ಬೆಳ್ಳಿ ರಥ ಕದ್ದು ಮಾರಾಟ, ಸೋಸಲೆ ಮಠ ಸ್ವಾಮೀಜಿ ಬಂಧನ

ಮೈಸೂರು, ಅ.25: ತಿರಮಕೂಡಲು ನರಸೀಪುರದ ವ್ಯಾಸರಾಜ (ಸೋಸಲೆ) ಮಠಕ್ಕೆ ಸೇರಿರುವ ಬೆಳ್ಳಿ ರಥ ಕದ್ದು ಮಾರಾಟ ಮಾಡಿದ ಆರೋಪದ ಹೊತ್ತಿರುವ ವಿದ್ಯಾಮನೋಹರತೀರ್ಥ ಸ್ವಾಮೀಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾಮನೋಹರತೀರ್ಥ ಸ್ವಾಮೀಜಿ ಹಾಗೂ ಅವರ ಪೂರ್ವಾಶ್ರಮದ ತಾಯಿ ಶ್ರೀಮತಿ ಮತ್ತು ಸಹಾಯಕ ಪ್ರಮೋದ್ ಬಂಧಿತರು. ಆರೋಪಿಗಳಿಂದ 23 ಕೆಜಿ ತೂಕದ 6 ಅಡಿ ಎತ್ತರದ ಬೆಳ್ಳಿ ರಥವನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತೊಬ್ಬ ಅರೋಪಿಯಾದ ಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆ ಉದ್ಧವಾಚಾರ್ ಅವರು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವುದರಿಂದ ಬಂಧಿಸದೆ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಭಿನವ್ ಖಾರೆ ಅವರು ಹೇಳಿದ್ದಾರೆ. [ವಿದ್ಯಾಮನೋಹರ ತೀರ್ಥ ಸ್ವಾಮೀಜಿ ಅವರ ಚೆಕ್ ಬೌನ್ಸ್ ಕೇಸ್]

Vidyamanoharatheertha arrested

15ನೇ ಶತಮಾನದ ಸೋಸಲೆ ಮಠಕ್ಕೆ ಮರದ ರಥವನ್ನು ತರುವಲ್ಲಿ ವಿದ್ಯಾವಾರಿಧಿತೀರ್ಥರು ಯಶಸ್ವಿಯಾಗಿದ್ದರು. 1935ರ ನಂತರ ವಿದ್ಯಾಪ್ರಸನ್ನತೀರ್ಥರ ಕಾಲದಲ್ಲಿ ಬೆಳ್ಳಿ ರಥ, ಚಿನ್ನದ ತಟ್ಟೆಗಳನ್ನು ಮಠದಲ್ಲಿ ಕಾಣಲಾಯಿತು. ನಂತರ ವಿದ್ಯಾಮನೋಹರತೀರ್ಥದ ಕಾಲದಲ್ಲಿ ವಂಚನೆ, ಕಬಳಿಕೆ ಆರೋಪಗಳು ಕೇಳಿ ಬಂದಿವೆ.

ಸೋಸಲೆ ಮಠದ ಆಸ್ತಿಯ ದುರ್ಬಳಕೆ, ಮಠಕ್ಕೆ ಸೇರಿದ ಕೋಟ್ಯಂತರ ರೂ. ಬೆಲೆ ಬಾಳುವ ಚಿನ್ನದ ತಟ್ಟೆ ಹಾಗೂ ಬೆಳ್ಳಿ ರಥವನ್ನು ಅಡವಿಟ್ಟು ಹಣ ಗಳಿಸಿ ಮಜಾ ಮಾಡುತ್ತ್ತಿದ್ದಾರೆ ಎಂದು ಸ್ವಾಮೀಜಿ ಹಾಗೂ ಅವರ ಪೂರ್ವಾಶ್ರಮದ ಕುಟುಂಬದ ಬಗ್ಗೆ 2013ರಲ್ಲಿ ಮಠದ ಭಕ್ತರು ತಿ. ನರಸೀಪುರ ಠಾಣೆಯಲ್ಲಿ ದಾಖಲೆ ಸಮೇತ ದೂರು ದಾಖಲಿಸಿದ್ದರು.

Sosale Mutt

ವಿದ್ಯಾಮನೋಹರ ತೀರ್ಥ ಸ್ವಾಮೀಜಿಯವರು ಮಠದ ಆಸ್ತಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಅಲ್ಲದೆ ಭಕ್ತರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ದಾಳಿ ನಡೆಸಿ ಮೈಸೂರಿನ ಕೃಷ್ಣಮೂರ್ತಿ ಪುರಂನಲ್ಲಿದ್ದ ಮಠದ ಶಾಖೆಯನ್ನು 2013ರಲ್ಲೇ ತನ್ನ ವಶಕ್ಕೆ ತೆಗೆದುಕೊಂಡಿತು. [ಸರಕಾರದ ವಶಕ್ಕೆ15ನೇ ಶತಮಾನದ ವ್ಯಾಸರಾಜ ಮಠ]

2004ರಲ್ಲಿ ಚೆನ್ನೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಉದ್ಧವ ಆಚಾರ್ ಹಾಗೂ ಶ್ರೀಮತಿ ಅವರ ಪುತ್ರನಾದ ಶರತ್ ಆಚಾರ್ ಎಂಬುವರಿಗೆ ಸಂನ್ಯಾಸ ದೀಕ್ಷೆ ನೀಡಲಾಗಿತ್ತು. ಸೋಸಲೆ ವ್ಯಾಸರಾಜಮಠದ ವಿದ್ಯಾವಾಚಸ್ಪತಿ ತೀರ್ಥ ಅವರು ತಮ್ಮ ಉತ್ತರಾಧಿಕಾರಿಗೆ ವಿದ್ಯಾಮನೋಹರ ತೀರ್ಥ ಎಂಬ ನಾಮವನ್ನು ನೀಡಿದ್ದರು. ವಿದ್ಯಾವಾಚಸ್ಪತಿ ತೀರ್ಥರ ಸಂಬಂಧಿಯೂ ಆಗಿದ್ದ ಶರತ್ ಆಚಾರ್ ಹೀಗೆ ವಿದ್ಯಾಮನೋಹರ ತೀರ್ಥ ಸ್ವಾಮೀಜಿ ಆಗಿ ಸೋಸಲೆ ಮಠದ ಪೀಠವನ್ನು ಅಲಂಕರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+