ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವ ದಸರೆಗೆ ಚಾಲನೆ ನೀಡಲಿದ್ದಾರೆ ಚಿನ್ನದ ಹುಡುಗಿ ಪಿ.ವಿ ಸಿಂಧು

|
Google Oneindia Kannada News

ಮೈಸೂರು, ಸೆಪ್ಟೆಂಬರ್ 6: ಸೆ. 30ರಿಂದ ಅ.8ರವರೆಗೆ ನಡೆಯಲಿರುವ ನಾಡಹಬ್ಬ ದಸರೆಯನ್ನು ಯೂತ್ ಐಕಾನ್ ಬ್ಯಾಡ್ಮಿಂಟನ್ ತಾರೆ ಪಿ. ವಿ ಸಿಂಧು ಉದ್ಘಾಟಿಸಲಿದ್ದಾರೆ. ಅವರು ಅ.1ರಂದು ಮೈಸೂರಿಗೆ ಭೇಟಿ ನೀಡುತ್ತಿದ್ದು, ಕ್ರೀಡಾ ಹಾಗೂ ಯುವ ದಸರಾವನ್ನು ಅವರಿಂದಲೇ ಉದ್ಘಾಟಿಸುವ ಯೋಜನೆ ಇರುವುದಾಗಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಅಂಬಾರಿ ಹೊರುವ ಅರ್ಜುನ ಆನೆಯ ಮಾವುತ, ಕಾವಾಡಿ ಆಯ್ಕೆಯಲ್ಲೂ ರಾಜಕೀಯಅಂಬಾರಿ ಹೊರುವ ಅರ್ಜುನ ಆನೆಯ ಮಾವುತ, ಕಾವಾಡಿ ಆಯ್ಕೆಯಲ್ಲೂ ರಾಜಕೀಯ

ದಸರಾ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, "ದಸರಾ ಉದ್ಘಾಟಿಸಲಿರುವ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಕೃತಿಗಳು ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಪರಿಚಯಿಸುವ ಮಳಿಗೆಯನ್ನು ವಸ್ತು ಪ್ರದರ್ಶನ ಜಾಗದಲ್ಲಿ ತೆರೆಯಬೇಕು. ಮೈಸೂರು ಪಾಕ್, ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ಮೈಸೂರು ರೇಷ್ಮೆ ಒಳಗೊಂಡಂತೆ ಭೌಗೋಳಿಕವಾಗಿ ಮೈಸೂರಿನ ವಿಶೇಷತೆ ಎನಿಸಿರುವ ಎಲ್ಲ ವಸ್ತುಗಳು ಒಂದೇ ಸೂರಿನಡಿ ದೊರೆಯುವಂತಹ ಮಳಿಗೆಗಳನ್ನು ಸ್ಥಾಪಿಸಬೇಕು" ಎಂದರು.

P V Sindhu will inaugurate Yuva and sports Mysuru dassara events

"ಈ ಬಾರಿಯ ದಸರಾ ಸ್ತಬ್ಧಚಿತ್ರಗಳು ದೇಶದ ಸಾಧನೆಯನ್ನು ಬಿಂಬಿಸುವಂತಿರಬೇಕು. ಸರ್ಜಿಕಲ್ ಸ್ಟ್ರೈಕ್, ಚಂದ್ರಯಾನ-2 ಮುಂತಾದ ಸಾಧನೆಗಳನ್ನು ಪ್ರತಿನಿಧಿಸಬೇಕು. ಸ್ತಬ್ಧಚಿತ್ರಗಳ ತಯಾರಿಗೆ ವಿಶೇಷ ಗಮನ ಹರಿಸಬೇಕು. ದೇಶದ ಹಿರಿಮೆ, ಸಾಧನೆ, ಐತಿಹಾಸಿಕ, ಸಾಂಸ್ಕೃತಿಕ ವೈಭವಗಳನ್ನು ಪ್ರತಿಬಿಂಬಿಸುವಂತಹ ಸ್ತಬ್ಧಚಿತ್ರಗಳು ಇರಬೇಕು. ಜಂಬೂ ಸವಾರಿ ವೇಳೆ ದಸರಾ ಅಂಬಾರಿ ಸುತ್ತಮುತ್ತ ಯಾರೂ ಸುಳಿದಾಡದಂತೆ ವಿಶೇಷ ನಿಗಾವಹಿಸಬೇಕು" ಎಂದು ಶಾಸಕ ಎಸ್.ಎ.ರಾಮದಾಸ್ ಸಲಹೆ ನೀಡಿದರು.

