• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

PM Modi Yoga Day Speech : ವಿಶ್ವ ಯೋಗ ದಿನದಂದು ದೇಶದ ಜನರಿಗೆ ಪ್ರಧಾನಿ ಸಂದೇಶ

|
Google Oneindia Kannada News

ಮೈಸೂರು, ಜೂನ್ 21: ಯೋಗವು ಕೇವಲ ವ್ಯಕ್ತಿಗೆ ಮಾತ್ರವಲ್ಲದೇ, ಇಡೀ ದೇಶದ ಜೊತೆಗೆ ವಿಶ್ವಕ್ಕೆ ಶಾಂತಿಯನ್ನು ಪಸರಿಸುವ ಮಹತ್ವಕ ಕಾರ್ಯವನ್ನು ಮಾಡುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಮೈದಾನ ಮುಂಭಾಗದಲ್ಲಿ ನಡೆದ 8ನೇ ವಿಶ್ವ ಯೋಗ ದಿನವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಜನರಿಗೆ ಯೋಗ ದಿನದ ಶುಭಾಷಯ ಕೋರಿದರು.

Yoga Day 2022 Live Updates: ಮೈಸೂರಲ್ಲಿ ಪ್ರಧಾನಿ ನರೇಂದ್ರ ಮೋದಿ, ಯೋಗದಿಂದ ವಿಶ್ವವೇ ಒಗ್ಗೂಡಿದೆ ಎಂದ ಮೋದಿYoga Day 2022 Live Updates: ಮೈಸೂರಲ್ಲಿ ಪ್ರಧಾನಿ ನರೇಂದ್ರ ಮೋದಿ, ಯೋಗದಿಂದ ವಿಶ್ವವೇ ಒಗ್ಗೂಡಿದೆ ಎಂದ ಮೋದಿ

ನಮ್ಮೆಲ್ಲರ ಜೀವನಕ್ಕೆ ಯೋಗವೇ ಹೊಸ ವಿಶ್ವಾಸವನ್ನು ನೀಡುತ್ತಿದೆ. ಮನುಷ್ಯನಲ್ಲಿ ಯಾವುದೇ ರೀತಿ ಅನಾರೋಗ್ಯಗಳು ಇಲ್ಲದಂತೆ ಮಾಡುವ ಶಕ್ತಿಯ ಯೋಗಕ್ಕೆ ಇದೆ. ಯೋಗ ಮನುಷ್ಯನಲ್ಲಿ ಶಾಂತಿತೆಯನ್ನು ಹುಟ್ಟು ಹಾಕುತ್ತದೆ. ಯೋಗದಿಂದ ಕೇವಲ ವ್ಯಕ್ತಿಯಷ್ಟೇ ಅಲ್ಲದೇ, ಇಡೀ ದೇಶ, ಇಡೀ ಜಗತ್ತು ಇಂದು ಶಾಂತತೆಯನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ವಿಶ್ವಸಂಸ್ಥೆಗೆ ಪ್ರಧಾನಿ ಮೋದಿ ಧನ್ಯವಾದ:
ಯೋಗದ ಸಂದೇಶ ಸಾರಲು ಸಹಕಾರ ನೀಡಿದ ವಿಶ್ವಸಂಸ್ಥೆಗೆ ಧನ್ಯವಾದಗಳು. 'ಮಾನವತಾ ಯೋಗ' ಎಂಬ ಘೋಷಣೆ ಅಡಿಯಲ್ಲಿ ಈ ಬಾರಿ ಯೋಗ ದಿನಾಚರಣೆ ಮಾಡಲಾಗುತ್ತಿದೆ. ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ದೇಶದ 75 ಸ್ಥಳಗಳಲ್ಲಿ ಇಂದು ಯೋಗ ದಿನಾಚರಣೆ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲಾ ಸಮುದಾಯದ ಜನರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಜಗತ್ತಿನ ಜನರಲ್ಲಿ ಯೋಗದಿಂದ ವಿಶ್ವಾಸ:
ಮೊದಲು ಆಧ್ಯಾತ್ಮಿಕ ಕೇಂದ್ರಗಳಲ್ಲಿ ಯೋಗ ಮಾಡಲಾಗುತ್ತಿತ್ತು. ಆದರೆ ಈಗ ಯೋಗ ವಿಶ್ವದ ಮೂಲೆ ಮೂಲೆಗೂ ಪಸರಿಸಿದೆ. ಎಲ್ಲ ಜನರಲ್ಲಿ ಯೋಗವು ವಿಶ್ವಾಸವನ್ನು ತುಂಬುತ್ತಿದೆ. ನಮ್ಮ ಯುವಕರು ಯೋಗ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಕೇಂದ್ರ ಆಯುಷ್ ಸಚಿವಾಲಯ ಯುವಕರು ಯೋಗ ಮಾಡಲು ಉತ್ತೇಜಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.

English summary
World Yoga Day 2022: Yoga Brings Peace not only individual, it Brings Peace to hole World, Says PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X