ಮೈಸೂರು : ನಗರದಲ್ಲಿ ಪ್ಲಾಸ್ಟಿಕ್ ಬಳಸಿದರೆ ದಂಡ ಕಟ್ಟಬೇಕು

ಮೈಸೂರು, ಜೂ. 17 : ಮೈಸೂರು ನಗರದ ಸೌಂದರ್ಯವನ್ನು ಕಾಪಾಡಲು ನಗರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 40 ಮೈಕ್ರಾನ್ ಗಳಿಗಿಂತ ದಪ್ಪವಿರುದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ಬಳಕೆ ಮಾಡಿದರೆ, ಅಂಗಡಿಗಳಿಗೆ ದಂಡ ವಿಧಿಸಲಾಗುತ್ತದೆ ಎಂದು ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ.

ಸೋಮವಾರ ಮೈಸೂರು ನಗರದಲ್ಲಿ ಆರೋಗ್ಯ ಪರಿವೀಕ್ಷಕರಾದ ಅಶೋಕ್ ಬೋಸ್, ಪ್ರಭಾಕರ್, ಜಿತೇಂದ್ರ, ರವಿಶಂಕರ್, ರಾಮಶೇಷಪ್ಪ ಮುಂತಾದವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಲವು ಹೋಟೆಲ್, ಬೇಕರಿ ಇತ್ಯಾದಿಗಳಲ್ಲಿ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ಮತ್ತು ಫ್ಯಾನ್ಸಿ ಸ್ಟೋರ್‌ಗಳಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ಪತ್ತೆ ಮಾಡಲಾಗಿದೆ.

Plastic

ಕೇಂದ್ರ ಸರ್ಕಾರದ ಪರಿಸರ ಮತ್ತು ಸಂರಕ್ಷಣೆ ಕಾಯ್ದೆ 1986ರ ಅಡಿಯಲ್ಲಿ ಪುನರ್ ಬಳಕೆ ಪ್ಲಾಸ್ಟಿಕ್ (ಉತ್ಪಾದನೆ ಮತ್ತು ಉಪಯೋಗ) ನಿಯಮಗಳು 2011 ನಿಯಮಗಳಂತೆ 40 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿದ್ದರೂ, ಪ್ಲಾಸ್ಟಿಕ್ ಉಪಯೋಗ ಮಾಡುತ್ತಿರುವುದು ಬೆಳಕಿಗೆ ಬಂದಿದೆ. [ಕರ್ನಾಟಕದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ]

ಸೋಮವಾರ ನಡೆಸಿದ ಕಾರ್ಯಾಚರಣೆ ವೇಳೆಯಲ್ಲಿ ಇನ್ನು ಮುಂದೆ ಯಾವುದೇ ಹೋಟೆಲ್, ಬೇಕರಿ ಮತ್ತು ಫ್ಯಾನ್ಸಿ ಸ್ಟೋರ್ ಇತ್ಯಾದಿಗಳಲ್ಲಿ ಹಾಗೂ ಯಾವುದೇ ಉದ್ದಿಮೆದಾರರು ನಿಷೇಧಿತ ಪ್ಲಾಸ್ಟಿಕ್ ಅನ್ನು ಮಾರಾಟ ಮಾಡುವುದು, ಉಪಯೋಗಿಸುವುದು, ದಾಸ್ತಾನು ಮಾಡುವುದು ಪತ್ತೆಯಾದರೆ ಅವರಿಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.

ದಂಡ ವಿಧಿಸಿದ ನಂತರವೂ ಮಾಲೀಕರು ಪಾಸ್ಟಿಕ್ ಬಳಸಿದರೆ, ಅಂತಹ ಉದ್ದಿಮೆದಾರರ ದಾಸ್ತಾನನ್ನು ಮುಟ್ಟುಗೋಲು ಹಾಕಿ ಅವರ ಅನುಮತಿಯನ್ನು ರದ್ದುಗೊಳಿಸಲಾಗುವುದು ಎಂದು ಕಾರ್ಯಾಚರಣೆ ವೇಳೆ ಮಾಹಿತಿ ನೀಡಲಾಯಿತು.

ಅಲ್ಲದೇ ಪ್ಲಾಸ್ಟಿಕ್ ಮತ್ತು ಕಾಗದದ ರಾಷ್ಟ್ರಧ್ವಜ ಮಾರಾಟ ಮಾಡುವುದು ಕಂಡುಬಂದಲ್ಲಿ ಉದ್ದಿಮೆದಾರರ, ಮಾರಾಟಗಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಂಗಡಿಗಳಿಗೆ ಎಚ್ಚರಿಕೆ ಜೂ.16ರಿಂದ ಜಾರಿಯಾಗುವಂತೆ ನೋಟಿಸ್ ನೀಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+