P V Sindhu will inaugurate Yuva and sports Mysuru dassara events

"ದಸರಾ ಉತ್ಸವದ ಒಂದು ದಿನ ಅರಮನೆ ಮುಂಭಾಗದಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸ್ಥಳೀಯ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಕೆಲ ವರ್ಷಗಳ ಹಿಂದೆ ಇಂತಹ ಕಾರ್ಯ ಕ್ರಮ ಆಯೋಜಿಸಲಾಗಿತ್ತು" ಎಂದರು. "ಈ ಕಾರ್ಯಕ್ರಮ ರಾಮದಾಸ್ ಅವರ ನೇತೃತ್ವದಲ್ಲಿ ನಡೆಯಲಿದೆ. ಸಂಬಂಧಪಟ್ಟ ಅಧಿಕಾರಿಗಳು ಸಹಕರಿಸಬೇಕು" ಎಂದರು ಸೋಮಣ್ಣ.

ಗ್ರಾಮೀಣ ದಸರಾ ಹೆಸರಿನಲ್ಲಿ ಕೆಎಸ್ ಆರ್ ಟಿಸಿ ಬಸ್‍ನಲ್ಲಿ ವಿವಿಧ ಜಿಲ್ಲೆಯ ಜನರನ್ನು ಕರೆ ತರುವ ವೇಳೆ ಮೃಗಾಲಯ ಮತ್ತು ಕುಡಿಯುವ ನೀರಿನ ವೆಚ್ಚಕ್ಕಾಗಿ ಪ್ರತಿಯೊಬ್ಬರಿಂದ 50 ಪಡೆಯಲಾಗುತ್ತಿತ್ತು. ಈ ಬಾರಿ ಯಾರಿಂದಲೂ ಹಣ ಪಡೆಯಬಾರದು, ಇದಕ್ಕೆ ಅಗತ್ಯವಿರುವ 5.40 ಲಕ್ಷ ಮೊತ್ತವನ್ನು ತಾವೇ ಭರಿಸುತ್ತೇವೆ ಎಂದು ತಿಳಿಸಿದರು.

 ಪ್ಲಾಸ್ಟಿಕ್ ಮುಕ್ತ ದಸರಾ ಆಚರಣೆಗೆ ಈ ಬಾರಿ ಮೈಸೂರಲ್ಲಿ ಭರ್ಜರಿ ತಯಾರಿ ಪ್ಲಾಸ್ಟಿಕ್ ಮುಕ್ತ ದಸರಾ ಆಚರಣೆಗೆ ಈ ಬಾರಿ ಮೈಸೂರಲ್ಲಿ ಭರ್ಜರಿ ತಯಾರಿ

"ದಸರಾ ವಿದ್ಯುದ್ದೀಪಾಲಂಕಾರ ತುಂಬಾ ಚೆನ್ನಾಗಿರಬೇಕು, ಜಾತ್ರೆ, ಹಬ್ಬಗಳಲ್ಲಿ ಹಾಕುವಂತೆ ಬಜಾರ್ ಮಾಡದಿರಿ. ಮೈಸೂರು ಸಂಪರ್ಕಿಸುವ ಐದು ಪ್ರಮುಖ ರಸ್ತೆಗಳಲ್ಲಿ ಸ್ವಾಗತ ಕಮಾನು ಮಾಡಿ ವಿಶೇಷ ವಿದ್ಯುದ್ದೀಪಾಲಂಕಾರ ಮಾಡಿ" ಎಂದು ಚೆಸ್ಕಾಂ ಅಧಿಕಾರಿಗಳಿಗೆ ಸಲಹೆ ನೀಡಿದರು.

English summary
Golden girl P V Sindhu inaugurate Yuva and sports Mysuru dassara events at October 1st. This decision taken at Dassara meeting led by MP pratap simha and Minister V Somanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X