ಕರ್ನಾಟಕ ಮುಕ್ತ ವಿವಿಯಲ್ಲಿ ಜನವರಿಯಿಂದ ಪಿಎಚ್.ಡಿ
ಮೈಸೂರು, ನವೆಂಬರ್ 3: ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಕೋರ್ಸ್‌ಗಳಿಗೆ ಯುಜಿಸಿ ಪುನಃ ಮಾನ್ಯತೆ ನೀಡಿದ್ದು, ಪಿಎಚ್.ಡಿ ಅಧ್ಯಯನಕ್ಕೂ ಒಪ್ಪಿಗೆ ಸೂಚಿಸಿದೆ.
ಜನವರಿಯಿಂದ ಈ ಕೋರ್ಸ್ ಆರಂಭಿಸಲು ತೀರ್ಮಾನಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಿಎಚ್ .ಡಿ ಕೋರ್ಸ್ ನಡೆಸಲು ಪಬ್ಲಿಕ್ ನೋಟಿಸ್ ಸಿಕ್ಕಿದೆ, ಇಷ್ಟು ದಿನ ಮುಕ್ತ ವಿವಿಯಲ್ಲಿ ನಡೆದ ಅಕ್ರಮದಿಂದಾಗಿ ಗೊಂದಲದ ಗೂಡಾಗಿತ್ತು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಬೀದಿಪಾಲಾಗುತ್ತಿತ್ತು. ಆದರೆ ಯುಜಿಸಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಮತ್ತೆ ಮಾನ್ಯತೆ ನೀಡಿದೆ.
ಮುಕ್ತ ವಿವಿಯಲ್ಲಿ ಈಗಾಗಲೇ ಮಾರ್ಗದರ್ಶಕರು ಇದ್ದಾರೆ. ಆದರೂ ಗೈಡ್‌ಗಳು ಯಾರ್ಯಾರು ಎಷ್ಟು ಸಂಖ್ಯೆಯಲ್ಲಿ ಇದ್ದಾರೆ ಎಂದು ನೋಡಿಕೊಂಡು ಜನವರಿಯಿಂದ ಕೋರ್ಸ್ ಆರಂಭಿಸಲಾಗುತ್ತದೆ ಎಂದು ಮುಕ್ತ ವಿವಿ ಕುಲಪತಿ ಪ್ರೊ. ಶಿವಲಿಂಗಯ್ಯ ತಿಳಿಸಿದ್ದಾರೆ.

2017ರ ಯುಜಿಸಿ ನಿಯಮಾವಳಿಗೆ ಅನುಗುಣವಾಗಿ ಜುಲೈನಿಂದ ಬಿಎಸ್‌ಸಿ, ಬಿಬಿಎ, ಬಿಎಸ್‌ಡಬ್ಲ್ಯೂ, ಎಂಎಸ್ ಡಬ್ಲ್ಯೂ, ಎಂಎಸ್‌ಸಿ ಪ್ರಾರಂಭಿಸಲು ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.











Click it and Unblock the Notifications