ಕಬಿನಿ ಡ್ಯಾಂ ಬಳಿ 50 ಎಕರೆಯಲ್ಲಿ ಉದ್ಯಾನವನ

ಬೆಂಗಳೂರು, ಜು. 21 : ಕರ್ನಾಟಕ ಸರ್ಕಾರ ಕಬಿನಿ ಜಲಾಶಯದ ಸಮೀಪದಲ್ಲಿ ಕೆಆರ್ ಎಸ್ ಬೃಂದಾವನ ಮಾದರಿಯಲ್ಲಿ ಉದ್ಯಾನವ ನಿರ್ಮಿಸಲಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ. ಭಾನುವಾರ ಪೂರ್ಣ ತುಂಬಿರುವ ಕಬಿನಿ ಜಲಾಶಯಕ್ಕೆ ಭಾಗಿನ ಅರ್ಪಿಸಿ ಅವರು ಮಾತನಾಡುತ್ತಿದ್ದರು.

ಭಾನುವಾರ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಬಳಿಯ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಸಚಿವ ವಿ.ಶ್ರೀನಿವಾಸ ಪ್ರಸಾದ್, ಕೆಆರ್ ಎಸ್ ಜಲಾಶಯದಲ್ಲಿರುವ ಬೃಂದಾವನದ ಮಾದರಿಯಲ್ಲಿ ಕಬಿನಿ ಜಲಾಶಯದ ಸುತ್ತಲೂ 50 ಎಕರೆ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸಿ, ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

Kabini

ಕಬಿನಿ ಜಲಾಶಯ ತುಂಬಿದ ಬಳಿಕ 20,000 ಕ್ಯುಸೆಕ್ ನೀರು ಹೊರಬಿಟ್ಟರೆ ಜಲಾಶಯದ ಮುಂದಿರುವ ಸೇತುವೆ ಮುಳುಗಡೆಯಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿದ ಸಚಿವರು, ಸೇತುವೆ ಎತ್ತರವನ್ನು ಹೆಚ್ಚಿಸುವ ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೊಳ್ಳಲಾಗುತ್ತದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು. [ದಸರಾ ಉದ್ಘಾಟಿಸಲಿದ್ದಾರೆ ಗಿರೀಶ್ ಕಾರ್ನಾಡ್]

ತುಂಬಿದ ಕಬಿನಿ : ಕಬಿನಿ ಜಲಾಶಯ ಕಳೆದ ಗುರುವಾರವೇ ಭರ್ತಿಯಾಗಿತ್ತು. ಗರಿಷ್ಠ ಮಟ್ಟ 2,284 ಅಡಿ ಜಲಾಶಯದಲ್ಲಿ ಅಪಾಯ ಮಟ್ಟ ತಲುಪುವುದನ್ನು ತಪ್ಪಿಸುವ ಸಲುವಾಗಿ 2,281 ಅಡಿಗಳಷ್ಟು ನೀರನ್ನು ಸಂಗ್ರಹಿಸ­ಲಾಗಿದೆ. ಸದ್ಯ ಜಲಾಶಯದಲ್ಲಿ 17 ಟಿಎಂಸಿ ನೀರು ಸಂಗ್ರಹಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+