• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೀತಿ ಸಂಹಿತೆ ಜಾರಿ:ಕಾರ್ಯಕ್ರಮಗಳು ರದ್ದು, ಮೈಸೂರಿನಲ್ಲಿ ರಾಜಕೀಯ ಲೆಕ್ಕಾಚಾರ ಶುರು

|

ಮೈಸೂರು, ಮಾರ್ಚ್ 11:ಕೇಂದ್ರ ಚುನಾವಣಾ ಆಯೋಗವು ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆಯೇ ಮೈಸೂರು-ಕೊಡಗು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಇತ್ತ ಜಿಲ್ಲೆಯಾದ್ಯಂತ ತಿಂಗಳಿನಿಂದ ನಡೆಯುತ್ತಿದ್ದ ಭೂಮಿಪೂಜೆ, ಉದ್ಘಾಟನೆ ಕಾರ್ಯಕ್ರಮಗಳ ಭರಾಟೆಗೆ ತೆರೆ ಬಿದ್ದಿದೆ.

ಚುನಾವಣಾ ದಿನಾಂಕ ಘೋಷಣೆ ಆದ ತಕ್ಷಣವೇ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಸರ್ಕಾರಿ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ. ಚುನಾವಣಾ ವೇಳಾ ಪಟ್ಟಿ ಪ್ರಕಟವಾಗುವ ಸಮಯ ಸಮೀಪಿಸುತ್ತಿದ್ದಂತೆಯೇ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಸರ್ಕಾರದ ವಿವಿಧ ಯೋಜನೆಗಳಿಗೆ ಚಾಲನೆ ನೀಡುವುದು, ಕಾಮಗಾರಿಗಳಿಗೆ ಭೂಮಿಪೂಜೆ ನಡೆಸುವುದಕ್ಕೆ ಆರಂಭಿಸಿದ್ದರು.

ಮೈಸೂರು ಲೋಕಸಭಾ ಕ್ಷೇತ್ರ:ಬೆಳೆಯುತ್ತಲಿದೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ

ಜನಪ್ರತಿನಿಧಿಗಳು ನಗರ, ಪಟ್ಟಣ ಪ್ರದೇಶಗಳಿಂದ ಹಿಡಿದು ಪುಟ್ಟ ಗ್ರಾಮಗಳಿಗೂ ತೆರಳಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದುದು ಸಾಮಾನ್ಯವಾಗಿತ್ತು. ಯೋಜನೆ ಪೂರ್ಣಗೊಳ್ಳದಿದ್ದರೂ ತರಾತುರಿಯಲ್ಲಿ ಉದ್ಘಾಟನೆ ಮಾಡಿದ ನಿದರ್ಶನಗಳೂ ಇವೆ.

ಚುನಾವಣಾ ನೀತಿ ಸಂಹಿತೆ ಜಾರಿ:ಖಾಸಗಿ ವಾಹನವೇರಿ ತೆರಳಿದ ಕೈ ನಾಯಕರು

ವಿವಿಧ ಯೋಜನೆಗಳಿಗೆ ಅಡಿಗಲ್ಲು ಹಾಕಲು ಈಗಾಗಲೇ ಅನುಷ್ಠಾನಗೊಂಡಿರುವ ಯೋಜನೆಗಳಿಗೆ ಚಾಲನೆ ನೀಡಲು ಸಂಸದರು, ಸಚಿವರು ಮತ್ತು ಶಾಸಕರು ತಮ್ಮ ವಾಹನಗಳಲ್ಲಿ ಹಾರೆ, ಪಿಕಾಸಿ, ಕತ್ತರಿಗಳನ್ನು (ಟೇಪ್‌ ತುಂಡರಿಸಲು) ಇಟ್ಟುಕೊಂಡೇ ಓಡಾಡುತ್ತಿದ್ದಾರೆ ಎಂಬ ಹಾಸ್ಯದ ಮಾತು ಕೂಡ ಜನಸಾಮಾನ್ಯರ ನಡುವೆ ಕೇಳಿಬರುತ್ತಿತ್ತು.

ಆ ಮಟ್ಟಿಗೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇದೀಗ ರಾಜಕಾರಣಿಗಳ ಚಿತ್ರಗಳಿದ್ದ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಗೊಂಡಿದೆ. ಈ ಕ್ಷೇತ್ರಕ್ಕೆ ಏ.18ರಂದು ಚುನಾವಣೆ ನಡೆಯಲಿದೆ. ಮುಂದೆ ಓದಿ...

 ರದ್ದಾದ ಕಾರ್ಯಕ್ರಮಗಳು

ರದ್ದಾದ ಕಾರ್ಯಕ್ರಮಗಳು

ಚುನಾವಣಾ ನೀತಿ ಸಂಹಿತೆ ಭಾನುವಾರ ಸಂಜೆಯಿಂದಲೇ ಜಾರಿಗೆ ಬಂದಿರುವುದರಿಂದ ಸೋಮವಾರ ನಡೆಯಬೇಕಿದ್ದ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ನಂಜನಗೂಡು ಸಾರ್ವಜನಿಕ ಗ್ರಂಥಾಲಯದ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

 ಪ್ರತಾಪ ಸಿಂಹ ಮತ್ತೆ ಸ್ಪರ್ಧೆ

ಪ್ರತಾಪ ಸಿಂಹ ಮತ್ತೆ ಸ್ಪರ್ಧೆ

ಮೈಸೂರು-ಕೊಡಗು ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 18,57,713 ಮತದಾರರು ಇದ್ದಾರೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿಯ ಪ್ರತಾಪ ಸಿಂಹ ಗೆದ್ದಿದ್ದರು. ಇದೀಗ ಪ್ರತಾಪಸಿಂಹ ಮತ್ತೆ ಸ್ಪರ್ಧೆ ಬಯಸಿದ್ದಾರೆ.

ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯರದ್ದೇ ಮೇಲುಗೈ

 ಮೈತ್ರಿಕೂಟದ ಅಭ್ಯರ್ಥಿ ಯಾರು?

ಮೈತ್ರಿಕೂಟದ ಅಭ್ಯರ್ಥಿ ಯಾರು?

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಲ್ಲಿ ಈ ಕ್ಷೇತ್ರವನ್ನು ಯಾರಿಗೆ ಬಿಟ್ಟುಕೊಡಲಾಗುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅಧಿಕೃತವಾಗಿ ಅಭ್ಯರ್ಥಿ ಪಟ್ಟಿಯನ್ನು ಯಾರೂ ಈವರೆಗೆ ಬಿಡುಗಡೆ ಮಾಡಿಲ್ಲ.

 ಜಾಗೃತಿ ಮೂಡಿಸುವ ಕಾರ್ಯಕ್ರಮ

ಜಾಗೃತಿ ಮೂಡಿಸುವ ಕಾರ್ಯಕ್ರಮ

ಚುನಾವಣಾ ಆಯೋಗದ ಸೂಚನೆಯಂತೆ ಇವಿಎಂಗಳು ಹಾಗೂ ವಿವಿ ಪ್ಯಾಟ್ ಗಳ ಬಳಕೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಆರಂಭಿಸಲಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗದಿರಿವೆ.

ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ ಮೈಸೂರು-ಕೊಡಗು ಕ್ಷೇತ್ರ:ಯಾರ ಲೆಕ್ಕಾಚಾರ ಹೇಗಿದೆ?

English summary
As the Central Election Commission announced Lok Sabha election schedule, Political activities in the Mysuru-Kodagu constituency have started. Bhoomi Pooja and the inauguration programs are stopped in Mysuru-Kodagu constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X