಕಾರ ಇರಲಿ ಎಂದು ಹೇಳಿದರು.
ಹಾಗೆಯೇ ನಾನು ಎಂದೂ ಜಾತಿ ರಾಜಕಾರಣ ಮಾಡಿಲ್ಲ. ನನ್ನ ಜೊತೆ ಎಲ್ಲ ಜಾತಿಯವರು ಇದ್ದಾರೆ. ಪ್ರತಾಪ್ ಸಿಂಹನಿಂದ ಪಕ್ಷಕ್ಕೆ ಕೊಡುಗೆ ಏನಿಲ್ಲ ಎಂದು ಹೇಳಿರುವುದು ನಿಜಕ್ಕೂ ಸರಿಯಲ್ಲ ಎಂದರು. ಅಲ್ಲದೆ ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಆದ ರೈಲ್ವೆ, ರಸ್ತೆ ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದ್ದಾರೆ.
ರಾಜಕಾರಣದಲ್ಲಿ ದ್ವೇಷ ಅಸೂಯೆ ಎಲ್ಲವೂ ಇರುತ್ತದೆ. ಇವತ್ತಿನ ದ್ವೇಷ ಅಸೂಹೆಯಲ್ಲಿ ಏನು ಬೇಕಾದರೂ ಆಗಬಹುದು. ಮೋದಿಯವರೇ ಗುಜರಾತ್‌ನಲ್ಲಿ ವನವಾಸಕ್ಕೆ ಹೋಗುವ ಸಂದರ್ಭ ಬಂದಿತ್ತು. ಆದ್ದರಿಂದ ನನ್ನ ವಿಷಯದಲ್ಲಿ ಏನಾದರೂ ಆಗಬಹುದು. ನಾನು ಸಂಸದನಾಗಿಯೇ ಸಾಯೋದಿಲ್ಲ. ಏನು ಬೇಕಾದರೂ ಆಗಬಹುದು ಎಂದು ಹೇಳಿದರು.











Click it and Unblock the Notifications