ಭೋರ್ಗರೆವ ಕಪಿಲಾ ನದಿಯಲ್ಲಿ ಈಜಲು ಹೋಗಿ ಯುವಕ ಸಾವು
ಮೈಸೂರು, ಜುಲೈ.13: ನಂಜನಗೂಡಿನ ಹತ್ತಿರ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಮೂವರು ಯುವಕರು ನದಿಯಲ್ಲಿ ಈಜುವ ದುಸ್ಸಾಹಸಕ್ಕೆ ಇಳಿದಿದ್ದರು. ಆದರೆ ಇದೀಗ ಅವರಲ್ಲಿ ಒಬ್ಬ ಯುವಕ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಎಚ್.ಡಿ.ಕೋಟೆ ತಾಲೂಕಿನ ಮಾದಾಪುರ ಸೇತುವೆ ಬಳಿ ಇಂದು ಶುಕ್ರವಾರ ಹರಿಯುತ್ತಿರುವ ನೀರಿಗೆ ಸೇತುವೆ ಮೇಲಿನಿಂದ ಮೂವರು ಈಜಲು ಬಿದ್ದರು. ಆದರೆ ಇವರಲ್ಲಿ ಉಮೇಶ್ (24) ಎಂಬಾತ ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾನೆ.
ಜೊತೆಯಲ್ಲಿದ್ದ ಚಿಕ್ಕನಾಯ್ಕ, ಸುರೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಉಮೇಶ್ ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಭೋರ್ಗರೆದು ಹರಿಯುತ್ತಿರುವ ನೀರಿನಲ್ಲಿ ಪ್ರಾಣಾಪಾಯ ಲೆಕ್ಕಿಸದೇ ಯುವಕ ಈಜಲು ಇಳಿದು ಇಂತಹ ಪರಿಸ್ಥಿತಿ ತಂದುಕೊಂಡಿದ್ದಾನೆ.

ಜಲಾಶಯ ತುಂಬಿದ್ದ ಪರಿಣಾಮ ಕಪಿಲಾ ನದಿಗೆ ಹೆಚ್ಚುವರಿಯಾಗಿ 50 ಸಾವಿರ ಕ್ಯೂಸೆಕ್ ನೀರು ಬಿಡಲಾಗಿತ್ತು.
ಎಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬುಧವಾರ ಇದೇ ರೀತಿ ಕಪಿಲಾ ನದಿಯಲ್ಲಿ ಈಜಲು ತೆರಳಿದ್ದ ಓರ್ವ ಯುವಕ ಜಲಸಮಾಧಿಯಾಗಿದ್ದ. ಇಂತಹ ಅವಘಡಗಳು ಸಂಭವಿಸುತ್ತಿದ್ದರೂ, ಯುವ ಜನತೆ ಎಚ್ಚರಗೊಳ್ಳದೆ, ಕೇವಲ ಕ್ರೇಜ್ ಗಾಗಿ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿರುವುದು ಮಾತ್ರ ದುರಂತ.












Click it and Unblock the Notifications