• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಾಲೆಂಜಿಂಗ್ ಸ್ಟಾರ್ ಬೆನ್ನಿಗೆ ನಿಂತಿದ್ಯಾ ಖಾಕಿ ಪಡೆ ?

|

ಮೈಸೂರು, ಸೆಪ್ಟೆಂಬರ್ 25 : ಮೈಸೂರಿನ ಹಿನಕಲ್ ಬಳಿ ನಡೆದ ನಟ ದರ್ಶನ್ ಕಾರು ಅಪಘಾತ ಪ್ರಕರಣ ಇಂದು ಕೂಡ ಹೊಸ ತಿರುವು ಪಡೆದಿದೆ. ಅಪಘಾತ ಸಂಭವಿಸಿದ್ದು, ರಾಶ್ ಡ್ರೈವಿಂಗ್ ನಿಂದಾಗಿಯೇ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸದ್ಯ ಕಾರು ಚಲಾಯಿಸುತ್ತಿದ್ದ ರಾಯ್ ಆಂಟೋನಿಯನ್ನೇ ದೋಷಿ ಎಂದು ಎಫ್ ಐಆರ್ ನಲ್ಲಿ ಬಿಂಬಿಸಲಾಗುತ್ತಿದೆ.

ಆದರೆ ದೂರು ದಾಖಲಿಸಿರುವುದು ಗಾಯಾಳುಗಳಾದ ದರ್ಶನ್, ಪ್ರಜ್ವಲ್, ದೇವರಾಜ್ ಅಲ್ಲ. ದರ್ಶನ್ ಆಪ್ತ ಲಕ್ಷ್ಮಣ್ ಎಂಬುವವರು. ಸದ್ಯಕ್ಕಿರುವ ಗುಮಾನಿ ಸ್ವತಃ ದರ್ಶನ್ ಏಕೆ ಮೌಖಿಕ ಹೇಳಿಕೆ ನೀಡಿಲ್ಲ ಎಂಬುದು.

'ದಾಸ' ದರ್ಶನ್ ಅಪಘಾತದ ಸುತ್ತ ಹಲವು ಅನುಮಾನಗಳ ಹುತ್ತ.!

ಮಾತನಾಡುವ ಸ್ಥಿತಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದ್ದದ್ದು ನಮಗೆ ತಿಳಿದಿದೆ. ಅದರೊಟ್ಟಿಗೆ ಸ್ವತಃ ದರ್ಶನ್ ರವರೇ ನಿನ್ನೆ ಖುದ್ದಾಗಿ ನನಗೇ ಏನು ಆಗಿಲ್ಲ ಎಂಬುದಾಗಿ ವಾಯ್ಸ್ ನೋಟ್ ಅನ್ನು ಫ್ಯಾನ್ಸ್ ಗಳಿಗೆ ನೀಡಿದ್ದು, ಪೊಲೀಸರು ಮಾತ್ರ ಖುದ್ದು ದರ್ಶನ್ ರಿಂದ ಮೌಖಿಕ ಹೇಳಿಕೆಯನ್ನು ಪಡೆದುಕೊಂಡಿಲ್ಲ.

ಘಟನೆ ನಡೆದ 14 ಗಂಟೆಗಳ ಬಳಿಕ ದರ್ಶನ್ ಆಪ್ತ ಲಕ್ಷ್ಮಣ್ ಎಂಬುವವರು ರಾಯ್ ಆಂಟೋನಿ ವಿರುದ್ಧ ದೂರು ನೀಡಿದ್ದಾರೆ. ಇನ್ನು ಕಂಪ್ಲೆಂಟ್ ಕಾಪಿಯಲ್ಲಿ ಉಲ್ಲೇಖಿಸಿರುವಂತೆ ರಾಯ್ ಆಂಟೋನಿ ವಿರುದ್ಧವೇ ಸ್ಪಷ್ಟವಾಗಿ ತಪ್ಪಿತಸ್ಥ ಎಂದು ತಿಳಿಸಲಾಗಿದೆ.

ದರ್ಶನ್ ಗನ್ ಮ್ಯಾನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಏನಿದೆ?

ದರ್ಶನ್ ಮಾತನಾಡುವ ಸ್ಥಿತಿಯಲ್ಲಿದ್ದರೂ ಅವರ ಹೇಳಿಕೆಯನ್ನು ಉಲ್ಲೇಖಿಸಿಲ್ಲ. ಈ ಕುರಿತಾಗಿ ಪೊಲೀಸರು ಹಾಗೂ ನಟ ದರ್ಶನ್ ಮೇಲೆ ಅನುಮಾನಗಳು ಮೂಡಿ ಬರುತ್ತಿದೆ. ಯಾಕಿರಬಹುದು ಎಂಬ ಪ್ರಶ್ನೆಗಳ ಸುರಿಮಾಲೆ ನಮ್ಮ ಮುಂದೆ ಇದೆ. ಮುಂದೆ ಓದಿ...

 ಲಕ್ಷ್ಮಣ್ ಹೇಳಿಕೆ ನಂತರ ದೂರು ಏಕೆ ?

