ಮೈಸೂರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಐವರ ಬಂಧನ
ಮೈಸೂರು, ಜ. 22 : ಎರಡು ಪ್ರತ್ಯೇಕ ಘಟನೆಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡಾಗಳ ಮೇಲೆ ಮೈಸೂರಿನ ವಿಜಯನಗರ ಪೊಲೀಸರು ದಾಳಿ ನಡೆಸಿ, ಇಬ್ಬರು ಮಹಿಳೆಯರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಈ ಜಾಲದಲ್ಲಿ ಸಿಲುಕಿಕೊಂಡಿದ್ದ ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ.
ವಿಜಯನಗರ 4ನೇ ಹಂತ, 2ನೇ ಫೇಸ್, ನಂ.4744 ವಿಳಾಸದ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದಾಗಿ ಬಂದ ಮಾಹಿತಿಯ ಮೇರೆಗೆ ವಿಜಯನಗರ ಪೊಲೀಸರು ಸದರಿ ಮನೆಯ ಮೇಲೆ ದಾಳಿ ಮಾಡಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಜ್ಯೋತಿ (32) ಮತ್ತು ಇಲವಾಲದ ಶ್ರೀನಿವಾಸ್ ಬಿನ್ ಶಿವಣ್ಣ (34) ಎಂಬಿಬ್ಬರನ್ನು ಬುಧವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರತಿಷ್ಠಿತ ಬಡಾವಣೆಗಳಲ್ಲಿ ಬಾಡಿಗೆ ಮನೆ ಪಡೆದು, ಸಂಸಾರದೊಂದಿಗೆ ವಾಸವಾಗಿರುತ್ತೇನೆ ಎಂದು ಪುಸಲಾಯಿಸಿ, ಮನೆಗೆ ಗಿರಾಕಿಗಳನ್ನು ಕರೆತಂದು ಜ್ಯೋತಿ ವೇಶ್ಯಾವಾಟಿಕೆ ನಡೆಸುತ್ತಿದ್ದಳು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. [ವೇಶ್ಯಾವೃತ್ತಿ ಕಾನೂನುಬದ್ಧವಾದರೆ ಕ್ರೈಂ ಇಳಿಕೆ?]

ಮತ್ತೊಂದು ಪ್ರಕರಣದಲ್ಲಿ ಮರಿಮಲ್ಲಪ್ಪ ಕಂಪೌಂಡ್ ಹತ್ತಿರ, ನಂ.7813 ವಿಳಾಸದ ಮನೆಯ ಮೇಲೆ ದಾಳಿ ನಡೆಸಿದ ವಿಜಯನಗರ ಪೊಲೀಸರು, ವೇಶ್ಯಾವಾಟಿಕೆಗೆ ಬಳಕೆಯಾಗಿದ್ದ ಓರ್ವ ಹುಡುಗಿಯನ್ನು ರಕ್ಷಿಸಿ ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ ಮೂವರನ್ನು ಮಂಗಳವಾರ ಬಂಧನಕ್ಕೆ ತೆಗೆದುಕೊಂಡಿದ್ದಾರೆ.
ಬಂಧನಕ್ಕೊಳಗಾಗಿರುವವರು, ವಿವಿ ಮೊಹಲ್ಲಾದ ಪ್ರದೀಪ ಬಿನ್ ಪುಟ್ಟರಾಜು (34), ಗೀತಾ ಅಲಿಯಾಸ್ ಲಕ್ಷ್ಮೀ ಮತ್ತು ಆಕೆಯ ಗಂಡ ಯಶವಂತ. ಬಡತನದಿಂದ ಬೇಸತ್ತಿದ್ದ ಮಹಿಳೆಯರಿಗೆ ಹಣ ಮಾಡುವ ದಾರಿ ತೋರಿಸುತ್ತೇನೆ ಎಂದು ನಂಬಿಸಿ ಅವರನ್ನು ವೇಶ್ಯಾವಾಟಿಕೆಗೆ ತಳ್ಳುವ ದಂಧೆಯಲ್ಲಿ ಗೀತಾ ಮತ್ತು ಆಕೆಯ ಗಂಡ ತೊಡಗಿದ್ದರು. [ವೇಶ್ಯಾವೃತ್ತಿ ಕಾನೂನು ಬದ್ಧಗೊಳಿಸಿ : ಮಾತೆ ಮಹಾದೇವಿ]












Click it and Unblock the Notifications