ಲಕ್ಷ್ಮಣ್ ಹೇಳಿಕೆ ನಂತರ ದೂರು ಏಕೆ ?

ಕಾರು ಅಪಘಾತ ನಡೆದ 14 ಗಂಟೆಗಳ ಬಳಿಕ ಎಫ್ ಐಆರ್ ದಾಖಲಿಸಲಾಗಿದೆ. ಅದು ಲಕ್ಷ್ಮಣ್ ಮೌಖಿಕ ಹೇಳಿಕೆಯ ಬಳಿಕ. ಮೊದಲೇ ದೂರು ದಾಖಲಿಸಿದ್ದರೇ ಸಾಕ್ಷ್ಯವನ್ನು ಹಾಗೂ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಬಹುದಿತ್ತು. ಆದರೆ ಇಂತಹ ನಿಧಾನದ ನಿರ್ಧಾರದ ಏಕೆ ಎಂಬುದು ಸಾಮಾನ್ಯ ಪ್ರಶ್ನೆ.

 ಬಚಾವ್ ಮಾಡೋಕೆ ಮುಂದಾಗಿದ್ದಾರಾ ಖಾಕಿ ಪಡೆ?

ಬಚಾವ್ ಮಾಡೋಕೆ ಮುಂದಾಗಿದ್ದಾರಾ ಖಾಕಿ ಪಡೆ?

ಘಟನೆಯಲ್ಲಿ ದರ್ಶನ್ ರದ್ದೇ ತಪ್ಪಿದ್ದು ಬಚಾವ್ ಮಾಡಲು ಪೊಲೀಸರು ಮುಂದಾದ್ರಾ ಎಂಬ ಪ್ರಶ್ನೆ ಕಾಡುತ್ತದೆ. ಉದಾಹರಣೆಗೆ ದರ್ಶನ್ ಡ್ರೈವ್ ಮಾಡಿ ಅಪಘಾತ ಮಾಡಿರಬಹುದು ಅಥವಾ ಡ್ರೈವ್ ಮಾಡುತ್ತಿದ್ದವರು ಕುಡಿದು ಗಾಡಿ ಓಡಿಸಿರಬಹುದು. ಇವೆಲ್ಲವೂ ಅನುಮಾನಕ್ಕೆ ಕಾರಣವಾಗಿದೆ.

ಕಾರು ಅಪಘಾತ ಪ್ರಕರಣ: ಕೇಸ್ ನಿಂದ ಬಚಾವ್ ಆಗಲು ಮುಂದಾದ್ರಾ ದರ್ಶನ್ ?

 ಪ್ರತ್ಯಕ್ಷ ದರ್ಶಿಯಿಂದ ದೂರು ಸ್ವೀಕರಿಸಲಿಲ್ಲವೇಕೆ ?

ಪ್ರತ್ಯಕ್ಷ ದರ್ಶಿಯಿಂದ ದೂರು ಸ್ವೀಕರಿಸಲಿಲ್ಲವೇಕೆ ?

ಘಟನೆ ನಡೆದ ವೇಳೆ ಅಲ್ಲೇ ಇದ್ದ ಪ್ರತ್ಯಕ್ಷದರ್ಶಿಯಿಂದ ದೂರು ಪಡೆಯದೇ, ಘಟನೆಯ ಬಗ್ಗೆ ಅರಿವಿಲ್ಲದ ಲಕ್ಷ್ಮಣ್ ರ ಹೇಳಿಕೆ ಪಡೆದು ಮಾಹಿತಿ ಸಂಗ್ರಹಿಸಲಾಗಿದೆ. ಈ ಕುರಿತಾಗಿ ಪ್ರಶ್ನಿಸಿದರೆ ಪೊಲೀಸರಾಗಲೀ ಮತ್ತು ವೈದ್ಯ ಸಿಬ್ಬಂದಿಯಾಗಲೀ ಯಾವುದೇ ಪ್ರಶ್ನೆಗೆ ಉತ್ತರ ನೀಡಲು ಹಿಂದೇಟು ಹಾಕುತ್ತಿದ್ದಾರೆ.

 ಗೊಂದಲದ ಗೂಡಾದ ಪ್ರಕರಣ

ಗೊಂದಲದ ಗೂಡಾದ ಪ್ರಕರಣ

ಒಟ್ಟಾರೆಯಾಗಿ ಪ್ರಕರಣವೇ ಗೊಂದಲದ ಗೂಡಾದಂತೆ ಭಾಸವಾಗುತ್ತಿದೆ. ಈ ಎಲ್ಲಾ ಅನುಮಾನಗಳು ದರ್ಶನ್ ರ ಬೆನ್ನಿಗೆ ಖಾಕಿ ಪಡೆ ನಿಂತಿದ್ಯಾ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಕೆಲವು ಘಟನೆಗಳು ತಿರುವು ಪಡೆದುಕೊಳ್ಳುತ್ತಿವೆ.

English summary
Police did not get the verbal statement from Darshan. Darshan's close friend Laxman has lodged a complaint against Roy Antony about 14 hours after the incident.Here's a brief article about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X